ಚಿಕ್ಕನಾಯಕನಹಳ್ಳಿ: ಪಟ್ಟಣದ ಉಪನೊಂದಣಾಧಿಕಾರಿ ಕಚೇರಿಯಲ್ಲಿ ಸೋಮವಾರ ಕಾವೇರಿ 2.0 ಆನ್‍ಲೈನ್ ತಂತ್ರಾಂಶಕ್ಕೆ ಚಾಲನೆ ನೀಡಲಾಯಿತು.
ಜಿಲ್ಲಾ ನೋಂದಣಾಧಿಕಾರಿ ಬಿ.ಎಲ್. ಶಶಿಕಲಾ ತಂತ್ರಾಂಶ ಉದ್ಘಾಟಿಸಿ, ‘ನೋಂದಣಿ ಇನ್ನುಮುಂದೆ ವೇಗ ಪಡೆಯಲಿದೆ. ಉಪನೋಂದಣಾಧಿಕಾರಿ ಲಾಗಿನ್ ಆದ ತಕ್ಷಣ ನೋಂದಣಿಗಳು ಕಾವೇರಿ 2 ಆನ್‌ಲೈನ್ ತಂತ್ರಾಂಶದಲ್ಲಿ ದಾಖಲಾಗುತ್ತದೆ. ನೋಂದಣಿಗಾರರ ಸಮಯ ಉಳಿತಾಯದ ಜತೆಗೆ ಕಚೇರಿಯ ಒತ್ತಡ ಕಮ್ಮಿಯಾಗಲಿದೆ’ ಎಂದರು.
ಉಪ ನೊಂದಣಾಧಿಕಾರಿ ಎಚ್.ಆರ್.ಯತೀಶ್, ಕಚೇರಿ ಸಿಬ್ಬಂದಿ, ಕಂಪ್ಯೂಟರ್ ಆಪರೇಟರ್‌ಗಳು, ಲಕ್ಷ್ಮಿನರಸಿಂಹಯ್ಯ, ಯೋಗೀಶ್, ತರಬೇನಹಳ್ಳಿ ಪ್ರಭು ಇದ್ದರು.