ಹುಳಿಯಾರು: ವೇಗವಾಗಿ ಬೆಳೆಯುತ್ತಿರುವ ಪಟ್ಟಣಕ್ಕೆ ಸೂಕ್ತ ಉದ್ಯಾನಗಳ ಕೊರತೆ ಇದೆ. ಈಗಾಗಲೇ ಪಟ್ಟಣದ ಹೃದಯ ಭಾಗದಲ್ಲಿರುವ ಮಕ್ಕಳ ಉದ್ಯಾನ ಒತ್ತುವರಿ ಸಮಸ್ಯೆ ಹಾಗೂ ನಿರ್ವಹಣೆ ಕೊರತೆಯಿಂದಾಗಿ ಇದ್ದೂ ಇಲ್ಲದಂತಾಗಿದೆ.

ಪಟ್ಟಣವು ಪ್ರಮುಖ ವಾಣಿಜ್ಯ ಕೇಂದ್ರ ಹಾಗೂ ಐದಾರು ಜಿಲ್ಲೆಗಳನ್ನು ಸಂದಿಸುವ ಕೇಂದ್ರ ಸ್ಥಳ. ಮೂರು ರಾಷ್ಟ್ರೀಯ ಹೆದ್ದಾರಿಗಳು ಕೂಡ ಪಟ್ಟಣದಲ್ಲಿ ಹಾದು ಹೋಗುತ್ತವೆ. ಆದರೆ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೇಗೇರಿಸಿದ್ದು ಬಿಟ್ಟರೆ ಸರ್ಕಾರ ಮೂಲ ಸೌಕರ್ಯಗಳನ್ನು ಒದಗಿಸಿಲ್ಲ.

ಹಿರಿಯ ನಾಗರಿಕರು ಹಾಗೂ ಮಕ್ಕಳು ಸಮಯ ಕಳೆಯಲು ಉದ್ಯಾನ ಅಗತ್ಯ. ಪಟ್ಟಣದಲ್ಲಿ ಹಿರಿಯ ನಾಗರಿಕರು ಕೂಡ ಹೆಚ್ಚಾಗಿದ್ದು ಅವರಂತೂ ಪ್ರಮುಖ ರಸ್ತೆ ಅಂಗಡಿ ಸಾಲುಗಳಲ್ಲಿ ಕಾಲ ಕಳೆಯುವಂತಾಗಿದೆ. ಪಟ್ಟಣಕ್ಕೆ ಕೆಲಸ ಅರಿಸಿ ಬರುವವರಿಗೆ ಸಮಯ ಕಳೆಯಲು ಸೂಕ್ತ ಸ್ಥಳವಿಲ್ಲದಾಗಿದೆ.

ಮಕ್ಕಳ ಉದ್ಯಾನ ಒತ್ತುವರಿ: ಪಟ್ಟಣದ ಹೃದಯ ಭಾಗವಾಗಿರುವ ಪೊಲೀಸ್ ವಸತಿ ಗೃಹ ಮುಂಭಾಗದ ಮಕ್ಕಳ ಉದ್ಯಾನ ಸೂಕ್ತ ನಿರ್ವಹಣೆ ಇಲ್ಲದೆ ಅವನತಿಯ ಹಾದಿ ಹಿಡಿದಿದೆ. ಉದ್ಯಾನದತ್ತ ಸ್ಥಳೀಯರು ಗಮನಹರಿಸದ ಕಾರಣ ಸುತ್ತ ಬೇಲಿ ಬೆಳೆದಿದೆ. ಕೆಲಕಡೆ ಪೆಟ್ಟಿ ಅಂಗಡಿಗಳು ತಲೆ ಎತ್ತಿವೆ. ಉದ್ಯಾನದೊಳಗೆ ಮಕ್ಕಳು ಆಟವಾಡಲು ಇದ್ದ ಪರಿಕರಗಳು ಕೂಡ ಇಲ್ಲವಾಗಿವೆ. ಇವುಗಳ ಮಧ್ಯೆ ಜಲಜೀವನ ಮಿಷನ್ ಯೋಜನೆಯ ಎರಡು ಬೃಹತ್ ಗಾತ್ರದ ಜಲ ಸಂಗ್ರಹಾರಗಳು ತಲೆ ಎತ್ತಿದ ಕಾರಣ ಇದ್ದ ಒಂದಿಷ್ಟು ಉದ್ಯಾನದ ಜಾಗವು ಕಬಳಿಕೆಯಾಗಿದೆ. ಜಲಸಂಗ್ರಹಗಾರ ಕಾಮಗಾರಿ ಆರಂಭವಾದ ಮೇಲೆ ಉದ್ಯಾನ ಸರಕು ಸಂಗ್ರಹಗಾರವಾಗಿ ಮಾರ್ಪಟ್ಟಿದೆ.

ಹಲವು ವರ್ಷಗಳ ಹಿಂದೆ ಸ್ಥಳೀಯ ಪೊಲೀಸರು ಉದ್ಯಾನವನದ ಬೇಲಿ ತೆಗಿಸಿ ಅದರೊಳಗಿದ್ದ ಮಕ್ಕಳ ಆಟಿಕೆ ಪರಿಕರಗಳಿಗೆ ಒಂದಿಷ್ಟು ಜೀವ ನೀಡಿದ್ದು ಬಿಟ್ಟರೆ ಸ್ಥಳೀಯ ಆಡಳಿತ ಇತ್ತ ಗಮನ ಹರಿಸಿಲ್ಲ ಎಂದು ಸ್ಥಳಿಯರು ದೂರಿದ್ದಾರೆ.

ಯಾರು ಏನಂದರು?

ಹಿರಿಯ ನಾಗರಿಕರು ನಿವೃತ್ತರು ಕಾಲ ಕಳೆಯಲು ಸೂಕ್ತ ಸ್ಥಳವಿಲ್ಲ. ಬೆಳಗ್ಗೆ ಹಾಗೂ ಸಂಜೆ ವಿಶ್ರಾಂತಿ ಪಡೆಯಲು ತೋಟಗಳ ಸಾಲಿಗೆ ಹೋಗುವಂತಾಗಿದೆ. – ನಾರಾಯಣಪ್ಪ ನಿವೃತ್ತ ಶಿಕ್ಷಕ

ಪಟ್ಟಣಕ್ಕೆ ಗ್ರಾಮೀಣ ಭಾಗದಿಂದ ಸಾರ್ವಜನಿಕರು ಬರುತ್ತಾರೆ. ಕೆಲಸ ವಿಳಂಬ ಸಮಯ ಮುಂದೂಡಿಕೆಯಾದರೆ ಆ ಸಮಯ ಕಳೆಯಲು ಸ್ಥಳವಿಲ್ಲ. ಉದ್ಯಾನ ನಿರ್ಮಿಸಿ ಮರ– ಗಿಡ ಬೆಳೆಸಿದರೆ ಅನುಕೂಲ – ಆರ್.ಬಿ.ಹನುಮಯ್ಯ ರಂಗನಕೆರೆ

ಹಂತ ಹಂತವಾಗಿ ಮೂಲ ಸೌಕರ್ಯ ಒದಗಿಸಲು ಬದ್ಧ. ಪಟ್ಟಣಕ್ಕೆ ಉದ್ಯಾನ ಅವಶ್ಯಕ. ಮುಂದಿನ ದಿನಗಳಲ್ಲಿ ನಡೆಯುವ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿ ಯೋಜನೆ ರೂಪಿಸಲಾಗುತ್ತದೆ – ಪ್ರೀತಿ ರಾಘವೇಂದ್ರ, ಪ.ಪಂ. ಅಧ್ಯಕ್ಷೆ

ಹಲವು ವರ್ಷಗಳಿಂದ ಮಕ್ಕಳ ಉದ್ಯಾನವನವಿದ್ದು ಈ ಹಿಂದೆ ಮಕ್ಕಳು ವೃದ್ಧರು ಕಾಲ ಕಳೆಯುತ್ತಿದ್ದರು. ಆದರೆ ಇತ್ತೀಚೆಗೆ ಸೂಕ್ತ ನಿರ್ವಹಣೆ ಇಲ್ಲದೆ ನೆಲೆ ಕಳೆದುಕೊಂಡಿದೆ – ಟೈಲರ್ ಸೂರಪ್ಪ, ಹುಳಿಯಾರು

ಪಟ್ಟಣದಲ್ಲಿ ಮೂಲಸೌಕರ್ಯಕ್ಕೆ ಹೋರಾಟಗಳು ನಡೆಯುತ್ತಲೇ ಇವೆ. ಹುಳಿಯಾರು ನಾಗರಿಕ ಹಿತರಕ್ಷಣಾ ವೇದಿಕೆ ಅಸ್ತಿತ್ವಕ್ಕೆಯಿಂದ ಸಂಬಂಧಪಟ್ಟವರಿಗೆ ಮನವಿ ನೀಡಲಾಗುವುದು – ಭಟ್ಟರಹಳ್ಳಿ ರಾಮಚಂದ್ರಯ್ಯ ಹುಳಿಯಾರು, ನಾಗರಿಕ ಹಿತರಕ್ಷಣಾ ವೇದಿಕೆ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.