ತುರುವೇಕೆರೆ: ‘ಸಚಿವರಾಗಲು ಮತ ನೀಡಿದ ಕ್ಷೇತ್ರದ ಜನ, ಜಿಲ್ಲೆಯ ರೈತರ ಹಿತ ಬಲಿಕೊಡುವ ಅಗತ್ಯವಿತ್ತೇ? ಸರ್ಕಾರದ ಪರ ವಕಾಲತ್ತು ವಹಿಸಿರುವ ಗೃಹ ಸಚಿವ ಜಿ.ಪರಮೇಶ್ವರ ನಡೆ ಖಂಡನೀಯ’ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಬೇಸರ ವ್ಯಕ್ತಪಡಿಸಿದರು.

ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಗೃಹ ಸಚಿವರ ಹೇಳಿಕೆಯಿಂದ ಜಿಲ್ಲೆಯ ಜನತೆಗೆ ನೋವಾಗಿದೆ. ಈ ಕಾಮಗಾರಿಗೆ ಸರ್ಕಾರ ಅನುಮೋದನೆ ನೀಡಿದೆ ಎಂಬ ಹೇಳಿಕೆಯನ್ನು ನಿರೀಕ್ಷಿಸಿರಲಿಲ್ಲ. ಲಿಂಕ್ ಕೆನಾಲ್ ಕಾಮಗಾರಿ ಮಾಡದಂತೆ ಸರ್ಕಾರದ ಜೊತೆ ಚರ್ಚಿಸಿ ಹೋರಾಟಗಾರರಿಗೆ ಬೆಂಬಲವಾಗುತ್ತಾರೆ ಎಂಬ ವಿಚಾರ ಹುಸಿಯಾಗಿದೆ’ ಎಂದು ಅಸಮಧಾನ ವ್ಯಕ್ತಪಡಿಸಿದರು.

ಜಿಲ್ಲೆಯ ರೈತರ ಪರವಾಗಿ ಹೋರಾಟ ಮಾಡುತ್ತಿದ್ದ ಹೇಮಾವತಿ ಲಿಂಕ್ ಕೆನಾಲ್ ವಿರೋಧಿ ಹೋರಾಟಗಾರರು, ಸ್ವಾಮೀಜಿಗಳು, ಶಾಸಕರು, ಮುಖಂಡರು ಮತ್ತು ರೈತರ ಮೇಲೆ ಕೇಸ್ ಹಾಕಿಸುವ ಮೂಲಕ ಸರ್ಕಾರ ಹೋರಾಟಗಾರರ ಜಾಥಾವನ್ನು ಹತ್ತಿಕ್ಕುವ ಕೆಲಸಕ್ಕೆ ಮುಂದಾಗಿದೆ ಎಂದರು.

ಈ ಹಿಂದೆ ಲಿಂಕ್ ಕೆನಾಲ್ ವಿರೋಧಿಸಿ ಹಲವು ಬಾರಿ ಹೋರಾಟ ಮಾಡಿ ಕಾಮಗಾರಿ ನಿಲ್ಲಿಸಿದ್ದೆವು. ಆದರೆ, ಸರ್ಕಾರ ಮತ್ತೆ ಕೆಲಸ ಪ್ರಾರಂಭಿಸಿದ ಕಾರಣ ಸರ್ಕಾರದ ಕ್ರಮದ ವಿರುದ್ಧ ಬೃಹತ್ ಹೋರಾಟ ಮಾಡಿದೆವು. ಮತ್ತೆ ಕಾಮಗಾರಿ ಪ್ರಾರಂಭಿಸಿದರೆ ಒಂದು ಲಕ್ಷಕ್ಕೂ ಹೆಚ್ಚು ಜನರನ್ನು ಸೇರಿಸಿ ಮತ್ತೆ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಗೋಷ್ಠಿಯಲ್ಲಿ ಪಟ್ಟಣ ಪಂಚಾಯಿತಿ ಮಾಜಿ ಮಾಜಿ ಸದಸ್ಯ ವಿಜಯೇಂದ್ರ, ಜೆಡಿಎಸ್ ವಕ್ತಾರ ವೆಂಕಟಾಪುರ ಯೋಗೀಶ್, ಭುವನಹಳ್ಳಿ ದೇವರಾಜ್, ಮುಖಂಡರಾದ ಕಾಂತರಾಜು, ಹೊನ್ನೇನಳ್ಳಿ ಕೃಷ್ಣಪ್ಪ, ಶಶಿಧರ್, ಬೋರೇಗೌಡ, ಇಂದ್ರಕುಮಾರ್, ದೇವರಾಜ್, ವೀರಣ್ಣನಗುಡಿರಾಮು, ರಾಘವೇಂದ್ರ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.