ಶನಿವಾರ, ಮಾರ್ಚ್ 6, 2021
32 °C
ದಿಶಾ ಸಮಿತಿ ಸಭೆಯಲ್ಲಿ ವೆಬ್‌ ಪೋರ್ಟಲ್‌, ‘ಶುದ್ಧ ನೀರು’ ಮೊಬೈಲ್ ತಂತ್ರಾಂಶಕ್ಕೆ ಚಾಲನೆ

ತುಮಕೂರು: ಜಿಐಎಸ್‌ನಲ್ಲಿ ಮಾಹಿತಿ ದಾಖಲೆ ಕಡ್ಡಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಜಿಲ್ಲೆಯ ವಿವಿಧ ಇಲಾಖೆಗಳ ಮಾಹಿತಿ ಒಳಗೊಂಡ ತುಮಕೂರು ಭೌಗೋಳಿಕ ಮಾಹಿತಿ ಸ್ತರ (ಜಿಐಎಸ್) ವೆಬ್‌ ಪೋರ್ಟಲ್‌ ಮತ್ತು ಶುದ್ಧ ನೀರಿಗೆ ಸಂಬಂಧಿಸಿದ ಮೊಬೈಲ್ ತಂತ್ರಾಂಶವನ್ನು ಇಲ್ಲಿನ ಜಿಲ್ಲಾ ಪಂಚಾಯಿತಿಯಲ್ಲಿ ಶುಕ್ರವಾರ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆಯಲ್ಲಿ ಸಂಸದ ಜಿ.ಎಸ್.ಬಸವರಾಜು ಬಿಡುಗಡೆ ಮಾಡಿದರು.

‘ಆಯಾ ಇಲಾಖೆಗಳಿಗೆ ಸಂಬಂಧಿಸಿದಂತೆ ಯೋಜನೆಗಳ ಅನುಷ್ಠಾನದ ಸಾಮಾನ್ಯ ಮಾಹಿತಿ ಹಾಗೂ ಅಭಿವೃದ್ಧಿ ಕಾಮಗಾರಿಗಳ ಯೋಜನಾವಾರು ಮಾಹಿತಿಯನ್ನು ಜಿಐಎಸ್‌ನಲ್ಲಿ ಕಡ್ಡಾಯವಾಗಿ ದಾಖಲಿಸಬೇಕು’ ಎಂದರು.

ಗ್ರಾಮಮಟ್ಟದಿಂದ ಜಿಲ್ಲಾ ಮಟ್ಟದವರೆಗಿನ ಮಾಹಿತಿಯನ್ನು ಪ್ರಾಥಮಿಕ ಹಂತದಿಂದ ಸಂಗ್ರಹಿಸಿ ಪಾರದರ್ಶಕವಾಗಿ ಕಾಲಕಾಲಕ್ಕೆ ಜಿಐಎಸ್‌ನಲ್ಲಿ ಅಡಕಗೊಳಿಸಬೇಕು. ಈ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರ ಅನುದಾನವನ್ನು ಸದ್ಬಳಕೆ ಮಾಡಿಕೊಂಡು ಅಭಿವೃದ್ಧಿ ಸಾಧಿಸಬೇಕು’ ಎಂದರು.

ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಾ ಕಲ್ಯಾಣ್, ‘ಜಿಐಎಸ್ ಪೋರ್ಟಲ್‌ನಲ್ಲಿ ಎಲ್ಲ ಇಲಾಖೆಗಳ ಸಂಪೂರ್ಣ ಮಾಹಿತಿಯನ್ನು ನಿಯಮಾನುಸಾರ ದಾಖಲಿಸಲಾಗುತ್ತಿದೆ. ದಾಖಲಾಗದಿರುವ ಮಾಹಿತಿಯನ್ನು ಅಡಕಗೊಳಿಸಲು ಅಧಿಕಾರಿಗಳು ಕೈಜೋಡಿಸಬೇಕು’ ಎಂದು ತಿಳಿಸಿದರು.

ದಿಶಾ ಸಮಿತಿ ಸದಸ್ಯ ಕುಂದರನಹಳ್ಳಿ ರಮೇಶ್, ‘ಇದು ರಾಜ್ಯದ ಮೊದಲ ಜಿಐಎಸ್ ಪೋರ್ಟಲ್‌ ಆಗಿದೆ. ಜಿಲ್ಲೆಯ ಎಲ್ಲ ಅಂಕಿಅಂಶಗಳನ್ನು ಯೋಜನಾವಾರು ದಾಖಲಿಸಿ ಸಾರ್ವಜನಿಕರಿಗೆ ಮುಕ್ತಗೊಳಿಸಿ ಮಾಹಿತಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ’ ಎಂದರು. 

‘ಇಲ್ಲಿಯವರೆಗೆ ಜಿಐಎಸ್ ಪೋರ್ಟಲ್‌ನಲ್ಲಿ 40 ಇಲಾಖೆಗಳ 270ಕ್ಕೂ ಅಧಿಕ ಲೇಯರ್ ಮಾಹಿತಿಯನ್ನು ದಾಖಲಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ಸಭೆ ಆರಂಭದಲ್ಲಿ ತಂತ್ರಾಂಶಗಳ ಅನುಷ್ಠಾನ ಕುರಿತು ಯೋಜನಾ ನಿರ್ದೇಶಕ ಎಂ.ಜಯಚಂದ್ರನ್ ಸಮಗ್ರ ಮಾಹಿತಿ ನೀಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.