ತುಮಕೂರು: ನಗರದ ರಿಂಗ್ ರಸ್ತೆಯಲ್ಲಿರುವ ಕೆಎಚ್ಬಿ ಕಾಲೊನಿಯ ತಿರುಮಲನಗರದ ವೆಂಕಟೇಶ್ವರಸ್ವಾಮಿ ದೇವಸ್ಥಾನದ ಆವರಣದಲ್ಲಿ ಯೋಗಿ ನಾರಾಯಣ ಯತೀಂದ್ರರ ಮೂರ್ತಿ ಪ್ರತಿಷ್ಠಾಪನೆ ಹಾಗೂ ಅಮರ ನಾರಾಯಣ ಸಮುದಾನ ಭವನದ ಉದ್ಘಾಟನಾ ಸಮಾರಂಭ ಮೇ 2 ರಂದು ಬೆಳಿಗ್ಗೆ 11.45ಕ್ಕೆ ನೆರವೇರಲಿದೆ.

ಕೈವಾರ ಯೋಗಿ ನಾರಾಯಣ ಯತೀಂದ್ರರ ಮೂರ್ತಿ ಪ್ರತಿಷ್ಠಾಪನಾ ಕಾರ್ಯವನ್ನು ಧರ್ಮಾಧಿಕಾರಿ ಟಿ.ಆರ್.ವೆಂಕಟೇಶ್ ನೆರವೇರಿಸುವರು. ಬೆಂಗಳೂರಿನ ನ್ಯೂ ಬಾಲ್ಡ್ವಿನ್ ಶಾಲೆ ಅಧ್ಯಕ್ಷ ಡಾ.ಟಿ.ವೇಣುಗೋಪಾಲ್ ಪೂಜೆ ಸಲ್ಲಿಸುವರು. ಡಾ.ಬಿ.ಸಿ.ಸಂಜೀವಯ್ಯ ವಿಗ್ರಹ ಅನಾವರಣ ಮಾಡುವರು. ಡಾ.ಎಂ.ವಿ.ಶ್ರೀನಿವಾಸ್ ಕಳಸ ಸ್ಥಾಪಿಸುವರು.

ಚಾಮುಂಡೇಶ್ವರಿ ಕ್ಷೇತ್ರದ ಧರ್ಮಾಧಿಕಾರಿ ಬಿ.ಎಂ.ರವಿನಾಯ್ದು ಸಮುದಾಯ ಭವನ ಉದ್ಘಾಟಿಸುವರು. ಧರ್ಮಾಧಿಕಾರಿ ಎ.ಆರ್.ಚಿಕ್ಕರಂಗಯ್ಯ ಅಧ್ಯಕ್ಷತೆ ವಹಿಸುವರು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.