ಶನಿವಾರ, ನವೆಂಬರ್ 28, 2020
22 °C
ದುಡ್ಡು ಕೇಳಿದರೆ ನಗರಸಭೆ ಗಮನಕ್ಕೆ ತರಲು ಸಲಹೆ

‘ಕಸ ಸಂಗ್ರಹಕ್ಕೆ ಹಣ ಕೊಡಬೇಡಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತಿಪಟೂರು: ‘ನಗರಸಭೆಯಿಂದ ದಿನನಿತ್ಯ ಕಸ ಸಂಗ್ರಹಕ್ಕೆ ಬರುವ ವಾಹನಗಳಿಗೆ ಯಾರು ಹಣ ಕೊಡಬೇಕಿಲ್ಲ. ಹಾಗೇನಾದರು ಕೇಳಿದರೆ ನಮ್ಮ ಗಮನಕ್ಕೆ ತನ್ನಿ’ ಎಂದು ನಗರಸಭಾ ಅಧ್ಯಕ್ಷ ಪಿ.ಜೆ. ರಾಮ್‍ಮೋಹನ್ ತಿಳಿಸಿದರು.

ನಗರಸಭೆಯಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.

‘ಸಾರ್ವಜನಿಕರು ನಗರಸಭೆಯಿಂದ ಕಸ ಸಂಗ್ರಹಿಸುವುದಕ್ಕೆ ಕಂದಾಯದ ಜೊತೆಯೇ ದುಡ್ಡು ಕಟ್ಟುತ್ತಿದ್ದಾರೆ. ಕಸ ಸಂಗ್ರಹಿಸುವ ವಾಹನದವರು ಹಣ ಕೇಳಿದರೆ ಕೊಡಬೇಡಿ ಹಾಗೂ ಕಸ ಹಾಕಿಸಿಕೊಳ್ಳಲು ಹಣವನ್ನು ಕೊಡಲೇಬೇಕು ಎಂದು ಕೇಳಿದರೆ ಅಧಿಕಾರಿಗಳ ಗಮನಕ್ಕೆ ಅಥವಾ ನಗರಸಭಾ ಸದಸ್ಯರ ಗಮನಕ್ಕೆ ತರಬೇಕು’ ಎಂದು ತಿಳಿಸಿದರು.

ಮೋಟಾರ್‌ಗೆ ಹಣವಿಲ್ಲ: ‘ನಗರಸಭೆಯಿಂದ ನಗರದ ಮೂಲೆ ಮೂಲೆಗಳಲ್ಲಿ ಬೋರ್‌ವೆಲ್‌ಗಳನ್ನು ಕೊರೆದು ಬಿಟ್ಟಿದ್ದಾರೆ. ಆದರೆ, ಚೆನ್ನಾಗಿ ನೀರು ಬಂದಿರುವ ಬೋರ್‌ವೆಲ್‌ಗಳಿಗೆ ಮೋಟರ್ ಬಿಡಲು ನಗರಸಭೆಯಲ್ಲಿ ಹಣವಿಲ್ಲದಿರುವುದು ವಿಪರ್ಯಾಸ’ ಎಂದು ಸರ್ವ ಸದಸ್ಯರು ಆರೋಪಿಸಿದರು.

ಸಭೆಯಲ್ಲಿ ನಗರಸಭೆಯ ಪೌರಾಯುಕ್ತ ಉಮಾಕಾಂತ್, ಉಪಾಧ್ಯಕ್ಷ ಸೊಪ್ಪುಗಣೇಶ್, ಎಇಇ ನಾಗೇಶ್ ಉಪಸ್ಥಿತರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.