ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೋವಿನಕೆರೆ: ವಿಮಾನ ನಿಲ್ದಾಣಕ್ಕೆ ರೈತರ ವಿರೋಧ

Published 19 ಜನವರಿ 2024, 14:16 IST
Last Updated 19 ಜನವರಿ 2024, 14:16 IST
ಅಕ್ಷರ ಗಾತ್ರ

ತೋವಿನಕೆರೆ: ವಿಮಾನ ನಿಲ್ದಾಣ ನಿರ್ಮಾಣಕ್ಕೆ ಜಮೀನು ಬಿಟ್ಟಕೊಡಲು ಸಾದ್ಯವಿಲ್ಲ ಎಂದು 18 ಹಳ್ಳಿಗಳ ರೈತರು ಶುಕ್ರವಾರ ಸಭೆ ಸೇರಿ ನಿರ್ಣಯ ಕೈಗೊಂಡರು.

ತೋವಿನಕೆರೆ ಪಂಚಾಯಿತಿ ವ್ಯಾಪ್ತಿಯ ಮರಾಠಿಗರ ಪಾಳ್ಯದ ಕೊಲ್ಹಾಪುರದಮ್ಮ ದೇವಾಲಯದ ಅವರಣದಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾದರೆ ಭೂಮಿ, ಗ್ರಾಮಗಳನ್ನು ಕಳೆದುಕೊಳ್ಳುವ ರೈತರ ಸಭೆ ನಡೆಯಿತು.

‘ಎಲ್ಲ ಸರ್ಕಾರಗಳು ಬಡ ರೈತರಿಗಿಂತಲೂ ಉದ್ದಿಮೆದಾರರ ಕಡೆಗೆ ಗಮನ ಹೆಚ್ಚಾಗಿದೆ’ ಎಂದು ಹಲವು ಹೋರಾಟಗಾರರು ಅಭಿಪ್ರಾಯ‍ಪಟ್ಟರು.

ಜಮೀನು ವಶಪಡಿಸಿಕೊಳ್ಳಲು ಬಂದರೆ ನಡೆಸಬೇಕಾದ ಹೋರಾಟಗಳ ಬಗ್ಗೆ ತಿಳಿಸಲಾಯಿತು.

ತುಮಕೂರು ವಿಜ್ಞಾನ ಕೇಂದ್ರದ ಸಿ.ಯತಿರಾಜು, ಸಹಜ ಶಾಲೆಯ ಮಂಜುನಾಥ, ತಿಪಟೂರು ಸ್ವಾಮಿ, ರೈತ ಸಂಘದ ಶಂಕರಪ್ಪ, ರಾಮಕೃಷ್ಣಯ್ಯ ರವಿಶಂಕರ, ಬಿ.ಮರಳಯ್ಯ ಮಾತನಾಡಿದರು.

ಸುರೇಶ್, ಯತಿರಾಜು, ರಮೇಶ್, ಬಸವಲಿಂಗಪ್ಪ, ಟಿ.ಆರ್.ನಾಗರಾಜು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT