ಗುರುವಾರ, 10 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿ.ವಿ ಕ್ಯಾಂಪಸ್‌ನಲ್ಲಿ ಜೀವವೈವಿಧ್ಯ ಅಭಯಾರಣ್ಯ

ವಿಪ್ರೊ ಸಂಸ್ಥೆಯ ಅಧಿಕಾರಿಗಳಿಂದ ಪರಿಶೀಲನೆ
Published : 19 ಸೆಪ್ಟೆಂಬರ್ 2024, 7:09 IST
Last Updated : 19 ಸೆಪ್ಟೆಂಬರ್ 2024, 7:09 IST
ಫಾಲೋ ಮಾಡಿ
Comments

ತುಮಕೂರು: ವಿಶ್ವವಿದ್ಯಾಲಯದ ಬಿದರೆಕಟ್ಟೆ ಕ್ಯಾಂಪಸ್‍ನ 15 ಎಕರೆ ವಿಸ್ತೀರ್ಣದಲ್ಲಿ ವಿಪ್ರೊ ಸಂಸ್ಥೆ ಸಹಯೋಗದಲ್ಲಿ ಜೀವವೈವಿಧ್ಯ ಅಭಯಾರಣ್ಯ ನಿರ್ಮಾಣವಾಗುತ್ತಿದ್ದು, ಸಂಸ್ಥೆಯ ಅಧಿಕಾರಿಗಳು ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

‘ಸ್ಥಳೀಯ ಸಸ್ಯ ಪ್ರಭೇದ ಸಂರಕ್ಷಿಸಲು, ಅರಣ್ಯ ಪರಿಸರ ವ್ಯವಸ್ಥೆಯನ್ನು ಉತ್ತೇಜಿಸಲು ವಿಪ್ರೊ ಮುಂದಾಗಿದೆ. ಮೂರು ವರ್ಷದಲ್ಲಿ 3 ಸಾವಿರಕ್ಕೂ ಹೆಚ್ಚು ಸ್ಥಳೀಯ ಸಸ್ಯ ಪ್ರಭೇದಗಳನ್ನು ಅವುಗಳ ನೈಸರ್ಗಿಕ ವ್ಯವಸ್ಥೆಗೆ ಅಪಾಯವಾಗದಂತೆ ಬೆಳೆಸಲಾಗುತ್ತದೆ. ಸಂಶೋಧನಾ ಉದ್ದೇಶಕ್ಕೆ ಸುಲಭವಾಗಿ ಲಭ್ಯವಾಗುವಂತೆ ಮಾಡುವುದು ಇದರ ಉದ್ದೇಶ’ ಎಂದು ವಿಪ್ರೊ ಸಂಸ್ಥೆ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ವಿನೀತ್ ಅಗರವಾಲ್‌ ಹೇಳಿದರು.

ವಿ.ವಿ ಕುಲಸಚಿವೆ ನಾಹಿದಾ ಜಮ್‌ ಜಮ್‌, ಪ್ರಾಧ್ಯಾಪಕರಾದ ಕೆ.ಜಿ.ಪರಶುರಾಮ, ಬಿ.ಕೆ.ಸುರೇಶ್, ಮೋಹನ್‍ರಾಮ್, ವಿಪ್ರೊ ಸಂಸ್ಥೆ ಉಪಾಧ್ಯಕ್ಷ ವಿಶ್ವನಾಥ್‌ ಕಾರ್ಕಡ, ಹಿರಿಯ ಕಾರ್ಯಕ್ರಮ ವ್ಯವಸ್ಥಾಪಕ ಬಿ.ಸಿ.ಪ್ರವೀಣ್, ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಎಸ್‌.ಹನುಮಂತರಾಯಪ್ಪ, ಸಂಸ್ಥೆಯ ಎಂ.ವಿನಯ್‌, ಸಂಪತ್‌ಕುಮಾರ್, ಎಸ್‌.ಆರ್‌.ಈಶ್ವರಪ್ಪ, ದಯಾನಂದ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT