ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾವಗಡ: ಅನಧಿಕೃತ ಮಾಂಸದ ಅಂಗಡಿ ಮೇಲೆ ದಾಳಿ

Published 2 ಏಪ್ರಿಲ್ 2024, 15:08 IST
Last Updated 2 ಏಪ್ರಿಲ್ 2024, 15:08 IST
ಅಕ್ಷರ ಗಾತ್ರ

ಪಾವಗಡ: ಪಟ್ಟಣದ ಶಿರಾ ರಸ್ತೆ, ಪೆನುಗೊಂಡ ರಸ್ತೆಯಲ್ಲಿ ಅನಧಿಕೃತವಾಗಿ ಕುರಿ, ಮೇಕೆ ಮಾಂಸ ಮಾರಾಟ ಮಾಡುತ್ತಿದ್ದ ಅಂಗಡಿಗಳನ್ನು ಪುರಸಭೆ ಅಧಿಕಾರಿಗಳು ಮಂಗಳವಾರ ಮುಚ್ಚಿಸಿದರು.

ಶಿರಾ ರಸ್ತೆ, ಪೆನುಗೊಂಡ ರಸ್ತೆಯಲ್ಲಿದ್ದ ಸುಮಾರು ಐದು ಕುರಿ, ಮೇಕೆ ಮಾಂಸದ ಅಂಗಡಿ ಮೇಲೆ ಮುಖ್ಯಾಧಿಕಾರಿ ಷಂಷುದ್ದಹ ನೇತೃತ್ವದಲ್ಲಿ ಸಿಬ್ಬಂದಿ ದಾಳಿ ನಡೆಸಿ ಅಂಗಡಿ ಬಾಗಿಲು ಮುಚ್ಚಿಸಿದರು.

ಪೆನುಗೊಂಡ ಕೋಟೆ ಬಾಗಿಲ ಬಳಿ ಪುರಸಭೆ ಮಳಿಗೆ ನಿರ್ಮಿಸಿ ವ್ಯಾಪಾರಿಗಳಿಗೆ ಹರಾಜು ಮೂಲಕ ಬಾಡಿಗೆಗೆ ನೀಡಿದೆ. ಆದರೆ ನಿಗದಿತ ಸ್ಥಳದಲ್ಲಿ ವ್ಯಾಪಾರ ನಡೆಸದೆ ಪಟ್ಟಣದ ವಿವಿಧೆಡೆ ಪುರಸಭೆ ನಿಯಮಾವಳಿ ಗಾಳಿಗೆ ತೂರಿ ವ್ಯಾಪಾರ ನಡೆಸಲಾಗುತ್ತಿತ್ತು.

ಈ ಬಗ್ಗೆ ಅಧಿಕಾರಿಗಳು ಹಲವು ಬಾರಿ ತೆರವುಗೊಳಿಸುವಂತೆ ತಿಳಿಸಿದರೂ ಪ್ರಯೋಜನವಾಗಿರಲಿಲ್ಲ. ಮಂಗಳವಾರ ಏಕಾಏಕಿ ದಾಳಿ ನಡೆಸಿ ಅಂಗಡಿ ಬಾಗಿಲುಗಳನ್ನು ಮುಚ್ಚಿಸಿದರು.

ಪುರಸಭೆ ನಿಯಮಾವಳಿ ಪಾಲಿಸದೆ ಸಾರ್ವಜನಿಕರಿಗೆ ತೊಂದರೆಯಾಗುವಂತೆ ಬೇಕಾ ಬಿಟ್ಟಿ ವ್ಯಾಪಾರ ನಡೆಸುತ್ತಿರುವ ಬಗ್ಗೆ ಪೊಲೀಸ್ ಠಾಣೆಗೆ ಮುಖ್ಯಾಧಿಕಾರಿ ದೂರು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT