ಮಂಗಳವಾರ, ನವೆಂಬರ್ 19, 2019
28 °C

ಹುಳಿಯಾರು: ಹೆಚ್ಚಿದ ಹುಚ್ಚುನಾಯಿ ಹಾವಳಿ

Published:
Updated:

ಹುಳಿಯಾರು: ಪಟ್ಟಣದಲ್ಲಿ ಹುಚ್ಚುನಾಯಿಗಳ ಸಂಖ್ಯೆ ಹೆಚ್ಚಾಗಿದ್ದು, ಎರಡು ಹುಚ್ಚು ಹಿಡಿದ ನಾಯಿಗಳು ಕಚ್ಚಿರುವ ಸುಮಾರು 20ಕ್ಕೂ ಹೆಚ್ಚು ನಾಯಿಗಳನ್ನು ಪತ್ತೆಹಚ್ಚಿ ಹಿಡಿಯಲು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಕಳೆದೆರಡು ದಿನಗಳ ಹಿಂದೆ ಮಾರುತಿ ಬಡಾವಣೆಯಲ್ಲಿ ಎರಡು ಹುಚ್ಚುನಾಯಿಗಳು ಕಾಣಿಸಿಕೊಂಡಿದ್ದವು. ಅವು ರಾಮಗೋಪಾಲ್‌ ವೃತ್ತ, ಇಂದಿರಾ ನಗರ, ಬಾಲಾಜಿ ಚಿತ್ರ ಮಂದಿರದ ಸುತ್ತ ಮುತ್ತ ಇರುವ ನಾಯಿಗಳನ್ನು ಕಚ್ಚಿವೆ. ಇದರಿಂದ ಎಲ್ಲ ನಾಯಿಗಳಿಗೂ ಹುಚ್ಚು ಹಿಡಿಯುವ ಸಂಭವವಿದ್ದು, ಅವುಗಳನ್ನು ಕೂಡಲೇ ಪಟ್ಟಣ ಪಂಚಾಯಿತಿಯವರು ಹಿಡಿಯಬೇಕು. ಸಾರ್ವಜನಿಕರಿಗೆ ಕಚ್ಚಿದರೆ ಹೆಚ್ಚಿನ ತೊಂದರೆಯಾಗುತ್ತದೆ ಎಂದು ಮಾರುತಿ ಬಡಾವಣೆಯ ಟೈಲರ್‌ ಸೂರಪ್ಪ ತಿಳಿಸಿದ್ದಾರೆ.

ಕೂಡಲೇ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಇತ್ತ ಗಮನ ಹರಿಸಬೇಕು ಎಂದು ಒತ್ತಾಯಿಸಿದ್ದಾರೆ.

ಪ್ರತಿಕ್ರಿಯಿಸಿ (+)