ಪಟ್ಟನಾಯಕನಹಳ್ಳಿ: ಕಾಂಗ್ರೆಸ್ ಸರ್ಕಾರ ರಚನೆಯಾಗಿ ಕೆಲವೇ ದಿನಗಳಲ್ಲಿ ಕೊಟ್ಟ ವಾಗ್ದಾನ ಈಡೇರಿಸಿದೆ ಎಂದು ಶಾಸಕ ಟಿ.ಬಿ.ಜಯಚಂದ್ರ ಹೇಳಿದರು.
ಇಲ್ಲಿನ ಸ್ಫಟಿಕಪುರಿ ಮಹಾ ಸಂಸ್ಥಾನ ಮಠಕ್ಕೆ ಭೇಟಿ ನೀಡಿ ಓಂಕಾರೇಶ್ವರ ಮತ್ತು ದತ್ತಾತ್ರೇಯ ಸ್ವಾಮಿಗೆ ಪೂಜೆ ಸಲ್ಲಿಸಿದರು.
ರಾಜಕೀಯ ನಿಂತ ನೀರಲ್ಲ. ಮುಂದಿನ ದಿನಗಳಲ್ಲಿ ಸಚಿವ ಸ್ಥಾನ ಸಿಗುವ ಭರವಸೆ ಇದೆ. ದೇವರ ಕೃಪೆ ಇದ್ದರೆ ನಾಳೆಯೇ ಮಂತ್ರಿ ಸ್ಥಾನ ಸಿಗಬಹುದು ಎಲ್ಲದಕ್ಕೂ ಕಾಲವೇ ಉತ್ತರ ಕೊಡಲಿದೆ ಎಂದು ಹೇಳಿದರು.
ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಅರ್.ಮಂಜುನಾಥ್, ಗ್ರಾ.ಪಂ.ಮಾಜಿ ಅಧ್ಯಕ್ಷೆ ಮೆಹರ್ ತಾಜ್ ಬಾಬು, ಸದಸ್ಯರಾದ ತುಳಸಿ ಮಧುಸೂದನ್, ಭೂತರಾಜ್, ಮಂಜುನಾಥ್ ಸ್ವಾಮಿ ಮುಖಂಡರಾದ ಚಂದ್ರು, ಶಿವಣ್ಣ, ಆನಂದ್, ಸಿದ್ದನಹಳ್ಳಿ ದೇವರಾಜ್, ರಾಜಣ್ಣ, ಲಕ್ಷ್ಮೀದೇವಮ್ಮ, ಲಿಂಗಭೂಷಣ ಇದ್ದರು.