ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣೇಶೋತ್ಸವ | ಸಸಿ ನೆಟ್ಟು ಪೋಷಣೆಗೆ ಪಣ

Last Updated 18 ಸೆಪ್ಟೆಂಬರ್ 2019, 12:58 IST
ಅಕ್ಷರ ಗಾತ್ರ

ಹುಳಿಯಾರು: ಹೋಬಳಿಯ ಮೇಲನಹಳ್ಳಿ ವಿಘ್ನೇಶ್ವರ ಯುವಕ ಸಂಘದ ಪದಾಧಿಕಾರಿಗಳು ಗ್ರಾಮದಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶಮೂರ್ತಿ ಉತ್ಸವದ ಅಂಗವಾಗಿ ಸಸಿಗಳನ್ನು ನೆಟ್ಟು ಪೋಷಣೆ ಮಾಡುವ ಸಂಕಲ್ಪ ಮಾಡಿದ್ದಾರೆ.

ಗ್ರಾಮದಲ್ಲಿ ಸಮೀಪದಿಂದ ಭೂತಪ್ಪನಗುಡಿಗೆ ಸುಮಾರು ಒಂದು ಕಿ.ಮೀ. ದೂರವಿದೆ. ಈ ರಸ್ತೆಯ ಅಕ್ಕಪಕ್ಕ ಸುಮಾರು 100ಕ್ಕೂ ಹೆಚ್ಚು ಸಸಿಗಳನ್ನು ನೆಟ್ಟಿದ್ದಾರೆ. ಹುಣಸೆ, ಹೊಂಗೆ, ಜಂಬುನೆರಳೆ ಸೇರಿದಂತೆ ವಿವಿಧ ಜಾತಿಯ ಸಸಿಗಳನ್ನು ನೆಟ್ಟಿದ್ದಾರೆ.

ಅವುಗಳಿಗೆ ಸಂಪೂರ್ಣ ಬೇಲಿ ನಿರ್ಮಿಸಿ ರಕ್ಷಣೆಯ ಜತೆ ನೀರು ಹಾಕುವ ಹೊಣೆಯನ್ನು ಯುವಕ ಸಂಘದ 7 ಮಂದಿ ಹೊತ್ತುಕೊಂಡಿದ್ದಾರೆ. ಮುಂದಿನ ಗಣೇಶೋತ್ಸವದ ವೇಳೆಗೆ ದತ್ತು ಪಡೆದಿರುವ ಸಸಿಗಳು ಹುಲುಸಾಗಿ ಬೆಳೆದಿರುತ್ತವೋ ಅವರಿಗೆ ಸಂಘದ ವತಿಯಿಂದ ಬಹುಮಾನ ನೀಡುವ ತೀರ್ಮಾನವನ್ನು ಕೈಗೊಂಡಿದ್ದಾರೆ.

ಯುವಕರ ಸಸಿ ನೆಡುವ ಕಾರ್ಯಕ್ರಮ ಜನ ಮೆಚ್ಚುಗೆಗೆ ಪಾತ್ರವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT