ಸೋಮವಾರ, ಏಪ್ರಿಲ್ 12, 2021
23 °C

ಸಿ.ಡಿ. ಬರಲಿ, ಯಾರು ಯಾವ ಪಾತ್ರ ಮಾಡಿದ್ದಾರೋ ನೋಡೋಣ: ಟಿ.ಬಿ.ಜಯಚಂದ್ರ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ‘ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕುರಿತಾದ ಸಿ.ಡಿ. ಇದೆ ಎಂದು ಪತ್ರಿಕೆಗಳಲ್ಲಿ ಸುದ್ದಿ ಬರುತ್ತಿದೆ. ಬಸನಗೌಡ ಪಾಟೀಲ ಯತ್ನಾಳ್ ಅವರು ನನ್ನ ಬಳಿ ಸಿ.ಡಿ. ಇದ್ದಿದ್ದರೆ ಉಪಮುಖ್ಯಮಂತ್ರಿ ಆಗುತ್ತಿದ್ದೆ ಎಂದಿದ್ದಾರೆ. ಇಷ್ಟು ಬಹಿರಂಗವಾಗಿ ಮಾತನಾಡಿದ ಮೇಲೆ ಸಿ.ಡಿ. ಹೊರ ಬಂದೇ ಬರುತ್ತದೆ ಎಂದು ಕಾಂಗ್ರೆಸ್ ಮುಖಂಡ ಟಿ.ಬಿ. ಜಯಚಂದ್ರ ತಿಳಿಸಿದರು. 

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಯಾರ ಬಳಿ ಇಲ್ಲ ಎಂದರೂ ನಮ್ಮ ಸ್ನೇಹಿತ ಎಚ್‌. ವಿಶ್ವನಾಥ್ ಬಳಿ ಸಿ.ಡಿ. ಇದ್ದೇ ಇರುತ್ತದೆ. ಅದರಲ್ಲಿ ಏನಿದೆ, ಯಾರು ಯಾವ ಪಾತ್ರ ಮಾಡಿದ್ದಾರೆ ಎನ್ನುವುದನ್ನು ಆ ಮೇಲೆ ನೋಡೋಣ’ ಎಂದು ಕಾಲೆಳೆದರು.

ಬಿಜೆಪಿ ಮುಖಂಡರೇ ಸಿ.ಡಿ. ವಿಚಾರವಾಗಿ ಇಷ್ಟೊಂದು ನೇರವಾಗಿ ಹೇಳುತ್ತಿದ್ದಾರೆ ಎಂದರೆ ಇದರಲ್ಲಿ ಏನೋ ಇದೆ. ಈಗ ಇದೆಲ್ಲವೂ ಹೊರಗೆ ಬರಲು ಆರಂಭವಾಗಿದೆ’ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು