ಬುಧವಾರ, ಜುಲೈ 28, 2021
21 °C

ಎಡೆಯೂರು ದೇವಸ್ಥಾನಕ್ಕೆ19 ಕೆ.ಜಿ ಚಿನ್ನದ ರಥ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕುಣಿಗಲ್: ಕರೊನಾ ಲಾಕ್‌ಡೌನ್ ಕಾರಣ ದೇವಾಲಯಗಳಿಗೆ ಪ್ರವೇಶವೇ ಇಲ್ಲದ ದಿನಗಳಲ್ಲಿ ಭಕ್ತರೊಬ್ಬರು 19 ಕೆ.ಜಿ ತೂಕದ ಸುಮಾರು ₹9 ಕೋಟಿ ಮೌಲ್ಯದ ಚಿನ್ನದ ರಥವನ್ನು ಎಡೆಯೂರು ಸಿದ್ಧಲಿಂಗೇಶ್ವರ ದೇವಾಲಯಕ್ಕೆ ಸಮರ್ಪಿಸಿದ್ದಾರೆ.

ಕುಣಿಗಲ್ ತಾಲ್ಲೂಕಿನ ತೇವಡನಹಳ್ಳಿ ಶಿವಣ್ಣ ಅವರು ಚಿನ್ನದ ರಥ ಸಮರ್ಪಿಸಿದವರು. ಬೆಂಗಳೂರಿನಲ್ಲಿ ನೆಲೆಸಿ ಬಸ್ ಕಂಡಕ್ಟರ್ ಆಗಿದ್ದು, ನಂತರ ಗುತ್ತಿಗೆದಾರರಾಗಿ ಆರ್ಥಿಕವಾಗಿ ಸುಸ್ಥಿತಿಯಲ್ಲಿದ್ದಾರೆ. ಬುಧವಾರ ನಡೆದ ಸರಳ ಸಮಾರಂಭದಲ್ಲಿ ಬಾಳೆಹೊನ್ನೂರು ಶಾಖಾ ಮಠದ ರೇಣುಕಾಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ಶಿವಣ್ಣ, ರುದ್ರಾಣಮ್ಮ ದಂಪತಿ ಚಿನ್ನದ ರಥವನ್ನು ದೇಗುಲಕ್ಕೆ ಸಮರ್ಪಿಸಿದ್ದಾರೆ.

‘ಸಿದ್ಧಲಿಂಗೇಶ್ವರರಿಂದ ಬಂದದ್ದನ್ನು ಅವರಿಗೇ ಸಮರ್ಪಣೆ ಮಾಡಿ ದೇವಾಲಯಕ್ಕೆ ಹರಕೆ ರೂಪದಲ್ಲಿ ರಥ ಸಮರ್ಪಿಸಿದ್ದೇನೆ’ ಎನ್ನುತ್ತಾರೆ ಶಿವಣ್ಣ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು