ಜನಮನಸೂರೆಗೊಂಡ ಭರತನಾಟ್ಯ ಪ್ರದರ್ಶನ

ತುಮಕೂರು: ಶ್ರಾವಣ ಸಂಜೆಯಲಿ ಆ ನೃತ್ಯ ವೈಭವ ಕಂಡ ಕಲಾಪ್ರಿಯರು ಚಪ್ಪಾಳೆಯ ಸುರಿಮಳೆ ಗರೆದರು. ಹೆಜ್ಜೆಯ ತಾಳಕ್ಕೆ ಗೆಜ್ಜೆಯ ಮೇಳಕ್ಕೆ ನಾಟ್ಯ ಪ್ರವೀಣೆಯರ ನೃತ್ಯ ಜನಮನ ಸೂರೆಗೊಂಡಿತು.
ಇದು ಶನಿವಾರದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ ಸಮಿತಿ ಆಶ್ರಯದಲ್ಲಿ ಬಾಲಾ ವಿಶ್ವನಾಥ್ ಅವರ ಶಿಷ್ಯವೃಂದದವರ ಪ್ರದರ್ಶಿಸಿದ ನೃತ್ಯ ರೂಪಕದಲ್ಲಿ ಕಂಡ ನೋಟ.
ನಟರಾಜನನ್ನು ಸ್ತುತಿಸುವ ನಟೇಶ ಕೌತುತ ಎಂಬ ನೃತ್ಯದಿಂದ ಪ್ರಾರಂಭ ಮಾಡಿದರು. ಕೃಷ್ಣನ ಲೀಲೆಗಳಲ್ಲಿ ಒಂದಾದ ಕಾಳಿಂಗ ಮರ್ಧನ ರೂಪಕ, ಕಂಸ ಸಂಹಾರ, ಶಾರದೆ, ಜಯ ದುರ್ಗೆ ನೃತ್ಯ ರೂಪಕಗಳು ಗಮನ ಸೆಳೆದವು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.