ಬುಧವಾರ, 17 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಿಬ್ಬನಹಳ್ಳಿಯಲ್ಲಿ ಹಲಸಿನ ಮೇಳ

ತೆಂಗು, ಅಡಿಕೆ ಜೊತೆ ಪರ್ಯಾಯ ಬೆಳೆಯಾಗಿ ಹಲಸು ಬೆಳೆಯಲು ಸಲಹೆ
Published 29 ಜೂನ್ 2024, 6:11 IST
Last Updated 29 ಜೂನ್ 2024, 6:11 IST
ಅಕ್ಷರ ಗಾತ್ರ

ತಿಪಟೂರು: ‘ಹಲಸು ನಮ್ಮ ದೇಶದ ಆಹಾರ ಪದ್ಧತಿಯಲ್ಲಿ ಒಂದಾದರೆ, ಬೇರೆ ದೇಶಗಳಲ್ಲಿ ಸಂಶೋಧನೆಗೆ ಒಳಪಟ್ಟಾಗ ಕ್ಯಾನ್ಸರ್ ರೋಗಕ್ಕೆ ಔಷಧೀಯ ಅಂಶವಾಗಿದೆ’ ಎಂದು ಬೆಂಗಳೂರಿನ ಐಐಎಚ್‌ಆರ್ ನಿರ್ದೇಶಕ ಡಾ.ಜಿ ಕರುಣಾಕರನ್ ತಿಳಿಸಿದರು.

ತಾಲ್ಲೂಕಿನ ಕೆ.ಬಿ. ಕ್ರಾಸ್‍ನ ಮಾತಾ ರೆಸಿಡೆನ್ಸಿ ಮೈದಾನದಲ್ಲಿ ನಡೆದ ಹಲಸಿಕಾಯಿ ಮೇಳದಲ್ಲಿ ಅವರು ಮಾತನಾಡಿದರು.

ಮುಂದಿನ ದಿನಗಳಲ್ಲಿ ಹಲಸು ಭವಿಷ್ಯದ ಬೆಳೆಯಾಗಿದ್ದು, ಈ ಬೆಳೆಯನ್ನು ಔಷಧೀಯ ಸಸ್ಯವಾಗಿ ಬೆಳೆಯಲು ಜಿಕೆವಿಕೆ ಶ್ರಮಿಸುತ್ತಿದೆ. ಹಲಸಿನ ಚಳವಳಿಯಲ್ಲಿ ಶಂಕರ, ಸಿದ್ದು, ಹಲಸು ತಳಿ ಪ್ರಾಮುಖ್ ಪಡೆದಿದ್ದು, ಮುಂದಿನ ದಿನದಲ್ಲಿ ಹಲಸು ಬೆಳಗಾರ ಸಂಘ ಪ್ರಾರಂಭಿಸಲು ಯೋಜನೆ ಸಿದ್ಧಪಡಿಸಲಾಗಿದೆ ಎಂದರು.

ಕೃಷಿಕ ಶಿವನಂಜಯ್ಯ ಬಾಳೇಕಾಯಿ ಮಾತನಾಡಿ, ರೈತರು ತೆಂಗಿನ ಮರ, ಅಡಿಕೆ ಮರದ ಬಾಲ ಹಿಡಿದುಕೊಂಡು ಹೋಗುವ ಬದಲು ಜಮೀನುಗಳಲ್ಲಿ ಹಲಸಿನ ಗಿಡ ನೆಟ್ಟು ಲಕ್ಷಗಟ್ಟಲೆ ವಾರ್ಷಿಕ ಆದಾಯ ಪಡೆಯಬಹುದು. ಸೀಬೆ, ಸೀಗೆ, ಹಲಸು, ಮಾವು, ಪಪ್ಪಾಯಿ ಇನ್ನಿತರೆ ಗಿಡಗಳನ್ನು ಬೆಳೆಯುವುದರ ಮೂಲಕ ಕೃಷಿಯಲ್ಲಿ ವೈವಿಧ್ಯ ಕಾಣುತ್ತ ಆದಾಯ ಪಡೆಯಬಹುದು ಎಂದರು.

ಕಾರ್ಯಕ್ರಮದ ಆಯೋಜಕ ಬಿಳಿಗೆರೆ ಕೃಷ್ಣಮೂರ್ತಿ ಮಾತನಾಡಿ, ತೆಂಗು ಇಂದು ಮೌಲ್ಯವರ್ಧನೆ ಪಡೆಯುತ್ತಾ ಬೇರೆ ಬೇರೆ ರೂಪದಲ್ಲಿ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ತೆಂಗು ಹಾಗೂ ಕೊಬ್ಬರಿ ಲಭ್ಯವಾಗುತ್ತಿದೆ. ಮುಂದಿನ ದಿನಗಳಲ್ಲೂ ಹಲಸು ಮೌಲ್ಯವರ್ಧನೆ ಪಡೆದು ಉತ್ತಮ ಸ್ಥಿತಿ ತಲುಪುದರಲ್ಲಿ ಸಂಶಯವಿಲ್ಲ ಎಂದರು.

ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಚಂದ್ರಶೇಖರ್, ದಲಿತ ಸಂಘರ್ಷ ಸಮಿತಿ ಸಂಚಾಲಕ ಕಂದೂರು ತಿಮ್ಮಯ್ಯ, ಮಕ್ಕಳ ತಜ್ಞ ಡಾ.ನಂಜಪ್ಪ, ಇಂದ್ರಮ್ಮ, ಬೀರಸಂದ್ರ ಮೋಹನ್, ಗುಂಗರಮಳೆ ಮುರಳೀಧರ್ ಭಾಗವಹಿಸಿದ್ದರು.

ಹಲಸಿನ ಕಾಯಿ ಮೇಳದಲ್ಲಿ ಹಲಸಿನ ಪಕೋಡ, ಬಿರಿಯಾನಿ, ಕಬಾಬ್, ಹಲಸಿನ ಬೀಜದ ಸೂಪ್, ಹಣ್ಣು ಮತ್ತು ಕಾಯಿಯಿಂದ ಮಾಡಿದ ಚಿಪ್ಸ್, ಬೋಂಡಾ, ಹಣ್ಣಿನ ಜಾಮ್ ಜನರು ಆಕರ್ಷಿಸಿತು.

ಸಿದ್ದು ಶಂಕರ ಹಲಸಿನ ತಳಿಯ ಮಾರಾಟ
ಸಿದ್ದು ಶಂಕರ ಹಲಸಿನ ತಳಿಯ ಮಾರಾಟ
ಕಿಬ್ಬನಹಳ್ಳಿಯ ಹಲಸಿನ ಮೇಳದಲ್ಲಿ ಹಲಸಿನ ವಿವಿಧ ಖಾದ್ಯ
ಕಿಬ್ಬನಹಳ್ಳಿಯ ಹಲಸಿನ ಮೇಳದಲ್ಲಿ ಹಲಸಿನ ವಿವಿಧ ಖಾದ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT