ತುಮಕೂರು: ರಾಜ್ಯ ಒಲಿಂಪಿಕ್ಸ್ ಕ್ರೀಡಾಕೂಟದ ವೇಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಮೇಲುಗೈ ಸಾಧಿಸಿತು. ಚಾಂಪಿಯನ್ ಪಟ್ಟ ಅಲಂಕರಿಸಿತು.

ಕ್ರೀಡಾಕೂಟದ 4ನೇ ದಿನವಾದ ಸೋಮವಾರ ವೇಟ್ ಲಿಫ್ಟಿಂಗ್, ಜುಡೋ, ಟೇಬಲ್ ಟೆನಿಸ್ ಸ್ಪರ್ಧೆಗಳು ನಡೆದವು. ಟೇಬಲ್ ಟೆನಿಸ್ ಸ್ಪರ್ಧೆಯಲ್ಲಿ ಬೆಂಗಳೂರು ನಗರದ ಸ್ಪರ್ಧಿಗಳು ಪಾರಮ್ಯ ಮೆರೆದರು.

ವೇಟ್ ಲಿಫ್ಟಿಂಗ್: ಪುರುಷರ ವಿಭಾಗ: 65 ಕೆ.ಜಿ– ತಿಪ್ಪಣ್ಣ ಲಕ್ಕಣ್ಣನವರ್ (ದಕ್ಷಿಣ ಕನ್ನಡ)–1, ಕೆ.ಯೋಗೇಶ್ ನಾಯಕ್ (ಬೆಂಗಳೂರು ನಗರ)–2, ಬಿ.ಆರ್.ಮನೋಜ್ (ದಕ್ಷಿಣ ಕನ್ನಡ)–3. 71 ಕೆ.ಜಿ– ಮಂಜುನಾಥ್ ಮರಾಠಿ (ಉಡುಪಿ)–1, ಚಿರಂಜೀವಿ (ದಕ್ಷಿಣ ಕನ್ನಡ)–2, ಪ್ರತೀಕ್ (ದಕ್ಷಿಣ ಕನ್ನಡ)–3.

ಮಹಿಳೆಯರ ವಿಭಾಗ: 53 ಕೆ.ಜಿ– ಬಿ.ಲಕ್ಷ್ಮಿ (ಚಿತ್ರದುರ್ಗ)–1, ಆರ್.ಇವಾನ್ ಜೆಲಿನ್ (ಬೆಂಗಳೂರು ನಗರ)–2, ಎಂ.ಆರ್.ಪೂಜಿತಾ (ತುಮಕೂರು)–3. 58 ಕೆ.ಜಿ– ವೈ.ಜಿ.ಸ್ವಪ್ನ (ದಕ್ಷಿಣ ಕನ್ನಡ)–1, ಪಿ.ಮೋನಿಶಾ (ಬೆಂಗಳೂರು ನಗರ)–2, ಎಸ್.ಜಿ.ದೇವಿಕಾ (ಶಿವಮೊಗ್ಗ)–3. 63 ಕೆ.ಜಿ– ಅನಿಶಾ (ದಕ್ಷಿಣ ಕನ್ನಡ)–1, ಎಂ.ಹಂಸವೇಣಿ (ದಕ್ಷಿಣ ಕನ್ನಡ)–2, ಶ್ರಾವಣಿ ಅಶೋಕ್ (ದಕ್ಷಿಣ ಕನ್ನಡ)–3.

ಟೇಬಲ್ ಟೆನಿಸ್: ಪುರುಷರ ಸಿಂಗಲ್ಸ್– ಅಭಿನವ್ ಕೆ.ಮೂರ್ತಿ (ಬೆಂಗಳೂರು ನಗರ)–1, ರೋಹಿತ್ ಶಂಕರ್ (ಬೆಂಗಳೂರು ನಗರ)–2, ಯು.ಎನ್.ರಾಮ್ಕುಮಾರ್ (ಬೆಂಗಳೂರು ನಗರ)–3. ಮಹಿಳಾ ಸಿಂಗಲ್ಸ್: ಸಹನಾ ಎಚ್.ಮೂರ್ತಿ (ಬೆಂಗಳೂರು ನಗರ)–1, ಜಿ.ಕಾರುಣ (ಬೆಂಗಳೂರು ನಗರ)–2, ಪ್ರೇಕ್ಷಾ ಕರ್ಕೆರ (ದಕ್ಷಿಣ ಕನ್ನಡ)–3.

ಜುಡೊ: ಪುರುಷರ ವಿಭಾಗ– 73 ಕೆ.ಜಿ– ಎಂ.ಎನ್.ಮಂಜುನಾಥ (ದಾವಣಗೆರೆ)–1, ಚೇತನ್ ಎಲ್.ಕಟ್ಟಿನಬಾವಿ (ಬೆಳಗಾವಿ)–2, ದುರ್ಗೇಶ್ ಎಲ್.ಕುಂಚಿಕೊರಾಮ (ವಿಜಯಪುರ)–3. 60 ಕೆ.ಜಿ– ಅಶ್ರಫ್ ಜಾಫರ್ (ಬೆಂಗಳೂರು)–1, ಅಮರ್ ಸಾಕಿರ್ (ಮೈಸೂರು)–2, ವಿಕಾಸ್ ನಾಯಕ್ (ದಾವಣಗೆರೆ)–3. 66 ಕೆ.ಜಿ– ಭರಮಪ್ಪ ಎಸ್.ದಳವಾಯಿ (ಬೆಂಗಳೂರು)–1, ಎಲ್.ವಿಶ್ವನಾಥ (ವಿಜಯನಗರ)–2, ಆನಂದ್ ರಾಥೋಡ್ (ವಿಜಯಪುರ)–3.

ಬ್ಯಾಸ್ಕೆಟ್ಬಾಲ್ ಪಂದ್ಯಾವಳಿಗೆ ಸೋಮವಾರ ಚಾಲನೆ ದೊರೆಯಿತು. ಪುರುಷರ ವಿಭಾಗದ ಮೊದಲ ಪಂದ್ಯದಲ್ಲಿ ಬ್ಯಾಂಕ್ ಆಫ್ ಬರೋಡಾ ತಂಡ ಬೀಗಲ್ಸ್ ವಿರುದ್ಧ 19 ಅಂಕಗಳಿಂದ ಗೆದ್ದು, ಶುಭಾರಂಭ ಮಾಡಿತು. ಮಹಿಳೆಯರ ವಿಭಾಗದಲ್ಲಿ ಮೈಸೂರು ತಂಡ (53) ವಿದ್ಯಾನಗರ ತಂಡವನ್ನು (48) 5 ಅಂಕಗಳಿಂದ ಮಣಿಸಿ ಮುನ್ನಡೆ ಸಾಧಿಸಿತು.

ಬೆಳಗಾವಿ ಸೆಮಿಫೈನಲ್ಗೆ

ಫುಟ್ಬಾಲ್ ಸ್ಪರ್ಧೆಯಲ್ಲಿ ಬೆಳಗಾವಿ ತಂಡ ಬಿ ಗುಂಪಿನಿಂದ ಸೆಮಿಫೈನಲ್ ಪ್ರವೇಶಿಸಿತು. ನಿರ್ಣಾಯಕ ಪಂದ್ಯದಲ್ಲಿ ಮೈಸೂರು ತಂಡವನ್ನು 3-2 ಗೋಲುಗಳಿಂದ ಸೋಲಿಸಿ 4ರ ಘಟ್ಟಕ್ಕೆ ಲಗ್ಗೆ ಇಟ್ಟಿದೆ. ಮಂಗಳವಾರ ಮೊದಲ ಸೆಮಿಫೈನಲ್ನಲ್ಲಿ ಕೊಡಗು– ಮೈಸೂರು 2ನೇ ಪಂದ್ಯದಲ್ಲಿ ಉತ್ತರ ಕನ್ನಡ- ಬೆಳಗಾವಿ ತಂಡಗಳು ಮುಖಾಮುಖಿಯಾಗಲಿವೆ. ಮಂಗಳವಾರದಿಂದ ಅಥ್ಲೆಟಿಕ್ಸ್ ಜಿಮ್ನಾಸ್ಟಿಕ್ಸ್ ಹ್ಯಾಂಡ್ಬಾಲ್ ಸ್ಪರ್ಧೆಗಳು ಶುರುವಾಗಲಿವೆ.