ಏಕಶಿಲಾ ಗಿರಿಗೆ ರೋಪ್ ವೇ ಅಳವಡಿಸಿದರೆ ಐತಿಹಾಸಿಕ ಬೆಟ್ಟವನ್ನು ವೀಕ್ಷಿಸುವ ಭಾಗ್ಯ ಅಬಾಲ ವೃದ್ಧರಿಗೆ ಸಿಗುತ್ತದೆ. ಪ್ರವಾಸಿಗರಿಗೆ ಸ್ಥಳೀಯ ವ್ಯಾಪಾರಿಗಳಿಗೆ ಅನುಕೂಲವಾಗುತ್ತದೆ.
ಲಲಿತಾಂಬ ಗಾಯಕಿ ಮಧುಗಿರಿ
ರೋಪ್ ವೇ ಅಳವಡಿಸಲು ಶಾಸಕ ಕೆ.ಎನ್. ರಾಜಣ್ಣ ಈಗಾಗಲೇ ಸರ್ವೆ ನಡೆಸಿ ಅಗತ್ಯ ಕ್ರಮ ಕೈಗೊಂಡಿರುವುದು ಖುಷಿಯ ವಿಚಾರ. ಇದರಿಂದ ಚಾರಣಿಗರು ಸ್ಥಳೀಯರಿಗೆ ಸಹಕಾರಿ.
ಮುನೀಂದ್ರಕುಮಾರ್ ಮಧುಗಿರಿ
ರೋಪ್ ವೇ ನಿಂದ ಮಧುಗಿರಿ ಬೆಟ್ಟ ಹತ್ತಲಾಗದವರಿಗೆ ಸದವಾಕಾಶ ದೊರೆಯುತ್ತದೆ. ಏಕಶಿಲೆಯ ಖ್ಯಾತಿ ಎಲ್ಲೆಡೆ ಪಸರಿಸಿದಂತಾಗುತ್ತದೆ. ಬೆಟ್ಟದ ತುದಿಯಲ್ಲಿ ನಿಂತು ಪ್ರಕೃತಿಯ ಸೌಂದರ್ಯ ಸವಿಯಬಹುದು.