ಶಿರಾ: ನಾಡಪ್ರಭು ಕೆಂಪೇಗೌಡರ ಆಡಳಿತ ಇಂದಿನ ಯುವಕರಿಗೆ ಆದರ್ಶವಾಗಬೇಕು ಎಂದು ಸ್ಫಟಿಕಪುರಿ ಸಂಸ್ಥಾನ ಮಠದ ಪೀಠಾಧ್ಯಕ್ಷ ನಂಜಾವಧೂತ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಪಟ್ಟನಾಯಕನಹಳ್ಳಿ ಜಾತ್ರಾ ಮಹೋತ್ಸವದ ವಸ್ತು ಪ್ರದರ್ಶನದ ವೇದಿಕೆಯಲ್ಲಿ ಗುರುವಾರ ಕೆಂಪೇಗೌಡ ಸಾಮ್ರಾಜ್ಯ ಸ್ಥಾಪನೆ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜಗತ್ತಿನ ಭೂಪಟದಲ್ಲಿ ಬೆಂಗಳೂರ ನಗರ ಕಂಗೊಳಿಸುವಂತೆ ಮಾಡಿದ ನಾಡಪ್ರಭು ಕೆಂಪೇಗೌಡರ ಪಠ್ಯಕ್ರಮಗಳನ್ನು ಸರ್ಕಾರ ಎಲ್ಕೆಜಿಯಿಂದ ಪದವಿವರೆಗೂ ಅಳವಡಿಸಬೇಕು. ‘ನಮ್ಮ ಮೆಟ್ರೊ’ಗೆ ಕೆಂಪೇಗೌಡ ಮೆಟ್ರೊ ಎಂದು ನಾಮಕರಣ ಮಾಡಬೇಕು ಎಂದರು.

ಮದಲೂರು ನರಸಿಂಹಮೂರ್ತಿ, ನಾದೂರು ಗ್ರಾ.ಪಂ ಅಧ್ಯಕ್ಷ ತುಳಸಿ ಮಧುಸೂದನ್, ಮಾಜಿ ಅಧ್ಯಕ್ಷೆ ಮೆಹರ್ ತಾಜ್ ಬಾಬು, ತಾ.ಪಂ ಮಾಜಿ ಸದಸ್ಯ ಕೆ.ಎಂ.ಶ್ರೀನಿವಾಸ್, ಕುಮಾರ್, ಪೂಜಾರ ಮುದ್ದನಹಳ್ಳಿ ಮುದ್ದರಾಜು, ಶಿವಣ್ಣ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.