ತುಮಕೂರು: ಅಧಿಕಾರ ಸಿಗದೆ ಹತಾಶರಾಗಿರುವ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರು ಮತ್ತೊಮ್ಮೆ ಆಕ್ರೋಶ ಹೊರ ಹಾಕಿದ್ದಾರೆ. ‘ಮುಖಂಡರು, ಶಾಸಕರಿಂದಲೇ ಚುನಾವಣೆ ಗೆಲ್ಲಿ. ನಾವು ಕೆಲಸ ಮಾಡುವುದಿಲ್ಲ. ನಮ್ಮ ಅಗತ್ಯ ನಿಮಗೆ ಬೇಡವಾಗಿದೆ’ ಎಂದು ಹೇಳುವ ಮೂಲಕ ಸವಾಲೊಡ್ಡಿದ್ದಾರೆ.

ಈವರೆಗೆ ತೆರೆಮರೆಯಲ್ಲಿದ್ದ ಅಸಮಾಧಾನದ ಹೊಗೆ ಈಗ ಜ್ವಾಲೆಯ ಸ್ವರೂಪ ಪಡೆದುಕೊಂಡಿದೆ. ಪಕ್ಷದ ವರಿಷ್ಠರ ಎದುರೇ ತಮ್ಮ ಕೋಪ ತಾಪವನ್ನು ತೋರ್ಪಡಿಸಿದ್ದಾರೆ. ನಿಗಮ, ಮಂಡಳಿ ಹಾಗೂ ವಿವಿಧ ಸಂಸ್ಥೆಗಳಿಗೆ ನಾಮ ನಿರ್ದೇಶನ ಮಾಡದಿರುವುದು ಏಕೆ ಎಂದು ನೇರವಾಗಿ ಪ್ರಶ್ನಿಸಿದರು.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಕರೆದಿದ್ದ ಜಿಲ್ಲಾ, ತಾಲ್ಲೂಕು ಪಂಚಾಯಿತಿ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆ ಸಿದ್ಧತೆ ಸಭೆಯಲ್ಲಿ ಕಾರ್ಯಕರ್ತರ ಟೀಕೆಗೆ ನಾಯಕರು ಗುರಿಯಾಗಬೇಕಾಯಿತು.

ಕೆಪಿಸಿಸಿ ವೀಕ್ಷಕರಾದ ವೆಂಕಟರಮಣಯ್ಯ, ಹುಸೇನ್ ಸಾಬ್, ಇಬ್ರಾಹಿಂ ಖಲೀಂವುಲ್ಲಾ, ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ಇತರರ ಎದುರು ಗದ್ದಲ ನಡೆಸಿದರು. ‘ಪಕ್ಷ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಕಳೆದರೂ ಏಕೆ ಅಧಿಕಾರ ಕೊಟ್ಟಿಲ್ಲ’ ಎಂದು ಪ್ರಶ್ನಿಸಿದರು.

ವಿವಿಧ ನಿಗಮ, ಮಂಡಳಿಗಳಿಗೆ ನೇಮಕಗೊಂಡಿದ್ದ ಶಾಸಕರ ಅಧಿಕಾರ ಅವಧಿಯನ್ನು ಮುಂದುವರಿಸಿ, ಸಚಿವ ಸ್ಥಾನಮಾನ ನೀಡಿರುವುದು ಬ್ಲಾಕ್, ಮುಂಚೂಣಿ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು, ಪಕ್ಷಕ್ಕಾಗಿ ದುಡಿದ ಪ್ರಮುಖರ ಸಿಟ್ಟು ಹೆಚ್ಚಾಗುವಂತೆ ಮಾಡಿತ್ತು. ಎಲ್ಲರೂ ಒಮ್ಮೆಲೆ ನಾಯಕರ ಮೇಲೆ ಮುಗಿ ಬಿದ್ದರು.

‘ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ನಾವು ಬೇಕು. ಅಧಿಕಾರಕ್ಕೆ ಬಂದ ನಂತರ ನಮ್ಮನ್ನು ದೂರ ತಳ್ಳಲಾಗುತ್ತಿದೆ. ಶಾಸಕರಿಗೆ ಮಾತ್ರ ಅಧಿಕಾರ ನೀಡಲಾಗಿದೆ. ಹಾಗಾದರೆ ಕಾರ್ಯಕರ್ತರು ಬೇಡವಾಗಿದ್ದಾರೆ? ಮುಂದಿನ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಶಾಸಕರಿಂದಲೇ ಪಕ್ಷ ಗೆಲ್ಲಿಸಿಕೊಳ್ಳಿ. ನಾವು ಕೆಲಸ ಮಾಡುವುದಿಲ್ಲ’ ಆಕ್ರೋಶ ಹೊರ ಹಾಕಿದರು.

ಕಾರ್ಯಕರ್ತರಿಂದ ತೀವ್ರ ವಿರೋಧ ಎದುರಿಸಿದ ಟಿ.ಬಿ.ಜಯಚಂದ್ರ ಸಮಾಧಾನದ ಮಾತುಗಳನ್ನಾಡಿದರು. ‘ಪಕ್ಷವನ್ನು ಅಧಿಕಾರಕ್ಕೆ ತರಲು ದುಡಿದ ಕಾರ್ಯಕರ್ತರಿಗೆ ಈವರೆಗೂ ಅಧಿಕಾರ ಸಿಕ್ಕಿಲ್ಲ. ಇದು ಸಹಜವಾಗಿಯೇ ಅಸಮಾಧಾನ ತರಿಸಿದ್ದು, ಪಕ್ಷ ಸಂಘಟನೆಗೂ ತೊಡಕಾಗಿದೆ’ ಎಂದು ಹೇಳಿದರು.

‘ಕಾಂಗ್ರೆಸ್ ಪಕ್ಷದಲ್ಲಿ ಕಾರ್ಯಕರ್ತರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ಆದರೆ ಈ ಬಾರಿ ಕೊಂಚ ವಿಳಂಬವಾಗಿದೆ. ಸಹಜವಾಗಿಯೇ ಇದು ಅಸಮಾಧಾನಕ್ಕೆ ಕಾರಣವಾಗಿದೆ. ಎಲ್ಲವನ್ನು ಸರಿಪಡಿಸಲಾಗುವುದು. ಈ ವಿಚಾರವಾಗಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಹಿರಿಯರ ಜತೆ ಚರ್ಚಿಸಲಾಗಿದೆ’ ಎಂದು ಆಕ್ರೋಶವನ್ನು ತಣ್ಣಗೆ ಮಾಡುವ ಪ್ರಯತ್ನ ಮಾಡಿದರು.

ವೀಕ್ಷಕರಾಗಿ ಬಂದಿದ್ದ ವೆಂಕಟರಮಣಯ್ಯ, ಹುಸೇನ್ ಸಾಬ್, ಇಬ್ರಾಹಿಂ ಖಲೀಂವುಲ್ಲಾ ಸಹ ಸಮಾಧಾನಪಡಿಸಿದರು. ‘ಕಾರ್ಯಕರ್ತರು ನಿರಾಶರಾಗುವುದು ಬೇಡ. ನಿಮ್ಮ ಅಹವಾಲನ್ನು ಪಕ್ಷದ ಹಿರಿಯರ ಮುಂದಿಡುತ್ತೇವೆ. ಪಕ್ಷ ಸಂಘಟನೆಗೆ ಎಲ್ಲರೂ ಒತ್ತು ನೀಡೋಣ. ಮುಂಬರುವ ಚುನಾವಣೆಗಳಲ್ಲಿ ಗೆಲವು ನಮ್ಮದಾಗುವಂತೆ ದುಡಿಯೋಣ’ ಎಂದು ಕೇಳಿಕೊಂಡರು.

ಮುಖಂಡರಾದ ಎಸ್.ಷಫಿಅಹ್ಮದ್, ಆರ್.ರಾಮಕೃಷ್ಣ, ನಿಕೇತರಾಜ್ ಮೌರ್ಯ, ನರಸೀಯಪ್ಪ, ಎಸ್.ಟಿ.ಶ್ರೀನಿವಾಸ್, ಕೆಂಪಣ್ಣ, ಅನಿಲ್ಕುಮಾರ್, ರೂಪಾ ಶೆಟ್ಟಾಳಯ್ಯ, ಗೀತಾ ರಾಜಣ್ಣ, ನಯಾಜ್ ಅಹಮದ್, ಸುಜಾತ, ನಿಂಗರಾಜು, ಕುಮಾರಸ್ವಾಮಿ, ವಾಲೆಚಂದ್ರಯ್ಯ ಇತರರು ಉಪಸ್ಥಿತರಿದ್ದರು.

‘ಪಾಲಿಕೆಯಲ್ಲಿ ಅಧಿಕಾರ ಹಿಡಿಯಬೇಕು’

ಈಗಾಗಲೇ ನಗರದ ಶಾಸಕ ಸ್ಥಾನ ಲೋಕಸಭೆ ಸ್ಥಾನವನ್ನು ಕಳೆದುಕೊಂಡಿದ್ದೇವೆ. ಮಹಾನಗರ ಪಾಲಿಕೆಯಲ್ಲಿ ಅಧಿಕಾರ ಹಿಡಿಯಲು ಎಲ್ಲರೂ ಪ್ರಯತ್ನಿಸಬೇಕು ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಚಂದ್ರಶೇಖರ್ಗೌಡ ಮನವಿ ಮಾಡಿದರು. ಮುಂದಿನ ಮೇ- ಜೂನ್ನಲ್ಲಿ ಜಿ.ಪಂ ತಾ.ಪಂ ಚುನಾವಣೆ ಬರಲಿದೆ. ಹಾಗಾಗಿ ಕಾರ್ಯಕರ್ತರು ಪಕ್ಷದ ಗೆಲುವಿಗೆ ಶ್ರಮಿಸಬೇಕು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.