ತುಮಕೂರು: ಹೋರಾಟಗಾರರನ್ನು ಕಳೆದುಕೊಂಡಾಗ ಅವರ ನೆನಪು ಮಾಡಿಕೊಂಡು ನಮ್ಮ ಪಾಡಿಗೆ ನಾವಿರುತ್ತೇವೆ. ಅವರ ಹೋರಾಟ ಮುಂದುವರಿಸಿದರೆ ಮಾತ್ರ ನಿಜವಾಗಿಯೂ ಅವರಿಗೆ ಗೌರವ ಕೊಟ್ಟಂತೆ ಎಂದು ಪಿಯುಸಿಎಲ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ದೊರೈರಾಜ್ ಅಭಿಪ್ರಾಯಪಟ್ಟರು.

ನಗರದಲ್ಲಿ ಈಚೆಗೆ ದಲಿತ ಸಂಘರ್ಷ ಸಮಿತಿ, ಜನಪರ ಸಂಘಟನೆಗಳ ಒಕ್ಕೂಟದಿಂದ ಆಯೋಜಿಸಿದ್ದ ದಲಿತ ಮುಖಂಡ ಬಂದಕುಂಟೆ ನಾಗರಾಜಯ್ಯ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಾವು ಹೋರಾಟ ಪ್ರಾರಂಭಿಸಿದಾಗ ಜನರ ಮನಸ್ಥಿತಿ, ಸ್ಥಿತಿಗತಿ ಈಗಿನಂತೆ ಇರಲಿಲ್ಲ. ಅದನ್ನು ನೋಡಿ ನಾವು ಚಳವಳಿ ಕಟ್ಟಬೇಕು. ದಸಂಸ ಕಟ್ಟಿದಾಗ ನಾಯಕರ ಜತೆಗೆ ಜನರಿದ್ದರು. ಈಗ ಬರೀ ನಾಯಕರು ಮಾತ್ರ ಇದ್ದಾರೆ. ಜನರ ಬಳಿಗೆ ತೆರಳಿ ತಾತ್ವಿಕ ನೆಲೆಯಲ್ಲಿ ಚಳವಳಿ ರೂಪಿಸಬೇಕು. ಮುಂದಿನ ಭವಿಷ್ಯ ಗಮನದಲ್ಲಿ ಇಟ್ಟುಕೊಳ್ಳಬೇಕು ಎಂದರು.

ಲೇಖಕಿ ಬಾ.ಹ.ರಮಾಕುಮಾರಿ, ‘ನನಗೆ ಚಳವಳಿಯ ಗೀಳು ಹಚ್ಚಿಸಿದವರಲ್ಲಿ ಬಂದಕುಂಟೆ ನಾಗರಾಜಯ್ಯ ಒಬ್ಬರು. ಅವರು ನಿಷ್ಠುರವಾದಿಯಾಗಿದ್ದರು’ ಎಂದು ಸ್ಮರಿಸಿದರು.

ಚರಕ ಆಸ್ಪತ್ರೆಯ ಮುಖ್ಯಸ್ಥ ಡಾ.ಬಸವರಾಜು, ಲೇಖಕಿ ಮಲ್ಲಿಕಾ ಬಸವರಾಜು, ಮುಖಂಡರಾದ ಕೆಂಚಮಾರಯ್ಯ, ಸೈಯದ್ ಮುಜೀಬ್, ರಾಮಕೃಷ್ಣ ನೀರಕಲ್ಲು, ಕುಂದೂರು ತಿಮ್ಮಯ್ಯ, ಅರುಂಧತಿ, ತಿಮ್ಮನಹಳ್ಳಿ ವೇಣುಗೋಪಾಲ್, ಡಾ.ಎಚ್.ವಿ.ರಂಗಸ್ವಾಮಿ, ಎನ್.ಜಿ.ರಾಮಚಂದ್ರ, ನರಸಿಂಹಯ್ಯ, ವಿರೂಪಾಕ್ಷ ಡ್ಯಾಗೇರಹಳ್ಳಿ, ಕುಂದೂರು ಮುರಳಿ ಮೊದಲಾದವರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.