ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದ್ಯಕ್ಕಾಗಿ ಆಂಧ್ರದಿಂದ ಬಂದರು

Last Updated 5 ಮೇ 2020, 11:53 IST
ಅಕ್ಷರ ಗಾತ್ರ

ಪಾವಗಡ: ಆಂಧ್ರದಲ್ಲಿ ಮದ್ಯದಂಗಡಿ ತೆರೆಯಲು ತಡವಾದ್ದರಿಂದ ಆಂಧ್ರದ ಗ್ರಾಮಗಳಿಂದ ಕೆಲವರು ತಾಲ್ಲೂಕಿನ ಅಂಗಡಿಗಳಿಗೆ ಬಂದಿದ್ದರು.

ಗಡಿ ಗ್ರಾಮಗಳಲ್ಲಿನ ಬಹುತೇಕ ಆಂಧ್ರ ಜನ ಲಿಂಗದಹಳ್ಳಿ, ಅರಸೀಕೆರೆ, ಹುಸೇನ್ ಪುರ, ದೊಮ್ಮತಮರಿ, ವೆಂಕಟಾಪುರ, ತಿರುಮಣಿ, ವೈ.ಎನ್.ಹೊಕೋಟೆ, ಪಟ್ಟಣದ ಮದ್ಯದಂಗಡಿಗಳ ಬಳಿ ಸರದಿಯಲ್ಲಿ ನಿಂತು ಮದ್ಯ ಖರೀದಿಸಿದರು.

ಲಾಕ್‌ಡೌನ್‌ನಲ್ಲಿ ಮದ್ಯದ ಬೆಲೆ ಹೆಚ್ಚಿದೆ ಎಂಬ ನೆಪ ಹೇಳಿ ವೈ.ಎನ್.ಹೊಸಕೋಟೆ ಸೇರಿದಂತೆ ತಾಲ್ಲೂಕಿನ ಹಲವೆಡೆ ₹20ರಿಂದ ₹30 ಹೆಚ್ಚಿನ ಬೆಲೆಗೆ ಮದ್ಯ ಮಾರಾಟ ಮಾಡಲಾಗಿದೆ ಎಂಬ ಆರೋಪಗಳು ಕೇಳಿಬಂದವು.

ತಾಲ್ಲೂಕಿನ ನೆರೆ ಜಿಲ್ಲೆ ಅನಂತಪುರದಲ್ಲಿ ಸೋಮವಾರದವರೆಗೆ ಒಟ್ಟು 78 ಮಂದಿಗೆ ಕೊರೊನಾ ಸೊಂಕು ದೃಢಪಟ್ಟಿದೆ. ಅವರಲ್ಲಿ 4 ಮಂದಿ ಮೃತಪಟ್ಟಿದ್ದಾರೆ, 24 ಮಂದಿ ಗುಣಮುಖರಾಗಿದ್ದಾರೆ. ಸುತ್ತಲೂ ಆಂಧ್ರದಲ್ಲಿ ರೆಡ್ ಜೋನ್ ಇರುವುದರಿಂದ ಮದ್ಯದಂಗಡಿಗಳು ಆರಂಭವಾಗಿರುವ ಬಗ್ಗೆ
ತಾಲ್ಲೂಕಿನ ಜನತೆ ಆತಂಕ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT