ತುರುವೇಕೆರೆ: ಹಲವು ಗಂಭೀರ ಆರೋಪಗಳನ್ನು ಎದುರಿಸುತ್ತಿರುವ ಬೆಂಗಳೂರಿನ ರಾಜರಾಜೇಶ್ವರಿ ನಗರದ ಬಿಜೆಪಿ ಶಾಸಕ ಮುನಿರತ್ನ ನಾಯ್ಡು ಅವರನ್ನು ಶಾಸಕ ಸ್ಥಾನದಿಂದ ಕೂಡಲೇ ವಜಾಗೊಳಿಸಬೇಕು ಎಂದು ಆಗ್ರಹಿಸಿ ತಾಲ್ಲೂಕಿನ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಒತ್ತಾಯಿಸಿದರು.
ಗ್ರೇಡ್- 2 ತಹಶೀಲ್ದಾರ್ ಬಿ.ಸಿ.ಸುಮತಿ ಅವರಿಗೆ ಮನವಿ ಸಲ್ಲಿಸಿದರು.
ಸಿ.ಎಸ್. ಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೊಳಾಲ ನಾಗರಾಜು ಮಾತನಾಡಿ, ‘ಬಿಜೆಪಿ ಮಹಿಳೆಯರ ಹಾಗೂ ದಲಿತ ವಿರೋಧಿ ಪಕ್ಷವಾಗಿದೆ. ಶಾಸಕ ಮುನಿರತ್ನ ದಲಿತರ, ಮಹಿಳೆಯರ ಮತ್ತು ಒಕ್ಕಲಿಗರ ವಿರುದ್ದ ಕೀಳಾಗಿ ಮಾತನಾಡಿರುವುದು ಖಂಡನೀಯ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೇವರಾಜು, ಮುಖಂಡರಾದ ಗೋಣಿತುಮಕೂರು ಕಾಂತರಾಜು, ಕೆಂಪರಾಜು, ತ್ರೈಲೋಕಿನಾಥ್, ಪ್ರಕಾಶ್, ರುದ್ರೇಶ್, ಶಶಿಶೇಖರ್, ನಂಜುಂಡಪ್ಪ, ಉಗ್ರೇಗೌಡ, ಗವಿರಂಗಪ್ಪ, ಬಾಣಸಂದ್ರ ಲಕ್ಷ್ಮೀದೇವಮ್ಮ, ಯೂತ್ ಕಾಂಗ್ರೆಸ್ ಪದಾಧಿಕಾರಿಗಳಾದ ನಂಜೇಶ್, ಕಿರಣ್, ನವೀನ್ ಹಾಜರಿದ್ದರು.