ತುಮಕೂರು: ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ನಾಲ್ಕು ಮಂದಿ ಮೃತಪಟ್ಟಿದ್ದಾರೆ. ಹೀಗಾಗಿ ಜಿಲ್ಲೆಯಲ್ಲಿ ಕೋವಿಡ್‌ನಿಂದ 74 ಮಂದಿ ಜೀವಬಿಟ್ಟಂತಾಗಿದೆ.

ಶನಿವಾರ 98 ಮಂದಿಗೆ ಸೋಂಕು ದೃಢವಾಗಿದೆ. ಇವರಲ್ಲಿ 61 ಮಂದಿ ಪುರುಷರು ಹಾಗೂ 37 ಮಹಿಳೆಯರು ಇದ್ದಾರೆ. ಸೋಂಕಿತರ ಸಂಖ್ಯೆ 2,500 ದಾಟಿದ್ದು, ಸಾವಿನ ಸರಣಿ ಮುಂದುವರಿದಿದೆ. ತುಮಕೂರು ನಗರದ ಹೊರವಲಯದ ಸತ್ಯಮಂಗಲದ 60 ವರ್ಷ ಪುರುಷ, ಕ್ಯಾತ್ಸಂದ್ರದ 32 ವರ್ಷದ ಪುರುಷ, ತುಮಕೂರಿನ ಬಾರ್‌ಲೈನ್‌ನ 40 ವರ್ಷದ ಪುರುಷ, ತಿಪಟೂರಿನ 62 ವರ್ಷದ ಮಹಿಳೆ ಕೊರೊನಾದಿಂದ ಮೃತಪಟ್ಟಿರುವುದನ್ನು ಜಿಲ್ಲಾ ಆರೋಗ್ಯ ಇಲಾಖೆ ದೃಢಪಡಿಸಿದೆ.

ಸೋಂಕಿನಿಂದ ಬಳಲುತ್ತಿದ್ದ 90 ಮಂದಿ ಗುಣಮುಖರಾಗಿ ಶನಿವಾರ ಮನೆಗಳಿಗೆ ತೆರಳಿದರು. ಇಲ್ಲಿಯವರೆಗೂ ಜಿಲ್ಲೆಯಲ್ಲಿ 1,459 ಮಂದಿ ಗುಣಮುಖರಾಗಿದ್ದಾರೆ. 976 ಸಕ್ರಿಯ ಪ್ರಕರಣಗಳು ಇನ್ನೂ ಇವೆ. ಸೋಂಕಿತರ ಪ್ರಾಥಮಿಕ ಮತ್ತು ದ್ವಿತೀಯ ಹಂತದ ಸಂಪರ್ಕದಲ್ಲಿ ಇದ್ದ 4,784 ಮಂದಿಯನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.

ತಾಲ್ಲೂಕು: ಇಂದಿನ ಸೋಂಕಿತರು (ಆ.8): ಒಟ್ಟು ಸೋಂಕಿತರು: ಮರಣ
ಚಿ.ನಾ.ಹಳ್ಳಿ: 4: 137: 3
ಗುಬ್ಬಿ: 14: 130: 3
ಕೊರಟಗೆರೆ: 3: 159: 2
ಕುಣಿಗಲ್: 17: 272: 4
ಮಧುಗಿರಿ: 6: 170: 3
ಪಾವಗಡ: 9: 183: 1
ಶಿರಾ: 2: 161: 3
ತಿಪಟೂರು: 2: 159: 2
ತುಮಕೂರು: 28: 1,009: 53
ತುರುವೇಕೆರೆ: 13: 129: 0
ಒಟ್ಟು: 98: 2509: 74

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.