ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಳಿಕೆಯತ್ತ ಮುಖ ಮಾಡಿದ ಬೆಳ್ಳುಳ್ಳಿ- ಮೀನು, ಕೋಳಿ ಮಾಂಸ ಬಲು ದುಬಾರಿ

ಮೀನು, ಕೋಳಿ ಮಾಂಸ ಬಲು ದುಬಾರಿ; ತರಕಾರಿ, ಹಣ್ಣು ಯಥಾಸ್ಥಿತಿ
Published 25 ಫೆಬ್ರುವರಿ 2024, 4:09 IST
Last Updated 25 ಫೆಬ್ರುವರಿ 2024, 4:09 IST
ಅಕ್ಷರ ಗಾತ್ರ

ತುಮಕೂರು: ಬೆಳ್ಳುಳ್ಳಿ ದರ ಅಲ್ಪ ಪ್ರಮಾಣದಲ್ಲಿ ಇಳಿಕೆಯತ್ತ ಸಾಗಿದ್ದರೆ, ತರಕಾರಿ, ಸೊಪ್ಪಿನ ಬೆಲೆಯೂ ಕಡಿಮೆಯಾಗಿದೆ. ಹಣ್ಣು, ಬೇಳೆ, ಧಾನ್ಯಗಳ ಧಾರಣೆಯಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ. ಕೋಳಿ ಮಾಂಸ, ಮೀನು ಮತ್ತಷ್ಟು ದುಬಾರಿಯಾಗಿದೆ.

ಬೆಳ್ಳುಳ್ಳಿ ಇಳಿಕೆ: ಗಗನಮುಖಿಯಾಗಿದ್ದ ಬೆಳ್ಳುಳ್ಳಿ ಈ ವಾರ ಇಳಿಕೆಯತ್ತ ಮುಖ ಮಾಡಿದೆ. ಹಿಂದಿನ ವಾರ ಕೆ.ಜಿ ₹400 ದಾಟಿದ್ದರೆ, ಈ ವಾರ ₹280–300ಕ್ಕೆ ತಗ್ಗಿದೆ. ಹೊರಗಡೆಯಿಂದ ಮಾಲು ಬರಲಾರಂಭಿಸಿದ್ದು, ಮುಂದಿನ ದಿನಗಳಲ್ಲಿ ಕಡಿಮೆಯಾಗಬಹುದು ಎಂದು ಹೇಳಲಾಗುತ್ತಿದೆ.

ಬಹುತೇಕ ತರಕಾರಿಗಳ ದರ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದ್ದು, ಗೆಡ್ಡೆಕೋಸು, ಬದನೆಕಾಯಿ, ತೊಂಡೆಕಾಯಿ, ಕ್ಯಾಪ್ಸಿಕಂ ಬೆಲೆ ಇಳಿಕೆಯಾಗಿದೆ. ನುಗ್ಗೇಕಾಯಿ ಒಮ್ಮೆಲೆ ಕೆ.ಜಿಗೆ ₹30 ಏರಿಕೆಯಾಗಿದ್ದು, ಕೆ.ಜಿ ₹80–100ಕ್ಕೆ ತಲುಪಿದೆ. ಮದುವೆ, ಇತರೆ ಶುಭ ಸಮಾರಂಭಗಳಲ್ಲಿ ಸಾಂಬಾರು ತಯಾರಿಯಲ್ಲಿ ನುಗ್ಗೆಕಾಯಿ ಬಳಕೆ ಮಾಡಲಾಗುತ್ತದೆ. ಮದುವೆ ಸೀಜನ್ ಆರಂಭವಾಗಿದ್ದು, ಬೆಲೆ ಹೆಚ್ಚಿಸುವಂತೆ ಮಾಡಿದೆ. ಈಗಾಗಲೇ ಕುಸಿತ ಕಂಡಿದ್ದ ಟೊಮೆಟೊ ದರ ಮತ್ತಷ್ಟು ಇಳಿಕೆಯಾಗಿದೆ. ನಿಂಬೆ ಹಣ್ಣು ದರ ಅಲ್ಪ ಕಡಿಮೆಯಾಗಿದೆ. ಇತರೆ ತರಕಾರಿ ಬೆಲೆ ಯಥಾಸ್ಥಿತಿ ಕಾಯ್ದುಕೊಂಡಿದೆ.

ಕೊತ್ತಂಬರಿ ಸೊಪ್ಪಿಗಷ್ಟೇ ಬೇಡಿಕೆ: ಕಳೆದ ವಾರ ಏರಿಕೆ ಕಂಡಿದ್ದ ಸೊಪ್ಪು (ಕೊತ್ತಂಬರಿ ಹೊರತುಪಡಿಸಿ) ಈ ವಾರ ಮತ್ತೆ ಇಳಿಕೆ ಕಂಡಿದೆ. ಕೊತ್ತಂಬರಿ ಸೊಪ್ಪು ಕೆ.ಜಿ ₹30–40, ಸಬ್ಬಕ್ಕಿ ಕೆ.ಜಿ ₹30–40, ಮೆಂತ್ಯ ಸೊಪ್ಪು ಕೆ.ಜಿ ₹20–30, ಪಾಲಕ್ ಸೊಪ್ಪು (ಕಟ್ಟು) ₹20ಕ್ಕೆ ಕುಸಿದಿದೆ.

ಏಲಕ್ಕಿ ಬಾಳೆ ಇಳಿಕೆ: ಏಲಕ್ಕಿ ಬಾಳೆ ಹಣ್ಣಿನ ಧಾರಣೆ ಅಲ್ಪ ಪ್ರಮಾಣದಲ್ಲಿ ಕಡಿಮೆಯಾಗಿದೆ. ಕಲ್ಲಂಗಡಿ, ಕಿತ್ತಳೆ, ಮೂಸಂಬಿ ಕೊಂಚ ಇಳಿದಿದ್ದರೆ, ಸೇಬು ಸ್ವಲ್ಪ ದುಬಾರಿಯಾಗಿದೆ. ದ್ರಾಕ್ಷಿ ಎಲ್ಲರ ಕೈಗೆಟಕುವಂತಾಗಿದೆ.

ಅಡುಗೆ ಎಣ್ಣೆ: ಕಡಲೆಕಾಯಿ ಎಣ್ಣೆ ಮತ್ತೆ ಅಲ್ಪ ದುಬಾರಿಯಾಗಿದ್ದರೆ, ಪಾಮಾಯಿಲ್ ತುಸು ಇಳಿದಿದೆ. ಗೋಲ್ಡ್‌ವಿನ್ನರ್ ಕೆ.ಜಿ ₹109–112, ಪಾಮಾಯಿಲ್ ಕೆ.ಜಿ ₹84–85, ಕಡಲೆಕಾಯಿ ಎಣ್ಣೆ ಕೆ.ಜಿ ₹155–160ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.

ಬೇಳೆ, ಧಾನ್ಯ: ತೊಗರಿ ಬೇಳೆ ಹೊರತುಪಡಿಸಿದರೆ ಇತರೆ ಬೇಳೆ, ಧಾನ್ಯಗಳ ಧಾರಣೆ ಅಲ್ಪ ಮಟ್ಟಿಗೆ ಕಡಿಮೆಯಾಗಿದ್ದು, ಅವರೆ ಕಾಳು ಒಮ್ಮೆಲೆ ಕೆ.ಜಿಗೆ ₹20 ಕುಸಿದಿದೆ. ಕಡಲೆ ಬೀಜ ಸಹ ಇಳಿಕೆಯಾಗಿದ್ದು, ಗೋಧಿ ದರ ಅಲ್ಪ ತಗ್ಗಿದೆ.

ಮೆಣಸಿನಕಾಯಿ ದುಬಾರಿ: ಕಳೆದ ಕೆಲ ವಾರಗಳಿಂದ ಇಳಿಕೆಯತ್ತ ಸಾಗಿದ್ದ ಮೆಣಸಿನಕಾಯಿ, ಧನ್ಯ ಈಗ ಏರಿಕೆಯತ್ತ ಸಾಗಿದ್ದು, ಕಾಳು ಮೆಣಸು ಮತ್ತಷ್ಟು ದುಬಾರಿಯಾಗಿದೆ. ಹುಣಸೆ ಹಣ್ಣು, ಲವಂಗ, ಗಸಗಸೆ ಬಾದಾಮಿ ದರ ಕಡಿಮೆಯಾಗಿದೆ.

ಧನ್ಯ ಕೆ.ಜಿ ₹110–160, ಬ್ಯಾಡಗಿ ಮೆಣಸಿನಕಾಯಿ ಕೆ.ಜಿ ₹300–320, ಗೌರಿಬಿದನೂರು ಖಾರದ ಮೆಣಸಿನಕಾಯಿ ಕೆ.ಜಿ ₹220–230, ಹುಣಸೆಹಣ್ಣು ₹120–160, ಕಾಳುಮೆಣಸು ಕೆ.ಜಿ ₹680–700, ಜೀರಿಗೆ ಕೆ.ಜಿ ₹380–400, ಸಾಸಿವೆ ಕೆ.ಜಿ ₹85–90, ಮೆಂತ್ಯ ಕೆ.ಜಿ ₹90–95, ಚಕ್ಕೆ ಕೆ.ಜಿ ₹250–270, ಲವಂಗ ಕೆ.ಜಿ ₹900–950, ಗುಣಮಟ್ಟದ ಗಸಗಸೆ ಕೆ.ಜಿ ₹1,250–1,350, ಬಾದಾಮಿ ಕೆ.ಜಿ ₹600–650, ಗೋಡಂಬಿ ಕೆ.ಜಿ ₹600–650, ಒಣದ್ರಾಕ್ಷಿ ಕೆ.ಜಿ ₹190–200ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.

ಕೋಳಿ ಬಲು ದುಬಾರಿ: ಕೋಳಿ ಮಾಂಸ ಮತ್ತಷ್ಟು ದುಬಾರಿಯಾಗಿದೆ. ಕೋಳಿ ಸಾಕಾಣಿಕೆ ಮಾಡುವ ಕಂಪನಿಗಳು ಮನಸ್ಸಿಗೆ ಬಂದಂತೆ ಬೆಲೆ ಹೆಚ್ಚಳ ಮಾಡುತ್ತಿವೆ ಎಂದು ವ್ಯಾಪಾರಸ್ಥರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಬ್ರಾಯ್ಲರ್ ಕೋಳಿ ಕೆ.ಜಿ ₹160, ರೆಡಿ ಚಿಕನ್ ಕೆ.ಜಿ ₹260, ಸ್ಕಿನ್‌ಲೆಸ್ ಕೆ.ಜಿ ₹280, ಮೊಟ್ಟೆ ಕೋಳಿ (ಫಾರಂ) ಕೆ.ಜಿ ₹100ಕ್ಕೆ ಏರಿಕೆಯಾಗಿದೆ.

ಮೀನು ಏರಿಕೆ: ಸಮುದ್ರ ಮೀನಿನ ಧಾರಣೆಯೂ ಎರಡು ವಾರದಿಂದ ಏರಿಕೆಯನ್ನು ದಾಖಲಿಸಿದ್ದು, ಅಂಜಲ್ ಬಿಟ್ಟರೆ ಉಳಿದ ಮೀನು ದುಬಾರಿಯಾಗಿದೆ. ಬಂಗುಡೆ ಕೆ.ಜಿ ₹280, ಬೂತಾಯಿ ಕೆ.ಜಿ ₹250, ಬೊಳಿಂಜರ್ ಕೆ.ಜಿ ₹220, ಅಂಜಲ್ ಕೆ.ಜಿ ₹910, ಬಿಳಿಮಾಂಜಿ ಕೆ.ಜಿ ₹1,260, ಕಪ್ಪುಮಾಂಜಿ ಕೆ.ಜಿ ₹700, ಇಂಡಿಯನ್ ಸಾಲ್ಮನ್ ಕೆ.ಜಿ ₹910, ಸೀಗಡಿ ಕೆ.ಜಿ ₹500–720, ಏಡಿ ಕೆ.ಜಿ 650ಕ್ಕೆ ನಗರದ ಮತ್ಸ್ಯದರ್ಶಿನಿಯಲ್ಲಿ ಮಾರಾಟವಾಗುತ್ತಿದೆ.

ಹಣ್ಣು (ಬೆಲೆ ಕೆ.ಜಿ ₹)

ಸೇಬು;230

ದಾಳಿಂಬೆ;220

ಮೂಸಂಬಿ;80

ಕಿತ್ತಳೆ;60

ಸಪೋಟ;100

ಏಲಕ್ಕಿ ಬಾಳೆ;55–60

ಪಚ್ಚಬಾಳೆ;30

ಸೀಬೆ;100

ಪೈನಾಪಲ್;80

ಪಪ್ಪಾಯ;30

ಕರಬೂಜ;50

ಕಲ್ಲಂಗಡಿ;30

ದ್ರಾಕ್ಷಿ;50

ಧಾನ್ಯ (ಬೆಲೆ ಕೆ.ಜಿ ₹) (ಮಂಡಿಪೇಟೆ)

ತೊಗರಿ ಬೇಳೆ;145–160

ಕಡಲೆ ಬೇಳೆ;78–85

ಉದ್ದಿನ ಬೇಳೆ;140–150

ಹೆಸರು ಬೇಳೆ;110–115

ಕಡಲೆಕಾಳು;75–80

ಹೆಸರು ಕಾಳು;120–125

ಅಲಸಂದೆ;95–100

ಅವರೆಕಾಳು;110–130

ಹುರುಳಿಕಾಳು;75–80

ಹುರಿಗಡಲೆ;90–100

ಬಟಾಣಿ;95–100

ಕಡಲೆ ಬೀಜ;120–125

ಗೋಧಿ;42–48

ಸಕ್ಕರೆ;39–40

**

ತರಕಾರಿ (ಬೆಲೆ ಕೆ.ಜಿ ₹) (ಅಂತರಸನಹಳ್ಳಿ ಮಾರುಕಟ್ಟೆ)

ಬೀನ್ಸ್;30–40

ಕ್ಯಾರೇಟ್;30–40

ಬೀಟ್ರೂಟ್‌;30–40

ಈರುಳ್ಳಿ;25–30

ಬೆಳ್ಳುಳ್ಳಿ;280–300

ಟೊಮೆಟೊ;10–15

ಆಲೂಗಡ್ಡೆ;25–30

ಗೆಡ್ಡೆಕೋಸು;15–20

ಮೂಲಂಗಿ;15–20

ಬೆಂಡೆಕಾಯಿ;30–40

ಬದನೆಕಾಯಿ;25–30

ಎಲೆಕೋಸು;25–30

ಹೂಕೋಸು(1ಕ್ಕೆ);20–30

ತೊಂಡೆಕಾಯಿ;30–40

ಹಾಗಲಕಾಯಿ;30–40

ನುಗ್ಗೆಕಾಯಿ;80–100

ಮೆಣಸಿನಕಾಯಿ;40–50

ಕ್ಯಾಪ್ಸಿಕಂ;40–50

ಶುಂಠಿ;80–100

ಸೌತೆಕಾಯಿ 1ಕ್ಕೆ;8–10

ನಿಂಬೆಹಣ್ಣು 1ಕ್ಕೆ;4–5

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT