ತುಮಕೂರು: ವಿದ್ಯುತ್ ಪರಿವರ್ತಕ ಬದಲಾವಣೆಗಾಗಿ ಹಣಕ್ಕೆ ಬೇಡಿಕೆ ಇಟ್ಟು ಎಸಿಬಿ ಬಲೆಗೆ ಬಿದ್ದಿದ್ದ ಗುಬ್ಬಿ ಬೆಸ್ಕಾಂ ಜೂನಿಯರ್ ಎಂಜಿನಿಯರ್ ರವೀಶ್‌ಗೆ ಜಿಲ್ಲಾ 7ನೇ ಸೆಷನ್ಸ್ ನ್ಯಾಯಾಲಯವು 4 ವರ್ಷಗಳ ಕಠಿಣ ಶಿಕ್ಷೆ ಮತ್ತು ₹ 10,000 ದಂಡ ವಿಧಿಸಿದೆ.

ರೈತ ಯಶವಂತ್ ಅವರ ಜಮೀನಿನ 2016ರಲ್ಲಿ ವಿದ್ಯುತ್ ಪರಿವರ್ತಕ ದುರಸ್ತಿಗೆ ಬಂದಿತ್ತು. ಪರಿವರ್ತಕ ಬದಲಿಸಿಕೊಡುವಂತೆ ಅವರು ಅರ್ಜಿ ಸಲ್ಲಿಸಿದ್ದರು. ಆಗ ರವೀಶ್ ಹಣ ನೀಡಿದರೆ ಪರಿವರ್ತಕ ಬದಲಿಸಿಕೊಡುವುದಾಗಿ ಹೇಳಿದ್ದರು. ಈ ಸಂಬಂಧ ಯಶವಂತ್ ಎಸಿಬಿಗೆ ದೂರು ನೀಡಿದ್ದು, ರೈತರಿಂದ ಹಣ ಪಡೆಯುವಾಗ ರವೀಶ್‌ನನ್ನು ಅಧಿಕಾರಿಗಳು ಬಂಧಿಸಿದ್ದರು.

ಇನ್‌ಸ್ಪೆಕ್ಟರ್ ವಿ.ಎಂ.ಗುರುಪ್ರಸಾದ್ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಧೀಶರಾದ ಎಸ್.ಸುಧೀಂದ್ರನಾಥ್ ಈ ತೀರ್ಪು ನೀಡಿದ್ದು ಸರ್ಕಾರದ ಪರವಾಗಿ ಎನ್.ಬಿ.ಬಸವರಾಜು ವಾದ ಮಂಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.