ಭಾನುವಾರ, ಏಪ್ರಿಲ್ 18, 2021
24 °C
ಆರು ವರ್ಷದ ಬಳಿಕ ದೇವಸ್ಥಾನ ಆಡಳಿತ ಹಸ್ತಾಂತರ

ಹೈಕೋರ್ಟ್‌ ತೀರ್ಪು: ಗೊರವನಹಳ್ಳಿ ಲಕ್ಷ್ಮಿ ದೇಗುಲ ಮತ್ತೆ ಟ್ರಸ್ಟ್ ವಶಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊರಟಗೆರೆ: ಟ್ರಸ್ಟ್‌ನಲ್ಲಿನ ವಿವಾದದಿಂದಾಗಿ ಆರು ವರ್ಷಗಳಿಂದ ಮಧುಗಿರಿ ಉಪವಿಭಾಗಾಧಿಕಾರಿ ಆಡಳಿತಕ್ಕೆ ಒಳಪಟ್ಟಿದ್ದ ತಾಲ್ಲೂಕಿನ ಪ್ರಸಿದ್ಧ ಗೊರವನಹಳ್ಳಿ ಮಹಾಲಕ್ಷ್ಮಿ ದೇವಾಲಯದ ಆಡಳಿತವನ್ನು ಹೈಕೋರ್ಟ್‌ ಆದೇಶದ ಮೇರೆಗೆ ಮತ್ತೆ ಮಹಾಲಕ್ಷ್ಮಿ ಚಾರಿಟಬಲ್ ಟ್ರಸ್ಟ್‌ಗೆ ಹಸ್ತಾಂತರಿಸಲಾಯಿತು.

2015ರ ಮಾರ್ಚ್‌ನಲ್ಲಿ ಮಹಾಲಕ್ಷ್ಮಿ ಚಾರಿಟಬಲ್ ಟ್ರಸ್ಟ್‌ನಲ್ಲಿ ಉಂಟಾದ ವಿವಾದದಿಂದಾಗಿ ತಹಶೀಲ್ದಾರ್  ವರದಿ ಆಧಾರದಲ್ಲಿ ದೇವಾಲಯದ ಆಡಳಿತವನ್ನು ಧಾರ್ಮಿಕ ದತ್ತಿ ಇಲಾಖೆಗೆ ವಹಿಸಲಾಗಿತ್ತು. ಮಧುಗಿರಿ ಉಪವಿಭಾಗಾಧಿಕಾರಿಯನ್ನು ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಲಾಗಿತ್ತು.

ಈ ನಿರ್ಧಾರದ ವಿರುದ್ಧ ಟ್ರಸ್ಟ್ ಸದಸ್ಯರು ಹೈಕೋರ್ಟ್ ಮೊರೆ ಹೋಗಿದ್ದರು. ಸರ್ಕಾರದ ಧಾರ್ಮಿಕ ದತ್ತಿ ಇಲಾಖೆ ನಿಯಮಾನುಸಾರ ದೇವಾಲಯದ ಆಡಳಿತವನ್ನು ಕಳೆದ ಆರು ವರ್ಷಗಳಿಂದ ಮಧುಗಿರಿ ಉಪವಿಭಾಗಾಧಿಕಾರಿಗಳ ಆಡಳಿತದಲ್ಲೆ ನಡೆಸಲಾಗುತ್ತಿತ್ತು.

ಕಾಯ್ದೆಯ ಅನುಸಾರ ದೇವಸ್ಥಾನವನ್ನು ಘೋಷಿತ ಸಂಸ್ಥೆಯೆಂದು ಅಂತಿಮ ತೀರ್ಪು ನೀಡುವವರೆಗೆ ದೇವಾಲಯದ ಆಡಳಿತವನ್ನು ಟ್ರಸ್ಟ್ ವಹಿಸಿಕೊಳ್ಳಬಹುದು. ಆದರೆ, ಸಾರ್ವಜನಿಕರ ವಂತಿಗೆ ಸೇರಿದಂತೆ ಇತರ ಮಹತ್ವದ ತೀರ್ಮಾನ ತೆಗೆದುಕೊಳ್ಳದಂತೆ ಷರತ್ತು ವಿಧಿಸಿದೆ. ದೇವಾಲಯದ ದಾಖಲೆ ಪತ್ರಗಳನ್ನು ಪ್ರತಿ ತಿಂಗಳು ಜಿಲ್ಲಾಧಿಕಾರಿ ಗಮನಕ್ಕೆ ತರುವಂತೆ ಆದೇಶಿಸಿದೆ.

ಮಧುಗಿರಿ ಉಪವಿಭಾಗಾಧಿಕಾರಿ ಸೋಮಪ್ಪ ಕಡಕೊಳ ಅವರು ದೇವಾಲಯದ ಸಂಪೂರ್ಣ ಆಡಳಿತವನ್ನು ಟ್ರಸ್ಟ್ ಅಧ್ಯಕ್ಷ ಟಿ.ಆರ್.ಶ್ರೀರಂಗಯ್ಯ ಅವರಿಗೆ ಅಧಿಕೃತವಾಗಿ ಶನಿವಾರ ಸಂಜೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಬಿ.ಎಂ.ಗೋವಿಂದರಾಜು, ಟ್ರಸ್ಟ್ ಕಾರ್ಯದರ್ಶಿ ಚಿಕ್ಕನರಸಪ್ಪ, ಧರ್ಮದರ್ಶಿಗಳಾದ ಟಿ.ಆರ್.ರಂಗಶಾಮಯ್ಯ, ರಾಮಕೃಷ್ಣಯ್ಯ, ನರಸರಾಜು, ರಂಗಸ್ವಾಮಯ್ಯ, ಉಪತಹಶೀಲ್ದಾರ್ ಮಧುಚಂದ್ರ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು