ತುಮಕೂರು: ‘ಶಾಲಾ ಶಿಕ್ಷಣದಲ್ಲಿ ಭಗವದ್ಗೀತೆ ಬೋಧನೆ ಸೇರಿಸಬೇಕು’ ಎಂಬ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆಯನ್ನು ಭಾರತ ಕಮ್ಯುನಿಸ್ಟ್ ಪಕ್ಷ (ಸಿಪಿಎಂ) ಖಂಡಿಸಿದೆ. ಭಗವದ್ಗೀತೆ ಬೋಧನೆಗೆ ಆಕ್ಷೇಪ ವ್ಯಕ್ತಪಡಿಸಿದೆ.

‘ಸಚಿವರು ರಾಜ್ಯಕ್ಕೆ ಸಿಗಬೇಕಾದ ಸಂಪನ್ಮೂಲ, ಅಭಿವೃದ್ಧಿಯ ಪ್ರಶ್ನೆಗಳತ್ತ ಗಮನ ಹರಿಸಬೇಕು. ಧಾರ್ಮಿಕ ಭಾವನೆಗಳನ್ನು ರಾಜಕೀಯವಾಗಿ ಬಳಸಬಾರದು’ ಎಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ, ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಬಿ.ಉಮೇಶ್, ನಗರ ಕಾರ್ಯದರ್ಶಿ ಎ.ಲೋಕೇಶ್ ತಿಳಿಸಿದ್ದಾರೆ.

ಸಚಿವರು ಪ್ರಸ್ತಾಪಿಸಿದಂತೆ ಭಗವದ್ಗೀತೆ ಭಾರತೀಯ ಸಂಸ್ಕೃತಿಯ ಪ್ರತೀಕ, ಕಾಲಾತೀತವಲ್ಲ. ಭಾರತೀಯ ಸಂಸ್ಕೃತಿ ಬಹು ನಂಬಿಕೆ, ಆಚಾರ–ವಿಚಾರಗಳ ವೈವಿಧ್ಯತೆ, ಸಮಭಾವದಿಂದ ಕೂಡಿದೆ. ಸೌಹಾರ್ದತೆಯಿಂದ ಬದುಕಿ ಬಾಳುವುದು ನಾಡಿನ ಪರಂಪರೆ. ಒಂದು ವಿಭಾಗದ ಧಾರ್ಮಿಕ ನಂಬಿಕೆಗಳನ್ನು ರಾಷ್ಟ್ರದ ಸಂಸ್ಕೃತಿ ಎಂದು ನಂಬಿಸುವುದು ಅಸಂಬದ್ಧ ಹಾಗೂ ಅವೈಜ್ಞಾನಿಕ. ಇದು ವಿಭಜಕ ಕ್ರಮ ಎಂದು ಟೀಕಿಸಿದ್ದಾರೆ.

ಎಲ್ಲ ಜನಾಂಗ, ಧರ್ಮದ ಮಕ್ಕಳು ಶಾಲೆಯಲ್ಲಿ ಕಲಿಯುತ್ತಿದ್ದಾರೆ. ಮಕ್ಕಳಲ್ಲಿ ವೈಚಾರಿಕತೆ ದುರ್ಬಲಗೊಳಿಸುವ ಪ್ರಯತ್ನಗಳ ವಿರುದ್ಧ ರಾಜ್ಯದ ಜನತೆ ಜಾಗೃತಿ ವಹಿಸಬೇಕು ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.