ಶನಿವಾರ, ಜುಲೈ 24, 2021
28 °C

ಹಣ್ಣು ಮತ್ತೆ ದುಬಾರಿ; ತರಕಾರಿ ಸ್ಥಿರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಕಳೆದ ವಾರ ಸ್ವಲ್ಪ ಮಟ್ಟಿಗೆ ಇಳಿಕೆ ಕಂಡಿದ್ದ ಹಣ್ಣಿನ ಬೆಲೆ, ಮತ್ತೆ ಈ ವಾರ ಏರಿಕೆಯತ್ತ ಸಾಗಿದೆ. ತರಕಾರಿ ಧಾರಣೆಯಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ. ಧಾನ್ಯ ಬೆಲೆ ತುಸು ಇಳಿದಿದ್ದರೆ, ಕೋಳಿ, ಮೀನಿನ ಬೆಲೆ ದುಬಾರಿಯಾಗಿದೆ.

ಸೇಬು ಮತ್ತೆ ಏರಿಕೆಯಾಗಿದ್ದು, ಏಲಕ್ಕಿ, ಪಚ್ಚಬಾಳೆ ಹಣ್ಣು ತಲಾ ಕೆ.ಜಿ.ಗೆ 10 ದುಬಾರಿಯಾಗಿದೆ. ಪೈನಾಪಲ್ ಬೆಲೆ ದುಪ್ಪಟ್ಟಾಗಿದ್ದು, ಕಿತ್ತಳೆ, ಮಾವಿನ ಹಣ್ಣು ಬೆಲೆ ಹೆಚ್ಚಳವಾಗಿದೆ. ಆಷಾಢ ಮಾಸದ ವೇಳೆಗೆ ಹಣ್ಣಿನ ಬೆಲೆ ಇಳಿಯಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಏರಿಕೆಯತ್ತ ಮುಖ ಮಾಡಿದೆ.

ಇಳಿದ ಮೆಣಸಿನಕಾಯಿ: ಬೀನ್ಸ್ ಬೆಲೆ ಮತ್ತೆ ಕೊಂಚ ಇಳಿಕೆಯಾಗಿದ್ದರೆ, ಕ್ಯಾರೇಟ್, ಬೀಟ್ರೂಟ್ ಬೆಲೆ ಏರಿಕೆಯತ್ತಲೇ ಸಾಗಿದೆ. ಹಿಂದಿನ ವಾರ ದುಬಾರಿಯಾಗಿದ್ದ ಹಸಿಮೆಣಸಿನ ಕಾಯಿ ಕೆ.ಜಿ ₹10, ಸೌತೆಕಾಯಿ ಬೆಲೆ ಸ್ವಲ್ಪ ಕಡಿಮೆಯಾಗಿದ್ದರೆ, ಸೊಪ್ಪಿನ ಬೆಲೆ ತೀವ್ರ ಇಳಿಕೆ ಕಂಡಿದೆ. ಕೊತ್ತಂಬರಿ ಸೊಪ್ಪು ಕೆ.ಜಿ ₹30, ಸಬ್ಬಕ್ಕಿ ಕೆ.ಜಿ ₹20–30, ಮೆಂತ್ಯ ಸೊಪ್ಪು ಕೆ.ಜಿ ₹20, ಪಾಲಕ್ ಸೊಪ್ಪು ಕೆ.ಜಿ ₹20ಕ್ಕೆ ಅಂತರಸನಹಳ್ಳಿ ಮಾರುಕಟ್ಟೆಯಲ್ಲಿ ಮಾರಾಟವಾಗಿದೆ.

ಎಣ್ಣೆ ಸ್ಥಿರ: ಬೇಳೆ, ಅಕ್ಕಿ ಸೇರಿದಂತೆ ಇತರ ಧಾನ್ಯಗಳ ಬೆಲೆ ಬಹುತೇಕ ಸ್ಥಿರವಾಗಿದ್ದರೂ ಉದ್ದಿನ ಬೇಳೆ, ಬಟಾಣಿ, ಗೋಧಿ ಬೆಲೆ ಕೊಂಚ ಏರಿಕೆಯಾಗಿದೆ. ಹೆಸರು ಬೇಳೆ, ಕಡಲೆ ಬೇಳೆ ಬೆಲೆ ಅಲ್ಪ ಇಳಿದಿದೆ. ಆಷಾಢ ಮಾಸದಲ್ಲಿ ಯಾವುದೇ ಶುಭ ಕಾರ್ಯಗಳು ನಡೆಯುವುದಿಲ್ಲ. ಹಾಗಾಗಿ ಧಾನ್ಯಗಳ ಬೆಲೆಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ಇಳಿಕೆಯಾಗುತ್ತಿದೆ ಎಂದು ಮಂಡಿಪೇಟೆ ವರ್ತಕರು ಹೇಳುತ್ತಾರೆ.

ಅಡುಗೆ ಎಣ್ಣೆ ಸನ್‌ಫ್ಲವರ್ ಕೆ.ಜಿ ₹148–152, ಪಾಮಾಯಿಲ್ ಕೆ.ಜಿ ₹113– 166ಕ್ಕೆ ಮಾರಾಟವಾಗಿದೆ. ಹಿಂದಿನ ವಾರ ಇಳಿಕೆಯಾಗಿದ್ದ ಎಣ್ಣೆ ಬೆಲೆ ಈ ವಾರ ಸ್ಥಿರವಾಗಿದೆ.

ಕೋಳಿ ಮತ್ತೆ ದುಬಾರಿ: ಕೋಳಿ ಬೆಲೆ ಮತ್ತೆ ಏರಿಕೆಯಾಗಿದ್ದು, ಬ್ರಾಯ್ಲರ್ ಕೆ.ಜಿ ₹150ಕ್ಕೆ, ರೆಡಿ ಚಿಕನ್ ಕೆ.ಜಿ ₹230, ಮೊಟ್ಟೆ ಕೋಳಿ ಕೆ.ಜಿ ₹140ಕ್ಕೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ. ಮೊಟ್ಟೆ ಕೋಳಿ ಹಿಂದಿನ ವಾರಕ್ಕಿಂತ ದುಬಾರಿಯಾಗಿದೆ.

ಮೀನು ಬೆಲೆ ಏರಿಕೆ: ಕರಾವಳಿ ಭಾಗದಲ್ಲಿ ಮುಂಗಾರು ಮಳೆ ಆರಂಭವಾಗಿದ್ದು, ಸಮುದ್ರದಲ್ಲಿ ಮೀನುಗಾರಿಕೆ ನಿಷೇಧಿಸಿದ್ದು, ಬೆಲೆ ತೀವ್ರವಾಗಿ ಏರಿಕೆ ಕಂಡಿದೆ. ಬಂಗುಡೆ ಕೆ.ಜಿ ₹350, ಬೂತಾಯಿ ₹240, ಬೊಳಿಂಜರ್ ₹180, ಅಂಜಲ್ ಕೆ.ಜಿ ₹1,230, ಬಿಳಿಮಾಂಜಿ ₹1,120, ಸೀಗಡಿ ಕೆ.ಜಿ ₹620ಕ್ಕೆ ನಗರದ ಮತ್ಸ್ಯದರ್ಶಿನಿಯಲ್ಲಿ ಮಾರಾಟವಾಗುತ್ತಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು