ಬುಧವಾರ, ಏಪ್ರಿಲ್ 14, 2021
24 °C
ತಾಲ್ಲೂಕು ಪಂಚಾಯಿತಿ ಕ್ಷೇತ್ರ 173ಕ್ಕೆ ಇಳಿಕೆ l 41 ಕ್ಷೇತ್ರಗಳು ಕಡಿಮೆ

ಜಿ.ಪಂ ಮರು ವಿಂಗಡಣೆ: 64ಕ್ಕೆ ಹೆಚ್ಚಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಪುನರ್ ವಿಂಗಡಣೆ ಕಾರ್ಯ ಪೂರ್ಣಗೊಂಡಿದ್ದು, ಪ್ರಸ್ತುತ ಈ ಸಂಖ್ಯೆ 64ಕ್ಕೆ ಹೆಚ್ಚಳವಾಗಿದೆ. ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳ ಸಂಖ್ಯೆ 173ಕ್ಕೆ ಇಳಿಕೆಯಾಗಿವೆ.

ಜಿಲ್ಲೆಯಲ್ಲಿ 57 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳು ಮತ್ತು 214 ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳು ಇದ್ದವು. ಪುನರ್ ರಚನೆಯ ನಂತರ ಜಿ.ಪಂ 7 ಕ್ಷೇತ್ರಗಳು ಹೆಚ್ಚಾದರೆ, ತಾ.ಪಂ 41 ಕ್ಷೇತ್ರಗಳು ಕಡಿಮೆಯಾಗಿವೆ. ಈ ಸಂಬಂಧ ರಾಜ್ಯ ಚುನಾವಣಾ ಆಯೋಗ ಗೆಜೆಟ್‌ನಲ್ಲಿ ಪ್ರಕಟಿಸಿದೆ.

ಕ್ಷೇತ್ರಗಳ ಪುನರ್ ವಿಂಗಡಣೆ ನಂತರ ನಿಗದಿಪಡಿಸಿದ ಜಿ.ಪಂ ಕ್ಷೇತ್ರಗಳ ವಿವರ.

ತುಮಕೂರು ತಾಲ್ಲೂಕು: ಸಿದ್ಧಗಂಗಾ ಮಠ, ಗೂಳೂರು, ಹೆಬ್ಬೂರು, ಸಿ.ಟಿ.ಕೆರೆ, ಹೊನ್ನುಡಿಕೆ, ಊರುಕೆರೆ, ಊರ್ಡಿಗೆರೆ, ಹೆಗ್ಗೆರೆ, ನಾಗವಲ್ಲಿ.

ಗುಬ್ಬಿ ತಾಲ್ಲೂಕು: ಕಲ್ಲೂರು, ಚೇಳೂರು, ಅಮ್ಮನಘಟ್ಟ, ಹಾಗಲವಾಡಿ, ಕುನ್ನಾಲ (ಕಡಬ), ನಿಟ್ಟೂರು, ಅಳಿಲುಘಟ್ಟ.

ಕುಣಿಗಲ್ ತಾಲ್ಲೂಕು: ಕೊತ್ತಗೆರೆ, ಕಿತ್ನಾಮಂಗಲ, ಇಪ್ಪಾಡಿ (ಹುರ್ತಿದುರ್ಗ), ಹುಲಿಯೂರುದುರ್ಗ, ಅಮೃತೂರು, ಬೀರಗಾನಹಳ್ಳಿ (ಯಡಿಯೂರು).

ತಿಪಟೂರು ತಾಲ್ಲೂಕು: ಹೊನ್ನಾವಳ್ಳಿ, ಹಾಲ್ಕುರಿಕೆ, ಕಿಬ್ಬನಹಳ್ಳಿ, ಈಚನೂರು, ನೊಣವಿನಕೆರೆ.

ತುರುವೇಕೆರೆ ತಾಲ್ಲೂಕು: ಬಾಣಸಂದ್ರ, ಬೆನಕನಕೆರೆ (ದಬ್ಬೇಘಟ್ಟ), ಆದಿತ್ಯಪಟ್ಟಣ (ದಂಡಿನಶಿವರ), ಮಾಯಸಂದ್ರ,
ಮುನಿಯೂರು.

ಚಿಕ್ಕನಾಯಕನಹಳ್ಳಿ ತಾಲ್ಲೂಕು: ತಮ್ಮಡಿಹಳ್ಳಿ, ಕೆಂಕೆರೆ (ಹೊಯ್ಸಳಕಟ್ಟೆ), ತಮ್ಮನಹಳ್ಳಿ (ಕಂದಿಕೆರೆ), ಹಂದನಕೆರೆ, ಶೆಟ್ಟಿಕೆರೆ.

ಮಧುಗಿರಿ ತಾಲ್ಲೂಕು: ಚಿನಕನವಜ್ರ (ಸಿದ್ದಾಪುರ ದೊಡ್ಡೇರಿ), ಬಡವನಹಳ್ಳಿ (ದೊಡ್ಡೇರಿ), ಹೊಸಕೆರೆ (ಸಿದ್ದಾಪುರ, ಐ.ಡಿ.ಹಳ್ಳಿ, ಮಿಡಿಗೇಶಿ, ದೊಡ್ಡೇರಿ), ಗರಣಿ, ಇಟಕದಿಬ್ಬಹಳ್ಳಿ, ಕೊಡಿಗೇನಹಳ್ಳಿ, ಬ್ಯಾಲ್ಯ
(ಪುರವರ).

ಕೊರಟಗೆರೆ ತಾಲ್ಲೂಕು: ಬೊಮ್ಮಲದೇವಿಪುರ, ಹೊಳವನಹಳ್ಳಿ, ಹೂಲಿಕುಂಟೆ, ಕೋಳಾಲ, ತೋವಿನಕೆರೆ.

ಶಿರಾ ತಾಲ್ಲೂಕು: ತಡಕಲೂರು (ಹುಲಿಕುಂಟೆ), ನಾದೂರು, ಬೇವಿನಹಳ್ಳಿ, ತಾವರೇಕೆರೆ, ಮದಲೂರು, ಚಿಕ್ಕನಹಳ್ಳಿ, ಕಳ್ಳಂಬೆಳ್ಳ, ಬುಕ್ಕಾಪಟ್ಟಣ.

ಪಾವಗಡ ತಾಲ್ಲೂಕು: ಬ್ಯಾಡನೂರು, ಕೋಟಗುಡ್ಡ, ಅರಸೀಕೆರೆ (ಮಂಗಳವಾಡ), ಪಳವಳ್ಳಿ (ನಾಗಲಮಡಿಕೆ), ವೆಂಕಟಾಪುರ, ವೈ.ಎನ್. ಹೊಸಕೋಟೆ, ಕಾಮನದುರ್ಗ (ನೀಲಮ್ಮನಹಳ್ಳಿ).

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.