ತುಮಕೂರು: ಮಾರುಕಟ್ಟೆಯಲ್ಲಿ ಧಾನ್ಯಗಳ ಬೆಲೆ ಸ್ವಲ್ಪ ಮಟ್ಟಿಗೆ ಏರಿಕೆಯತ್ತ ಮುಖ ಮಾಡಿದ್ದರೆ, ತರಕಾರಿ ಬೆಲೆಯಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ. ಬೀನ್ಸ್ ಬೆಲೆ ಇಳಿದಿದ್ದರೆ, ಕ್ಯಾರೇಟ್ ಬೆಲೆ ದುಬಾರಿಯಾಗಿದೆ. ಹಣ್ಣಿನ ಬೆಲೆಯಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ. ಮೊಟ್ಟೆಕೋಳಿ ಮತ್ತೆ ಏರಿಕೆ ಕಂಡಿದ್ದರೆ, ಮೀನು ಬೆಲೆ ತೀವ್ರವಾಗಿ ಕುಸಿತ ಕಂಡಿದೆ.

ಬೀನ್ಸ್ ಬೆಲೆ ಒಮ್ಮೆಲೆ ಕುಸಿತ ಕಂಡಿದ್ದು, ಕೆ.ಜಿ ₹150 ದಾಟಿದ್ದ ದರ, ಈಗ ₹35ಕ್ಕೆ ಇಳಿಕೆಯಾಗಿದೆ. ಬೀನ್ಸ್ ಬೆಲೆ ಕಡಿಮೆಯಾಗುತ್ತಿದ್ದಂತೆ ಕ್ಯಾರೇಟ್ ಬೆಲೆ ಏರಿಕೆಯತ್ತ ಮುಖ ಮಾಡಿದೆ. ಕಳೆದ ವಾರ ಕೆ.ಜಿ 40ಕ್ಕೆ ಮಾರಾಟವಾಗಿದ್ದು, ಈ ವಾರ ₹60ಕ್ಕೆ ಜಿಗಿದಿದೆ. ಮಾರುಕಟ್ಟೆಗೆ ಸ್ಥಳೀಯವಾಗಿ ಬೀನ್ಸ್ ಬರುತ್ತಿದ್ದು, ಬೆಲೆ ಇಳಿಕೆಗೆ ಕಾರಣವಾಗಿದೆ.

ತೊಗರಿ, ಉದ್ದಿನ ಬೇಳೆ ತಲಾ ಕೆ.ಜಿ.ಗೆ ₹10 ಹೆಚ್ಚಳವಾಗಿದ್ದರೆ, ಹೆಸರು, ಕಡಲೆ ಬೇಳೆ, ಉರಿಗಡಲೆ ತಲಾ ₹5 ಏರಿಕೆಯಾಗಿದೆ. ಅಡುಗೆ ಎಣ್ಣೆ ಬೆಲೆಯಲ್ಲೂ ಕೊಂಚ ಇಳಿಕೆ ಕಂಡಿದ್ದು, ಲೀಟರ್‌ಗೆ ₹10ರಿಂದ 15 ಕಡಿಮೆಯಾಗಿದೆ.

ಮೀನು ಸೇವನೆಗೆ ಸಕಾಲ:ಮೀನು ಪ್ರಿಯರಿಗೆ ಸಂತಸದ ಸುದ್ದಿ. ಬಹುತೇಕ ಮೀನಿನ ಬೆಲೆ ತೀವ್ರವಾಗಿ ಕುಸಿದಿದ್ದು, ಕಡಿಮೆ ಬೆಲೆಗೆ ಮೀನು ಸೇವಿಸಲು ಸಕಾಲ. ನಗರದ ಮತ್ಸ ದರ್ಶಿನಿಯಲ್ಲಿ ಎಲ್ಲಾ ವಿಧದ ಮೀನಿನ ಬೆಲೆಯಲ್ಲಿ ಇಳಿಕೆಯಾಗಿದೆ. ಈಗ ಮೀನಿನ ಸೀಜನ್ ಆರಂಭವಾಗಿದ್ದು, ಆವಕ ಹೆಚ್ಚಳವಾಗಿದೆ. ಹಾಗಾಗಿ ಬೆಲೆ ಇಳಿಕೆ ಕಂಡಿದೆ.

ಬಂಗುಡೆ ಕೆ.ಜಿ 220ಕ್ಕೆ ಇಳಿದಿದೆ. ಬೂತಾಯಿ ಕೆ.ಜಿ.ಗೆ ₹30 ಇಳಿದು, ₹170ಕ್ಕೆ ತಗ್ಗಿದೆ. ಅಂಜಲ್ ₹90 ಕಡಿಮೆಯಾಗಿದ್ದು, ₹350ಕ್ಕೆ ಕುಸಿದಿದೆ. ಬೊಳಿಂಜಿರ್ ಕೆ.ಜಿ.ಗೆ ₹70 ಇಳಿಕೆಯಾಗಿದ್ದು, ₹180ಕ್ಕೆ ಮಾರಾಟವಾಗುತ್ತಿದೆ. ಬಿಳಿ ಮಾಂಜಿ ₹490ಕ್ಕೆ ಇಳಿಕೆಯಾಗಿದ್ದರೆ, ಸೀಗಡಿ ಬೆಲೆಯಲ್ಲಿ (ಕೆ.ಜಿ ₹500) ಹೆಚ್ಚಿನ ವ್ಯತ್ಯಾಸವಾಗಿಲ್ಲ.

ಮೊಟ್ಟೆಕೋಳಿ ದುಬಾರಿ: ಕೋಳಿ ಬೆಲೆ ನಿಯಂತ್ರಣಕ್ಕೆ ಬರುತ್ತಿಲ್ಲ. ಮೊಟ್ಟೆಕೋಳಿ ಧಾರಣೆಯು ಕೆ.ಜಿ.ಗೆ ₹170ರಿಂದ 185ಕ್ಕೆ ಏರಿಕೆಯಾಗಿದೆ. ಬ್ರಾಯ್ಲರ್ ಕೋಳಿ ಕೆ.ಜಿ ₹165ಕ್ಕೆ, ಬ್ರಾಯ್ಲರ್ ರೆಡಿ ಚಿಕನ್ ಕೆ.ಜಿ ₹220ಕ್ಕೆ, ಮೊಟ್ಟೆಯನ್ನು 1ಕ್ಕೆ ₹ 5.75ರಂತೆ ಮಾರಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.