ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌತೆಕಾಯಿ ಅಗ್ಗ; ಈರುಳ್ಳಿ ದುಬಾರಿ

ಬಲೆಗೆ ಸಿಗದ ಮೀನಿನ ಬೆಲೆ: ಟೊಮೆಟೊಗೂ ಕುದುರಿದ ಬೇಡಿಕೆ
Last Updated 4 ಅಕ್ಟೋಬರ್ 2020, 3:40 IST
ಅಕ್ಷರ ಗಾತ್ರ

ತುಮಕೂರು: ಈ ವಾರ ಮಾರುಕಟ್ಟೆಯಲ್ಲಿ ತರಕಾರಿ ಬೆಲೆ ಹೆಚ್ಚುಕಡಿಮೆ ಸ್ಥಿತರವಾಗಿದೆ. ಆದರೆ ಕೆಲ ತರಕಾರಿ ಬೆಲೆ ಕೊಂಚ ಇಳಿಕೆ ಕಂಡಿದೆ. ಸೌತೆಕಾಯಿ ಬೆಲೆ ಅಗ್ಗವಾಗಿದ್ದರೆ, ಈರುಳ್ಳಿ, ಟೊಮೆಟೊ ಬೆಲೆ ಏರಿಕೆಯತ್ತ ಮುಖಮಾಡಿವೆ.

ಧಾನ್ಯಗಳ ಬೆಲೆಯಲ್ಲೂ ಹೆಚ್ಚಿನ ವ್ಯತ್ಯಾಸವಾಗಿಲ್ಲ. ಏರಿಕೆ ಕಂಡಿದ್ದ ಅಡುಗೆ ಎಣ್ಣೆ ಬೆಲೆ ಲೀಟರ್‌ಗೆ ₹10 ಕಡಿಮೆಯಾಗಿದೆ. ಮೀನಿನ ಬೆಲೆ ಸಾಕಷ್ಟು ತಗ್ಗಿದೆ.

ಸೌತೆಕಾಯಿ ಬೆಲೆ ತೀವ್ರವಾಗಿ ಕುಸಿದಿದೆ. ಸಿಮೆಂಟ್ ಚೀಲದ (ಸುಮಾರು 75 ಕೆ.ಜಿ) ಬೆಲೆ ₹400ರಿಂದ ₹500ಕ್ಕೆ ಮಾರಾಟವಾಗುತ್ತಿದ್ದು, ಈಗ ₹150ರಿಂದ ₹200ಕ್ಕೆ ಇಳಿದಿದೆ. ಬೀನ್ಸ್ ಬೆಲೆ ಮತ್ತೆ ಅಲ್ಪ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಕಳೆದ ವಾರ ಕೆ.ಜಿ ₹150ಕ್ಕೆ ಮಾರಾಟವಾಗಿದ್ದರೆ, ಪ್ರಸ್ತುತ ₹160ರಿಂದ 180ರ ವರೆಗೂ ಏರಿಕೆಯಾಗಿದೆ. ಟೊಮೆಟೊ ಮತ್ತೆ ದುಬಾರಿಯಾಗಿದ್ದು, ಕೆ.ಜಿ.ಗೆ ₹10 ಹೆಚ್ಚಳವಾಗಿದೆ. ಈಗ ₹25ರಿಂದ 30ರ ವರೆಗೆ ಮಾರಾಟವಾಗುತ್ತಿದೆ. ಈರುಳ್ಳಿ ಬೆಲೆ ₹30ರಿಂದ ₹40ಕ್ಕೆ ಏರಿಕೆ ಕಂಡಿದೆ. ಕ್ಯಾರೇಟ್ ಬೆಲೆ ಕೊಂಚ ತಗ್ಗಿದ್ದು, ಮೂಲಂಗಿ, ಬದನೆಕಾಯಿ ಬೆಲೆಯಲ್ಲಿ ತೀವ್ರ ಕುಸಿತವಾಗಿದೆ.

ಧಾನ್ಯಗಳ ಬೆಲೆಯಲ್ಲಿ ಹೆಚ್ಚಿನ ವ್ಯತ್ಯಾಸ ಕಂಡುಬಂದಿಲ್ಲ. ಕಡಲೆಕಾಳು ಬೆಲೆಯಲ್ಲಿ ಹೆಚ್ಚಳವಾಗಿದ್ದು, ಉರಿಗಡಲೆ ಬೆಲೆ ಕೆ.ಜಿ.ಗೆ ₹20 ಏರಿಕೆಯಾಗಿದೆ. ಬಟಾಣಿ ಕೆ.ಜಿ ₹10 ದುಬಾರಿಯಾಗಿದೆ.

ಹಣ್ಣಿನ ಬೆಲೆಯಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ. ಕಳೆದ ವಾರದ ದರವೇ ಮುಂದುವರಿದಿದೆ. ಮೊಟ್ಟೆಕೋಳಿ ಧಾರಣೆಯು ಕೆ.ಜಿ.ಗೆ ₹110ರಿಂದ 170ರಲ್ಲೇ ಇದೆ. ಬ್ರಾಯ್ಲರ್ ಕೋಳಿ ಕೆ.ಜಿ ₹200ರಿಂದ 220ಕ್ಕೆ ಮಾರಾಟವಾಗುತ್ತಿದೆ. ಮೊಟ್ಟೆಯನ್ನು 1ಕ್ಕೆ ₹ 6ರಂತೆ ಮಾರಲಾಗುತ್ತಿದೆ.

ಮೀನು ಅಗ್ಗ: ಮೀನು ಸ್ವಲ್ಪ ಮಟ್ಟಿಗೆ ಅಗ್ಗವಾಗಿದೆ. ನಗರದ ಮತ್ಸ ದರ್ಶಿನಿಯಲ್ಲಿ ಎಲ್ಲಾ ವಿಧದ ಮೀನಿನ ಬೆಲೆಯಲ್ಲಿ ಇಳಿಕೆಯಾಗಿದೆ. ಬಂಗುಡೆ ಕೆ.ಜಿ ₹20 ಕಡಿಮೆಯಾಗಿದ್ದು, ₹230ಕ್ಕೆ ಇಳಿದಿದೆ. ಬೂತಾಯಿ ₹40
ಕುಸಿದು ₹200ಕ್ಕೆ, ಅಂಜಲ್ ಕೆ.ಜಿ.ಗೆ ₹90 ಕುಸಿದು ₹540ಕ್ಕೆ, ಬೊಳಿಂಜಿರ್ ₹110ರಷ್ಟು ಇಳಿದು ₹250ಕ್ಕೆ,
ಬಿಳಿ ಮಾಂಜಿ ಕೆ.ಜಿ ₹160 ಕಡಿಮೆಯಾಗಿದ್ದು, ₹520ಕ್ಕೆ ಮಾರಾಟವಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT