ಶನಿವಾರ, 23 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾವಗಡ: ವಿದ್ಯುತ್ ತಗುಲಿ ತಂದೆ, ಮಗಳು ಸಾವು

Published 8 ಜುಲೈ 2023, 14:47 IST
Last Updated 8 ಜುಲೈ 2023, 14:47 IST
ಅಕ್ಷರ ಗಾತ್ರ

ಪಾವಗಡ: ವಿದ್ಯುತ್ ತಗುಲಿ ತಾಲ್ಲೂಕಿನ ವಿರುಪಸಮುದ್ರ ಗ್ರಾಮ ಪಂಚಾಯಿತಿ ಬಸವನಹಳ್ಳಿಯ ತಂದೆ, ಮಗಳು ಇಬ್ಬರೂ ಶುಕ್ರವಾರ ಮೃತಪಟ್ಟಿದ್ದಾರೆ.

ರೈತ ರಾಮಕೃಷ್ಣ ರೆಡ್ಡಿ (65), ನಿರ್ಮಲ (45) ಮೃತರು.

ಗ್ರಾಮದ ಗಡಿಯಲ್ಲಿರುವ ಆಂಧ್ರಪ್ರದೇಶದ ಜಮೀನಿನಲ್ಲಿ ಕೆಲಸಕ್ಕೆಂದು ರೈತ ರಾಮಕೃಷ್ಣರೆಡ್ಡಿ ಅವರು ಹೋದಾಗ ವಿದ್ಯುತ್ ತಗುಲಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಸಾಕಷ್ಟು ಸಮಯವಾದರೂ ತಂದೆ ಮರಳದ ಕಾರಣ ಮಗಳು ನಿರ್ಮಲ ತಂದೆಯನ್ನು ಹುಡುಕಿಕೊಂಡು ಜಮೀನಿಗೆ ಹೋಗಿದ್ದಾರೆ. ರಾಮಕೃಷ್ಣರೆಡ್ಡಿ ಅವರನ್ನು ಮುಟ್ಟಿದ ಕೂಡಲೇ ನಿರ್ಮಲಾ ಅವರಿಗೂ ವಿದ್ಯುತ್ ತಗುಲಿದೆ. ಅವರೂ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT