ಕುಣಿಗಲ್: ಕರ್ತವ್ಯ ನಿರ್ವಹಣೆಯಲ್ಲಿ ಲೋಪ, ಸಕ್ಷಮ ಪ್ರಾಧಿಕಾರದ ಅನುಮೋದನೆ ಇಲ್ಲದೆ ನಿಯಮ ಬಾಹಿರವಾಗಿ ಅಂತರ್ ನಿಧಿ ವರ್ಗಾವಣೆ ಮಾಡಿ, ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ಪುರಸಭೆ ಮುಖ್ಯಾಧಿಕಾರಿ ಪಿ.ಶಿವಪ್ರಸಾದ್ ಅವರನ್ನು ಅಮಾನತುಗೊಳಿಸಿ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕ ಪ್ರಭುಲಿಂಗ ಕವಳಕಟ್ಟಿ ಆದೇಶಿಸಿದ್ದಾರೆ.
18ನೇ ವಾರ್ಡ್ ನ ತೇಜು ಬಡಾವಣೆಯ ಖರಾಬು ಜಾಗಕ್ಕೆ ನಿಯಮ ಬಾಹಿರವಾಗಿ ಖಾತೆ ಮಾಡಿಕೊಟ್ಟಿರುವುದು, ಪುರಸಭೆ ವ್ಯಾಪ್ತಿ ಮೀರಿ ಬಿಎಲ್ಎಸ್ ಆರ್ ಬಡಾವಣೆಗೆ ಇ-ತಂತ್ರಾಂಶದಲ್ಲಿ ಖಾತೆ ನೀಡಿರುವುದು, ಸಾಮಾನ್ಯ ನಿಧಿಯಡಿ ಕೊಟೇಶನ್ ಮುಖಾಂತರ ತುಂಡು ಗುತ್ತಿಗೆ ನಿರ್ವಹಿಸಿ ಪುರಸಭೆಗೆ ನಷ್ಟ ಉಂಟು ಮಾಡಿರುವುದು, ಪುರಸಭೆಗೆ ಸೇರಿದ ವಾಣಿಜ್ಯ ಮಳಿಗೆ ವಿಲೆ ಮಾಡದಿರುವುದು, ಬಫರ್ ಜೋನ್ ನಲ್ಲಿ ಅಕ್ರಮವಾಗಿ ಖಾತೆ ಮಾಡಿಕೊಟ್ಟಿದ್ದಾರೆ ಎಂಬ ಆರೋಪದ ಮೇರೆಗೆ ಶಿಸ್ತು ಕ್ರಮಕೈಗೊಳ್ಳಲಾಗಿದೆ.