ಗುರುವಾರ , ಅಕ್ಟೋಬರ್ 22, 2020
22 °C

ಕೊರೊನಾ; ಭಾನುವಾರ 298 ಮಂದಿ ಗುಣಮುಖ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಕೊರೊನಾ ಸೋಂಕಿನಿಂದ ಬಳಲುತ್ತಿದ್ದ 298 ಮಂದಿ ಗುಣಮುಖರಾಗಿ ಭಾನುವಾರ ಮನೆಗಳಿಗೆ ಮರಳಿದರು. ಅಲ್ಲದೆ ಇದೇ ದಿನ 347 ಮಂದಿಗೆ ಸೋಂಕು ದೃಢವಾಗಿದ್ದರೆ ಮೂರು ಮಂದಿ ಮೃತಪಟ್ಟಿದ್ದಾರೆ.

ತುಮಕೂರು ನಗರದ ಬಡ್ಡಿಹಳ್ಳಿಯ 66 ವರ್ಷದ ಪುರುಷ, ಬನಶಂಕರಿ ಬಡಾವಣೆಯ 69 ವರ್ಷದ ಮಹಿಳೆ ಮತ್ತು ಶಿರಾ ತಾಲ್ಲೂಕು ಉದ್ದಾರಾಮನಹಳ್ಳಿಯ 50 ವರ್ಷದ ಪುರುಷ ಮೃತಪಟ್ಟಿದ್ದಾರೆ.

ತುಮಕೂರು ತಾಲ್ಲೂಕಿನ 102, ಚಿಕ್ಕನಾಯಕನಹಳ್ಳಿ 15, ಗುಬ್ಬಿ 45, ಕೊರಟಗೆರೆ 12, ಕುಣಿಗಲ್ 22, ಮಧುಗಿರಿ 19, ಪಾವಗಡ 23, ಶಿರಾ 33, ತಿಪಟೂರು 58, ತುರುವೇಕೆರೆ ತಾಲ್ಲೂಕಿನ 18 ಮಂದಿಗೆ ಸೋಂಕು ದೃಢವಾಗಿದೆ. ಇವರಲ್ಲಿ 210 ಪುರುಷರು ಹಾಗೂ 137 ಮಹಿಳೆಯರು ಇದ್ದಾರೆ.

ಜಿಲ್ಲೆಯಲ್ಲಿ ಇಲ್ಲಿಯವರೆಗೂ ಒಟ್ಟು 14,712 ಮಂದಿಗೆ ಸೋಂಕು ತಗುಲಿದ್ದು 11,930 ಮಂದಿ ಗುಣಮುಖರಾಗಿದ್ದಾರೆ. 2,461 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.