ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ಸೆಸ್ಸೆಲ್ಸಿ: ಪ್ರಯತ್ನಕ್ಕೆ ತಕ್ಕ ಫಲ

Last Updated 1 ಮೇ 2019, 10:51 IST
ಅಕ್ಷರ ಗಾತ್ರ

ತುಮಕೂರಿನ ಸಿದ್ಧಗಂಗಾ ಮಠದ ಸಿದ್ಧಗಂಗಾ ಇಂಗ್ಲಿಷ್‌ ಮಾಧ್ಯಮ ಪ್ರೌಢಶಾಲೆ ವಿದ್ಯಾರ್ಥಿ ಸಿ.ಹರ್ಷಿತ್‌ 624 ಅಂಕಗಳಿಸಿ ರಾಜ್ಯಕ್ಕೆ ದ್ವಿತೀಯ, ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ.

ವಿಷಯವಾರು: ಕನ್ನಡದಲ್ಲಿ 125, ಇಂಗ್ಲಿಷ್‌ 100, ಹಿಂದಿ 100, ಗಣಿತ 100, ವಿಜ್ಞಾನ 99 ಹಾಗೂ ಸಮಾಜ ವಿಜ್ಞಾನದಲ್ಲಿ 100 ಅಂಕಗಳಿಸಿದ್ದಾರೆ.

‘ಜಿಲ್ಲೆಗೆ ಮೊದಲ ಸ್ಥಾನ ಪಡೆದಿರುವುದು ಖುಷಿ ಆಗಿದೆ. ಡಾ‌ಕ್ಟರ್‌ ಆಗುವ ಗುರಿ ಹೊಂದಿದ್ದೇನೆ’ ಎಂದು ಸಿ.ಹರ್ಷಿತ್‌ ‘ಪ್ರಜಾವಾಣಿ’ ಜೊತೆ ಸಂತೋಷ ಹಂಚಿಕೊಂಡರು. ಚನ್ನಕೃಷ್ಣ ಉದಯ ವಾಹಿನಿಯಲ್ಲಿ ಪ್ರಸಾರವಾಗುವ ಕೈ ಅಡುಗೆ ಕಾರ್ಯಕ್ರಮದಲ್ಲಿ ಚಿತ್ರಕತೆ ಬರಹಗಾರರಾಗಿ ಕೆಲಸ ಮಾಡುತ್ತಿದ್ದಾರೆ.

ಗಣಿತ ಮತ್ತು ವಿಜ್ಞಾನ ವಿಷಯಕ್ಕೆ ಮನೆಪಾಠಕ್ಕೆ ಹೋಗುತ್ತಿದೆ. ಪ್ರತಿಯೊಬ್ಬರೂ ಟ್ಯೂಷನ್‌ಗೆ ಹೋಗಲೇಬೇಕು ಎನ್ನುವಂತಿಲ್ಲ. ಪಠ್ಯ ಪುಸ್ತಕವನ್ನು ಪೂರ್ಣ ಓದಿರಬೇಕು. ಸತತ ಪ್ರಯತ್ನವಿರಬೇಕು ಎಂದರು.

ಪೋಷಕರು ಮಕ್ಕಳ ಮೇಲೆ ಒತ್ತಡ ಹಾಕಬಾರದು. ಸ್ವತಂತ್ರವಾಗಿ ಬಿಡಬೇಕು. ಸಲಹೆ ಸೂಚನೆ ನೀಡುವುದು ಉತ್ತಮ. ಅಂಕಗಳಿಸಲು ಮೊದಲು ಉತ್ತಮ ಬರವಣಿಗೆ ಮುಖ್ಯವಾಗುತ್ತದೆ. ಶಾಲೆಯ ಹಂತದಲ್ಲಿ ನಡೆಯುವ ಕಿರು ಪರೀಕ್ಷೆಗಳನ್ನು ನಿರ್ಲಕ್ಷಿಸಬಾರದು ಎಂದು ಸಲಹೆ ನೀಡಿದರು.

ತಂದೆ ಚನ್ನಕೃಷ್ಣ ಮಾತನಾಡಿ, ತುಂಬಾ ಸಂತೋಷವಾಗುತ್ತಿದೆ. ಮುಂದೆ ಅವನ ಗುರಿ ಏನಿದೆ ಅದಕ್ಕೆ ಸಂಪೂರ್ಣ ಪ್ರೋತ್ಸಾಹ ನೀಡುತ್ತೇನೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT