ತುಮಕೂರು: ಪ್ರೊ.ಬಿ.ಕೃಷ್ಣಪ್ಪ ಗುಡಿಸಲುಗಳಲ್ಲಿ ಹೋರಾಟದ ಹಣತೆ ಹಚ್ಚಿದವರು ಎಂದು ಸ್ಲಂ ಸಮಿತಿ ಅಧ್ಯಕ್ಷ ಎ.ನರಸಿಂಹಮೂರ್ತಿ ಹೇಳಿದರು.

ನಗರದಲ್ಲಿ ಸೋಮವಾರ ಸ್ಲಂ ಜನಾಂದೋಲನ ಕರ್ನಾಟಕ, ಜಿಲ್ಲಾ ಕೊಳೆಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿಯಿಂದ ಹಮ್ಮಿಕೊಂಡಿದ್ದ ಪ್ರೊ.ಬಿ.ಕೃಷ್ಣಪ್ಪ ಅವರ 87ನೇ ವರ್ಷದ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ದಲಿತ ಚಳವಳಿ ಹುಟ್ಟು ಹಾಕುವಲ್ಲಿ ಕೃಷ್ಣಪ್ಪ ಶ್ರಮಿಸಿದ್ದರು. ಬಿ.ಆರ್.ಅಂಬೇಡ್ಕರ್ ಚಳವಳಿಯ ನೊಗ ಹೊತ್ತು, ಚಳವಳಿಯನ್ನು ಪ್ರತಿ ಮನೆಗೆ ತಲುಪಿಸಿದರು. ದೇವದಾಸಿ ಪದ್ಧತಿ, ಬೆತ್ತಲೆ ಸೇವೆ, ಅಸ್ಪೃಶ್ಯತೆ, ಸಾಮಾಜಿಕ ಅಸಮಾನತೆ ಅಟ್ಟಹಾಸ ಮೆರೆಯುತ್ತಿದ್ದ ಸಮಯದಲ್ಲಿ ಹೋರಾಟ ಕಟ್ಟಿದರು ಎಂದರು.

ಸ್ಲಂ ಸಮಿತಿ ಪದಾಧಿಕಾರಿಗಳಾದ ಅರುಣ್, ಶಂಕ್ರಯ್ಯ, ಕಣ್ಣನ್, ಕೃಷ್ಣಮೂರ್ತಿ, ಜಾಬೀರ್ ಖಾನ್, ತಿರುಮಲಯ್ಯ, ಕೆಂಪಣ್ಣ, ದೊಡ್ಡರಂಗಯ್ಯ, ಶಾರದಮ್ಮ, ಮಂಗಳಮ್ಮ, ಪೂರ್ಣಿಮಾ, ವಸಂತಮ್ಮ, ಸಂಧ್ಯಾ, ಹನುಮಕ್ಕ, ರತ್ನಮ್ಮ, ಲಕ್ಷ್ಮಮ್ಮ, ಶಂಕರೇಗೌಡ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.