ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರಿನ ಹೆಮ್ಮೆಯ ಪುತ್ರನಿಗೆ ‘ಸೇನಾ ಮೆಡಲ್’ ಗೌರವ

ಭಾರತೀಯ ಸೇನೆಯಲ್ಲಿ ಕಾಶ್ಮೀರದಲ್ಲಿ ಸೇವೆ ಸಲ್ಲಿಸುತ್ತಿರುವ ನಾಯ್ಕ್ ಎಂ. ಸಾದಿಕ್ ಶೌರ್ಯ ಸಾಧನೆಗೆ ಸೇನೆಯ ಗೌರವ
Last Updated 25 ಜನವರಿ 2019, 17:13 IST
ಅಕ್ಷರ ಗಾತ್ರ

ತುಮಕೂರು: ಸೇನೆಯಲ್ಲಿ ಭಯೋತ್ಪಾದಕರ ವಿರುದ್ಧ ಹೋರಾಟ ನಡೆಸುತ್ತ ಅಸಾಧಾರಾಣ ಶೌರ್ಯ ಮೆರೆಯುತ್ತಿರುವತುಮಕೂರಿನ ಹೆಮ್ಮೆಯ ಪುತ್ರ ನಾಯ್ಕ್ ಎಂ. ಸಾದಿಕ್ ಅವರಿಗೆ ಭಾರತೀಯ ಸೇನೆ ‘ಸೇನಾ ಮೆಡಲ್’ ಪ್ರಶಸ್ತಿಯನ್ನು (ಶೌರ್ಯ ಸಾಧನೆಗೆ ನೀಡುವ ಪ್ರಶಸ್ತಿ) ಶುಕ್ರವಾರ ಘೋಷಣೆ ಮಾಡಿದೆ.

ಶನಿವಾರ ಅವರು ತಾವು ಸೇವೆ ಸಲ್ಲಿಸುತ್ತಿರುವ ಕಾಶ್ಮೀರದ ಸೇನಾ ಕ್ಯಾಂಪ್‌ನಲ್ಲಿಯೇ ಅವರಿಗೆ ‘ಸೇನಾ ಮೆಡಲ್‌’ ಪ್ರದಾನ ಮಾಡಲಾಗುತ್ತಿದೆ.

ನಾಯ್ಕ್ ಎಂ. ಸಾದಿಕ್ ಅವರು 2004 ಜುಲೈ 21ರಂದು ಭಾರತೀಯ ಸೇನೆ ಸೇರಿದರು. 8 ವರ್ಷ ಜಮ್ಮು ಮತ್ತು ಕಾಶ್ಮೀರದಲ್ಲಿ, 1 ವರ್ಷ ದಕ್ಷಿಣ ಆಫ್ರಿಕಾದಲ್ಲಿ ವಿಶ್ವ ಶಾಂತಿ ಪಡೆಯಲ್ಲಿ, 2 ವರ್ಷ ರಾಷ್ಟ್ರೀಯ ಭದ್ರತಾ ಪಡೆ(ಎನ್ಎಸ್‌ಜಿ)ಯಲ್ಲಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಕಾಶ್ಮೀರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

‘ಸೇನಾ ಮೆಡಲ್’ ಎಂಬುದು ಎಲ್ಲರಿಗೂ ಸಿಗುವ ಗೌರವ ಅಲ್ಲ. ಅಂತಹ ಗೌರವಕ್ಕೆ ಪಾತ್ರನಾಗಿರುವುದು ಹೆಮ್ಮೆ ತರುತ್ತದೆ.ಯಾವುದೇ, ಪ್ರಶಸ್ತಿ, ಬಹುಮಾನ ನಿರೀಕ್ಷೆಯಿಂದ ನಾವು ಸೇವೆ ಮಾಡುವುದಿಲ್ಲ. ದೇಶಕ್ಕಾಗಿ ಹೋರಾಟ ಮಾಡುತ್ತೇವೆ. ಅದನ್ನು ಗುರುತಿಸಿ ಪ್ರಶಸ್ತಿ ನೀಡಲಾಗಿದೆ ಎಂದು ಎಂದು ನಾಯ್ಕ್ ಎಂ. ಸಾದಿಕ್ ‘ಪ್ರಜಾವಾಣಿ’ಗೆ ತಿಳಿಸಿದರು.

ಈ ಗೌರವ ನಮ್ಮ ಜಿಲ್ಲೆ, ನಮ್ಮ ನಾಡಿಗೆ ಸಂದ ಗೌರವ ಎಂದು ಭಾವಿಸುತ್ತೇನೆ. ಸೇನೆ ಸೇರಬೇಕು ಎಂಬ ಉತ್ಕಟ ಬಯಕೆಇತ್ತು. ಹಾಗೆಯೇ ಸೇನೆ ಸೇರಿದೆ. ಭಯೋತ್ಪಾದಕರ ವಿರುದ್ಧ ಉದ್ದಕ್ಕೂ ಕ್ಲಿಷ್ಟಕರ ಸನ್ನಿವೇಶಗಳಲ್ಲಿ ಹೋರಾಟ ಮಾಡಿದ್ದೇನೆ’ ‘ಸೇನೆಯಲ್ಲಿ ನಾನು ಮಾಡಿದ, ಮಾಡುತ್ತಿರುವ ಹೋರಾಟ ಗುರುತಿಸಿ ಶೌರ್ಯ ಸಾಧನೆಗೆ ನೀಡುವ ಸೇನಾ ಮೆಡಲ್ ಗೌರವ ಪ್ರದಾನ ಮಾಡಲಾಗುತ್ತಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT