ತುರುವೇಕೆರೆ: ತಾಲ್ಲೂಕಿನ ತಂಡಗ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಮುಖ್ಯ ಶಿಕ್ಷಕ ಬಿ. ನಂಜಾಮರಿ ಮತ್ತು ಸಹ ಶಿಕ್ಷಕ ರಮೇಶ್ ಅವರನ್ನು ಪರೀಕ್ಷಾ ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಗುರುವಾರ ಬಿಇಒ ಎನ್. ಸೋಮಶೇಖರ್ ಅಮಾನತು ಮಾಡಿ, ಆದೇಶ ಹೊರಡಿಸಿದ್ದಾರೆ.

ತಂಡಗ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಮಾರ್ಚ್ 11ರಂದು 4ನೇ ತರಗತಿಯ ಸಂಕಲಾತ್ಮಕ ಪರೀಕ್ಷೆಯನ್ನು ನಿಯಮಬಾಹಿರವಾಗಿ ನಡೆಸಿದ್ದಾರೆ ಹಾಗೂ ಮಕ್ಕಳಿಗೆ ಸರಿಯಾಗಿ ಪಾಠ ಪ್ರವಚ ಮಾಡಿಲ್ಲವೆಂದು ಇಬ್ಬರ ವಿರುದ್ಧ ದೂರುಗಳು ದಾಖಲಾಗಿದ್ದವು.

ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಪೋಷಕರು, ಗ್ರಾಮಸ್ಥರು, ಗ್ರಾಮ ಪಂಚಾಯಿತಿ ಸದಸ್ಯರು, ಪತ್ರಿಕಾ ವರದಿ ಹಾಗು ವಿಶ್ವಮಾನವ ಹಕ್ಕುಗಳ ಆಯೋಗದ ಸಿದ್ದಲಿಂಗೇಗೌಡ ಅವರ ದೂರಿನ ಪತ್ರ ಆಧಾರಿಸಿ ಅಮಾನತು ಕ್ರಮ ಕೈಗೊಳ್ಳಲಾಗಿದೆ ಎಂದು ಸೋಮಶೇಖರ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.