ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆ ಬಹಿಷ್ಕಾರದ ಎಚ್ಚರಿಕೆ

Last Updated 5 ಜುಲೈ 2021, 3:29 IST
ಅಕ್ಷರ ಗಾತ್ರ

ಗುಬ್ಬಿ: ‘ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಕ್ಷೇತ್ರ ವಿಂಗಡಣೆ ಸಂದರ್ಭ
ದಲ್ಲಿ ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಕಸಬಾ ಹೋಬಳಿ ಇಂಗಳದ
ಕಾವಲ್ ಮೂಲ ಸೌಕರ್ಯಗಳಿಂದ ವಂಚಿತವಾಗಿ, ಗ್ರಾಮವನ್ನು ಅತಂತ್ರ ಸ್ಥಿತಿಗೆ ತಳ್ಳಿದ್ದಾರೆ’ ಎಂದು ಗ್ರಾಮಸ್ಥರು ಆರೋಪಿಸಿದರು.

ಜಿ.ಪಂ ಮತ್ತು ತಾ.ಪಂ ಪುನರ್ ವಿಂಗಡಣೆ ಸಂಧರ್ಭದಲ್ಲಿ ಗ್ರಾಮವನ್ನು ಹಾಲಿ ಇರುವ ಜಿ.ಹೊಸಹಳ್ಳಿ ಗ್ರಾಮ ಪಂಚಾಯಿತಿಯಿಂದ ದೂರ ಮಾಡಿ ಬಹುದೂರದ ಕುನ್ನಾಲ ಜಿ.ಪಂ ಮತ್ತು ಕೊಪ್ಪ ತಾ.ಪಂ ಕ್ಷೇತ್ರಕ್ಕೆ ಸೇರ್ಪಡೆ ಮಾಡುವುದರ ಮೂಲಕಅತಂತ್ರವಾಗಿಸಿದ್ದಾರೆ ಎಂದು ಮತದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಂದಿನ ಜಿ.ಪಂ ಮತ್ತು ತಾ.ಪಂ ಚುನಾವಣೆ ಬಹಿಷ್ಕರಿಸುವ ನಿರ್ಧಾರ ಕೈಗೊಳ್ಳಲು ಮುಂದಾಗಿದ್ದಾರೆ.

ತಾಲ್ಲೂಕಿನ ಜಿ.ಹೊಸಹಳ್ಳಿ ಗ್ರಾಪಂ ವ್ಯಾಪ್ತಿಯ ಬ್ಯಾಡಿಗೆರೆ ಕ್ಷೇತ್ರಕ್ಕೆ ಸಂಬಂಧಿಸಿದ ಇಂಗಳದಕಾವಲ್ (ಅತ್ತಿಗೇನಹಳ್ಳಿ) ಗ್ರಾಮವು ಹೊಸಹಳ್ಳಿಗೆ ಕೂಗಳತೆ ದೂರದಲ್ಲಿರುವ ಈ ಸಣ್ಣ ಗ್ರಾಮಕ್ಕೆ ಮೂಲ ಸೌಲಭ್ಯ ಕೊರತೆ ನೀಗಿಸಲು ಬ್ಯಾಡಿಗೆರೆ ಕ್ಷೇತ್ರದ ಗ್ರಾ.ಪಂ ಸದಸ್ಯರೇ ಹೋಗಬೇಕಿದೆ. ಉಳಿದಂತೆ ಯಾವ ಚುನಾಯಿತ ಪ್ರತಿನಿಧಿಗಳ ಕಣ್ಣಿಗೆ ಬೀಳುವುದಿಲ್ಲ. ಅಮ್ಮನಘಟ್ಟ (ಕಸಬಾ) ಜಿ.ಪಂ ಕ್ಷೇತ್ರಕ್ಕೆ ಒಳಪಟ್ಟು ಜಿ.ಹೊಸಹಳ್ಳಿ ತಾ.ಪಂ ಕ್ಷೇತ್ರಕ್ಕೆ ಸೇರಬೇಕಾದ ಈ ಗ್ರಾಮವನ್ನು ಪುನರ್ ವಿಂಗಡಣೆ ಹೆಸರಿನಲ್ಲಿ ಎಲ್ಲದರಿಂದಲೂ ದೂರ ಎಂಬಂತೆ ಅಧಿಕಾರಿಗಳು ಗುರುತಿಸಿದ್ದಾರೆ ಎಂದು ಸ್ಥಳೀಯರು ಕಿಡಿಕಾರಿದರು.

ಕಳೆದ ಗ್ರಾ.ಪಂ ಚುನಾವಣೆಯಲ್ಲಿ ಬ್ಯಾಡಿಗೆರೆ ಮತಗಟ್ಟೆಯಲ್ಲೇ ಮತದಾನ ಮಾಡಿದ್ದರು. ಈ ಬಾರಿ ಪುನರ್ ವಿಂಗಡಣೆ ಹೆಸರಿನಲ್ಲಿ 12 ಕಿ.ಮೀ ದೂರದ ಕೊಪ್ಪ ತಾ.ಪಂಗೆ ಸೇರಿಸಿದ್ದಾರೆ ಎಂದು ಸ್ಥಳೀಯ ಸಿದ್ದರಾಜು ದೂರಿದರು.

ಸ್ಥಳೀಯರ ಅಭಿಪ್ರಾಯ ಲೆಕ್ಕಿಸದೆ ಹೇಗೆ ದೂರದ ಬೂತ್‍ಗೆ ಸೇರಿಸಿ ಕ್ಷೇತ್ರ
ವನ್ನೇ ಬದಲಿಸಿ ಸೌಲಭ್ಯ ವಂಚಿತ ಗ್ರಾಮವಾಗಿ ಮಾಡುತ್ತಿದ್ದಾರೆ ಎಂದು ಗ್ರಾಮದ ಹಿರಿಯ ನರಸೇಗೌಡ ಹೇಳಿದರು.

ಹತ್ತಿರವಿರುವ ಪಂಚಾಯಿತಿ ವ್ಯಾಪ್ತಿಗೆ ಸೇರಿಸಿ ಅವರಿಗೆ ಮೂಲ ಸೌಕರ್ಯ ಒದಗಿಸಲು ಅನುವು ಮಾಡ
ಬೇಕು ಎಂದು ಗ್ರಾ.ಪಂ ಸದಸ್ಯ ಜೆ.ಎಂ.ನರಸಿಂಹಮೂರ್ತಿ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT