ಭಾನುವಾರ, ಮೇ 22, 2022
26 °C

ತುಮಕೂರು: ಹೆಂಡತಿಯನ್ನು ಕೊಂದ ಗಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಗಂಡನೇ ಹೆಂಡತಿಯನ್ನು ಕೊಲೆ ಮಾಡಿರುವ ಘಟನೆ ನಗರದ ಸರಸ್ವತಿಪುರದಲ್ಲಿ ಬುಧವಾರ ರಾತ್ರಿ ನಡೆದಿದೆ.

ಪತ್ನಿ ಐಶ್ವರ್ಯ (19) ಅವರನ್ನು ಕೊಲೆಮಾಡಿ ಪತಿ ನಾಗರಾಜು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ದಂಪತಿ ನಡುವೆ ಬುಧವಾರ ತಡರಾತ್ರಿ ಜಗಳ ನಡೆದಿದ್ದು, ಗಲಾಟೆ ವಿಕೋಪಕ್ಕೆ ಹೋಗಿದೆ. ಪತ್ನಿಯನ್ನು ಹೊಡೆದು ಸಾಯಿಸಿ ನಂತರ ಮನೆಗೆ ಬೀಜ ಹಾಕಿಕೊಂಡು ತೆರಳಿದ್ದಾರೆ ಎನ್ನಲಾಗಿದೆ.

ಮಾರಿಯಮ್ಮನಪಾಳ್ಯದ ನಾಗರಾಜು ಜತೆಗೆ ಸಕಲೇಶಪುರ ತಾಲ್ಲೂಕು ಗೊಳಗೊಂಡೆ ಗ್ರಾಮದ ಐಶ್ವರ್ಯ ವಿವಾಹ 2019ರಲ್ಲಿ ನಡೆದಿತ್ತು. ತಾಲ್ಲೂಕಿನ ಹೊನ್ನುಡಿಕೆ ಹ್ಯಾಂಡ್‌ಪೋಸ್ಟ್ ಬಳಿಯ ಪೆಟ್ರೋಲ್ ಬಂಕ್‌ನಲ್ಲಿ ಮ್ಯಾನೇಜರಾಗಿ ಕೆಲಸ ನಿರ್ವಹಿಸುತ್ತಿದ್ದು, ಸರಸ್ವತಿಪುರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.

ಮದುವೆ ಸಮಯದಲ್ಲಿ ಒಡವೆ ಹಾಗೂ ₹50 ಸಾವಿರ ನಗದು ಕೊಡಲಾಗಿತ್ತು. ನಂತರ ಹೆಚ್ಚಿನ ವರದಕ್ಷಿಣೆ ತರುವಂತೆ ಒತ್ತಾಯಿಸಿ ಐಶ್ವರ್ಯ ಜತೆಗೆ ಜಗಳ ಮಾಡುತ್ತಿದ್ದರು. ಕಾರು ತೆಗೆದುಕೊಳ್ಳಲು ₹1 ಲಕ್ಷ, ಬೈಕ್‌ ಖರೀದಿಗೆ ₹20 ಸಾವಿರ ನೀಡಲಾಗಿತ್ತು. ಗಂಡ ಹಾಗೂ ಅವರ ಮನೆಯವರು ಸೇರಿಕೊಂಡು ಮಗಳಿಗೆ ಕಿರುಕುಳ ನೀಡುತ್ತಿದ್ದರು ಎಂದು ಮೃತಳ ತಂದೆ ಉದಯ್ ದೂರು ನೀಡಿದ್ದಾರೆ.

ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು