ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೂಳೂರು: ಅರಣ್ಯ ಇಲಾಖೆಯ ಬೋನಿಗೆ ಬಿದ್ದ ಹೆಣ್ಣು ಚಿರತೆ

Last Updated 9 ಮಾರ್ಚ್ 2022, 10:20 IST
ಅಕ್ಷರ ಗಾತ್ರ

ತುಮಕೂರು: ತಾಲ್ಲೂಕಿನ ಗೂಳೂರು ಹೋಬಳಿ ರೈತರಪಾಳ್ಯದಲ್ಲಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ 3ರಿಂದ 4 ವರ್ಷದ ಹೆಣ್ಣು ಚಿರತೆ ಮಂಗಳವಾರ ರಾತ್ರಿ ಬಿದ್ದಿದೆ.

ಕಳೆದ ಕೆಲ ದಿನಗಳಿಂದ ರೈತರಪಾಳ್ಯ, ಹರಳೂರು, ಜೋಲಮಾರನಹಳ್ಳಿ ಗ್ರಾಮಗಳ ಸುತ್ತಮುತ್ತ ಚಿರತೆ ಕಾಣಿಸಿಕೊಂಡು ಭೀತಿ ಮೂಡಿಸಿತ್ತು. ಗ್ರಾಮಗಳಿಗೆ ನುಗ್ಗಿ ನಾಯಿ, ಮೇಕೆ, ಕುರಿ, ದನಕರುಗಳನ್ನು ತಿಂದು ಹಾಕಿತ್ತು. ಗ್ರಾಮಗಳ ಜನರು, ರೈತರು ಓಡಾಡಲು ಭಯಪಟ್ಟಿದ್ದರು. ಹೊಲ, ತೋಟಗಳಿಗೆ ಹೋಗಲು ಹೆದರುತ್ತಿದ್ದರು.

ಚಿರತೆ ಸೆರೆ ಹಿಡಿಯುವಂತೆ ಈ ಭಾಗದ ಜನರು ಅರಣ್ಯ ಇಲಾಖೆ ಅಧಿಕಾರಿಗಳನ್ನು ಒತ್ತಾಯಿಸಿದ್ದರು. ಆರಂಭದಲ್ಲಿ ರೈತರ ಪಾಳ್ಯದ ಮನೆಯೊಂದರ ಹಿಂಭಾಗ ಬೋನ್ ಇಡಲಾಗಿತ್ತು. ಆದರೆ ಅಲ್ಲಿ ಇಟ್ಟಿದ್ದ ಬೋನಿಗೆ ಚಿರತೆ ಬೀಳದ ಕಾರಣ ಮತ್ತೆ ಗ್ರಾಮದ ರೈತರೊಬ್ಬರ ಜಮೀನಿನ ಸಮೀಪ ಕಳೆದ ಒಂದು ವಾರದಿಂದ ಇಡಲಾಗಿತ್ತು.

ಬೋನಿಗೆ ಬಿದ್ದ ಚಿರತೆ ನೋಡಲು ರೈತರಪಾಳ್ಯ, ಹರಳೂರು, ಜೋಲಮಾರನಹಳ್ಳಿ ಸುತ್ತಮುತ್ತಲಿನ ಹಳ್ಳಿಗಳ ಜನರು ತಂಡೋಪ ತಂಡವಾಗಿ ಬಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT