ತುಮಕೂರು: ಜಿಲ್ಲೆಯಲ್ಲಿ ಗುರುವಾರ ಮತ್ತೆ 14 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 333ಕ್ಕೆ ಏರಿಕೆಯಾಗಿದೆ. ಗುರುವಾರ ತುಮಕೂರು ನಗರದಲ್ಲಿಯೇ 9 ಪ್ರಕರಣಗಳು ವರದಿಯಾಗಿವೆ. ಇಂದು ಯಾರೊಬ್ಬರೂ ಸಾವನ್ನಪ್ಪಿಲ್ಲ.

ಇಲ್ಲಿನ ಮಹಾಲಕ್ಷ್ಮಿ ನಗರದ 30 ವರ್ಷದ ವ್ಯಕ್ತಿ, 28 ವರ್ಷದ ಮಹಿಳೆ, ಬಿ.ಜಿ.ಪಾಳ್ಯದ ಪ್ರಸನ್ನಕುಮಾರ್ ಬಡಾವಣೆಯ 47 ವರ್ಷದ ವ್ಯಕ್ತಿ, ಶೆಟ್ಟಿಹಳ್ಳಿ ಗೇಟ್ನ 46 ವರ್ಷದ ಪುರುಷ, ದೇವನೂರು ಚರ್ಚ್ ಬಳಿಯ 64 ವರ್ಷದ ಪುರುಷ, ಸಪ್ತಗಿರಿ ಬಡಾವಣೆಯ 47 ವರ್ಷದ ವ್ಯಕ್ತಿ, ಗುಜರಾತ್ ರಾಜ್ಯದಿಂದ ಬಂದ ಇದೇ ಬಡಾವಣೆಯ 40 ವರ್ಷದ ವ್ಯಕ್ತಿಗೆ ಕೊರೊನಾ ಸೋಂಕು ತಗುಲಿದೆ. ಇವರನ್ನು ನಗರದ ಖಾಸಗಿ ಹೋಟೆಲ್ನಲ್ಲಿ ಕ್ವಾರಂಟೈನ್ನಲ್ಲಿ ಇರಿಸಲಾಗಿದೆ. ಎಸ್ಐಟಿ 13ನೇ ಕ್ರಾಸ್ನ 64 ವರ್ಷದ ವ್ಯಕ್ತಿ, ಸದಾಶಿವನಗರದ 35 ವರ್ಷದ ವ್ಯಕ್ತಿಗೆ ಸೋಂಕು ತಗುಲಿದೆ.

ಸೋಂಕಿತರಲ್ಲಿ ಕೆಲವರು ಯಾವುದೇ ಪ್ರಯಾಣದ ಹಿನ್ನೆಲೆ ಹೊಂದಿಲ್ಲ. ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರ ಪತ್ತೆಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ.

ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 17 ಮಂದಿ ಗುರುವಾರ ಗುಣಮುಖರಾಗಿ ಬಿಡುಗಡೆಯಾದರು. ಸದ್ಯ ಜಿಲ್ಲೆಯಲ್ಲಿ ಒಟ್ಟು 223 ಸಕ್ರಿಯ ಪ್ರಕರಣಗಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.