ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಬ್ಬಿ: ಹೆದ್ದಾರಿ ಬದಿ ತಂಗುದಾಣ ನಿರ್ಮಿಸಲು ಒತ್ತಾಯ

Published 30 ಮೇ 2023, 14:26 IST
Last Updated 30 ಮೇ 2023, 14:26 IST
ಅಕ್ಷರ ಗಾತ್ರ

ಗುಬ್ಬಿ: ತಾಲ್ಲೂಕಿನ ಕಳ್ಳಿಪಾಳ್ಯಗೇಟ್‌ನಿಂದ ಗಡಿಭಾಗ ಹರೇನಹಳ್ಳಿಯ ವರೆಗೆ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾರ್ಯವು ಮಂದಗತಿಯಲ್ಲಿ ಸಾಗುತ್ತಲೇ ಇದೆ.

ರಸ್ತೆ ಅಗಲೀಕರಣಕ್ಕಾಗಿ ರಸ್ತೆಯ ಎರಡು ಬದಿಗಳಲ್ಲಿ ಇದ್ದ ಮರಗಳನ್ನು ಕಡಿದು ಹಾಕಲಾಗಿದೆ. ಈ ಹಿಂದೆ ಹೆದ್ದಾರಿ ಆಸುಪಾಸಿನ ಗ್ರಾಮಸ್ಥರು ಬಸ್‌ ಹತ್ತಲು ಬಂದಾಗ ಹೆದ್ದಾರಿ ಪಕ್ಕದಲ್ಲಿದ್ದ ಮರದ ನೆರಳಿನಲ್ಲಿ ನಿಂತುಕೊಳ್ಳಲು ಸಾಧ್ಯವಾಗುತ್ತಿತ್ತು.

ಅನೇಕ ಗೇಟ್‌ಗಳಲ್ಲಿ ಬಸ್ ತಂಗುದಾಣಗಳು ಇದ್ದುದ್ದರಿಂದ ಪ್ರಯಾಣಿಕರಿಗೆ ಅನುಕೂಲವಾಗುತಿತ್ತು. ಆದರೆ ರಸ್ತೆ ಆಗಲೀಕರಣ ಕಾರ್ಯ ಪ್ರಾರಂಭವಾದ ನಂತರ ಮರಗಳನ್ನು ಹಾಗೂ ತಂಗುದಾಣಗಳನ್ನು ತೆರವುಗೊಳಿಸಿರುವುದರಿಂದ ಮಹಿಳೆಯರು, ಮಕ್ಕಳು ಹಾಗೂ ಹಿರಿಯ ಪ್ರಯಾಣಿಕರು ಕಷ್ಟ ಅನುಭವಿಸುವಂತಾಗುತ್ತಿದೆ.

ಮಳೆ ಬಂದರಂತೂ ಪ್ರಯಾಣಿಕರ ಪಾಡನ್ನು ಕೇಳುವವರೇ ಇಲ್ಲವಾಗಿದೆ. ಹೆದ್ದಾರಿ ಪ್ರಾಧಿಕಾರ ಎಲ್ಲಾ ಗ್ರಾಮಗಳ ಗೇಟುಗಳಲ್ಲಿ ತಂಗುದಾಣ ನಿರ್ಮಿಸಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕು. ಹೆದ್ದಾರಿಪಕ್ಕದ ಹಳ್ಳಿಗಳ ಗೇಟುಗಳಲ್ಲಿ ವ್ಯವಸ್ಥಿತವಾದ ನಾಮಫಲಕವನ್ನು ಅಳವಡಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಜನಪ್ರತಿನಿಧಿಗಳು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿ ಪ್ರಯಾಣಿಕರಿಗೆ ಅನುಕೂಲವಾಗುವಂತೆ ತಂಗುದಾಣ ನಿರ್ಮಿಸಲು ಕ್ರಮಕೈಗೊಳ್ಳಬೇಕು ಎನ್ನುತ್ತಾರೆ ನಿವೃತ್ತ ಪ್ರಾಂಶುಪಾಲ ಮಹಾಲಿಂಗಪ್ಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT