ಚೇಳೂರು: ಹೋಬಳಿಯಲ್ಲಿ ಸುಮಾರು ಎರಡು ತಿಂಗಳಿಂದ ವಿದ್ಯುತ್ ಕಣ್ಣಾಮುಚ್ಚಾಲೆಗೆ ಬೇಸತ್ತ ಸಾರ್ವಜನಿಕರು ಮತ್ತು ರೈತರು ಬುಧವಾರ ಬೆಳಿಗ್ಗೆ ಬೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ರೈತ ಮುಖಂಡ ಕೈಲಾಸಪ್ಪ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ರೈತರು ವಿಷ ಕುಡಿಯುವ ಸ್ಥಿತಿಗೆ ಬಂದಿದ್ದಾರೆ. ದಿನಕ್ಕೆ ಎರಡು ಗಂಟೆ ವಿದ್ಯುತ್ ಕೊಟ್ಟರೆ ಅದರಲ್ಲಿ ಐದಾರು ಬಾರಿ ಲೈನ್ ಟ್ರಬಲ್ ತೆಗೆಯುತ್ತಾರೆ. ದಿನಕ್ಕೆ ಒಂದು ಗಂಟೆಯೂ ಇರುವುದಿಲ್ಲ ಎಂದು ಆಕ್ರೋಶ
ವ್ಯಕ್ತಪಡಿಸಿದರು.
ಶೇಖರಪ್ಪ ಮಾತನಾಡಿ, ಹೋಬಳಿಯ ಪ್ರತಿಯೊಂದು ಹಳ್ಳಿಯಲ್ಲಿ ಬೆಸ್ಕಾಂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದು ದಿನಕ್ಕೆ ಒಂದು ಗಂಟೆ ವಿದ್ಯುತ್ ನೀಡಿದರೆ ರೈತರು ತೋಟ, ಹೊಲಗಳಲ್ಲಿ ಮತ್ತು ಕುಡಿಯುವ ನೀರಿಗಾಗಿ ಪರದಾಡುವ ಸ್ಥಿತಿ ಎದುರಾಗಿದೆ. ಸರ್ಕಾರದ ಬೇಜವಾಬ್ದಾರಿಗೆ ರೈತರು ಕಣ್ಣೀರಿಡುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಚೇಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ರಂಗಸ್ವಾಮಯ್ಯ, ಹಾಲಿನ ಡೇರಿಯ ಜಯಣ್ಣ, ತಾ.ಪಂ. ಮಾಜಿ ಸದಸ್ಯ ಕೆಂಪರಾಜು, ಬಾಳೆಕಾಯಿ ರಾಜಣ್ಣ, ಚಿಕ್ಕೇಗೌಡ, ನಲ್ಲೂರು ನಟರಾಜು, ಮಂಜುನಾಥ್, ಜಯ ಕರ್ನಾಟಕ ಸಂಘಟನೆ ಅಧ್ಯಕ್ಷ ಕಾರ್ತಿಕೇಯನ್, ಪ್ರವೀಣ್, ಶಿವಕುಮಾರ್ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.