ಶುಕ್ರವಾರ, ನವೆಂಬರ್ 27, 2020
22 °C

ಜಯಚಂದ್ರ ಗೆಲುವು: ಬಲಗಡೆ ಹೂ ನೀಡಿದ ಹೊನ್ನಾದೇವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಶಿರಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ. ಜಯಚಂದ್ರ ಗೆಲ್ಲುವುದಾದರೆ ಬಲಗಡೆ ಹೂ ಕೊಡು ತಾಯಿ-ಹೀಗೆ ಕೋರಿಕೆ ಸಲ್ಲಿಸಿದ ಕಾಂಗ್ರೆಸ್ ಕಾರ್ಯಕರ್ತರಿಗೆ ಹೊನ್ನಾದೇವಿ ಬಲಗಡೆಯೇ ಹೊ ನೀಡಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ನಗರದ ಹೊನ್ನಾದೇವಿ ದೇವಸ್ಥಾನದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಈ ಕೋರಿಕೆ ಸಲ್ಲಿಸಿದ್ದರು.

ಮಂಗಳವಾರ (ನ.10) ಮತ ಎಣಿಕೆ ನಡೆಯಲಿದೆ‌. ಈ ವಿಡಿಯೊವನ್ನು ಕಾಂಗ್ರೆಸ್ ಕಾರ್ಯಕರ್ತರು ಜಾಲತಾಣಗಳಲ್ಲಿ ಹೆಚ್ಚು ಹಂಚಿಕೊಳ್ಳುತ್ತಿದ್ದಾರೆ. 

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸುಮಲತಾ ಅವರ ಗೆಲುವಿಗೂ  ಸುಮಲತಾ ಅವರ ಬೆಂಬಲಿಗರು ಕೋರಿಕೆ ಸಲ್ಲಿಸಿದ್ದರು. ಆಗಲೂ ದೇವಿಯ ಮೂರ್ತಿಯ ಬಲಗಡೆಯಿಂದ ಹೂ ಕೆಳಕ್ಕೆ ಬಿದ್ದಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು