ಕುಣಿಗಲ್: ಕೆಂಪೇಗೌಡರ ಕಾಲದ ಶಿಲಾ ಶಾಸನ ಪಟ್ಟಣದ ಕುವೆಂಪು ನಗರದ ಚರಂಡಿ ಬದಿಯ ಚಪ್ಪಡಿ ಕಲ್ಲಾಗಿದ್ದು, ಸಂರಕ್ಷಣೆಗೆ ಕವಿಗಳು, ಕನ್ನಡಪರ ಸಂಘಟನೆಗಳು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.

ನಾಡಪ್ರಭು ಕೆಂಪೇಗೌಡರ ಮೊಮ್ಮಗ ಹಿರಿಯ ಕೆಂಪೇಗೌಡರ ಪತ್ನಿ ಕುಣಿಗಲ್ ವೆಂಕಟಕೃಷ್ಣರಾಜಮ್ಮ ಬರೆಸಿದ ಶಿಲಾಶಾಸನ ಅಂದಿನ ಕಾಲಕ್ಕೆ ಕಲ್ಲು ಪಂಟಪದಲ್ಲಿ ಸುಭದ್ರವಾಗಿತ್ತು. ಕಾಲಕ್ರಮೇಣ ಶಿಲಾಶಾಸನವಿದ್ದ ಜಾಗ ದಾಖಲೆಗಳಲ್ಲಿ ಮಾಯಾವಾಗಿತ್ತು. ರಸ್ತೆಯ ಮಧ್ಯಭಾದಲ್ಲಿದ್ದ ಶಿಲಾಶಾಸನ ಇತ್ತೀಚೆಗೆ ರಸ್ತೆ ನಿರ್ಮಾಣವಾದ ಕಾರಣ ಚರಂಡಿ ಬದಿಯ ಚಪ್ಪಡಿ ಕಲ್ಲಾಗಿದೆ. ಮಂಟಪದ ಕಲ್ಲುಗಳು ಸಹ ಶಿಲಾಶಾಸನದ ಪಕ್ಕದಲ್ಲಿ ಅನಾಥವಾಗಿವೆ.

ಇತ್ತೀಚೆಗೆ ತಾಲ್ಲೂಕು ಆಡಳಿತದಿಂದ ನಡೆದ ನಾಡಪ್ರಭು ಕೆಂಪೇಗೌಡ ಜಯಂತಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕಂದರಾಜ್, ಕೆಂಪೇಗೌಡರ ಮೊಮ್ಮಗ ಇಮ್ಮಡಿ ಕೆಂಪೇಗೌಡ ಅವರ ಇಷ್ಟದ ರಾಣಿ ಶೃಂಗಾರಮ್ಮ ಹುಲಿಯೂರುದುರ್ಗ ಬಳಿ ಪ್ರಜೆಗಳ ಅನುಕೂಲಕ್ಕಾಗಿ 1599ರ ಮೇ ತಿಂಗಳಲ್ಲಿ ಕೆರೆ ಮತ್ತು ಅಗ್ರಹಾರ ನಿರ್ಮಿಸಿದ್ದರು. ಇಂದಿಗೂ ಶೃಂಗಾರ ಸಾಗರ ಮತ್ತು ಶೃಂಗಾರ ಅಗ್ರಹಾರ ಕಂಡು ಬರುತ್ತದೆ. ಈ ವಿಷಯ ತಿಳಿದ ಇಮ್ಮಡಿ ಕೆಂಪೇಗೌಡ ಅವರ ಪಟ್ಟದ ರಾಣಿ ಕುಣಿಗಲ್ ವೆಂಕಟಕೃಷ್ಣರಾಜಮ್ಮಣಿ ಸಹ ಪೈಪೋಟಿ ಮೇಲೆ 1,599ರ ಜೂನ್ನಲ್ಲಿ ಕೆರೆ ಕಟ್ಟಿಸಿದ್ದು ಅದೇ ಕುಣಿಗಲ್ ಚಿಕ್ಕಕೆರೆ. ಜತೆಗೆ ನಿರ್ಮಿಸಿದ್ದ ಅಗ್ರಹಾರ ಕೂಡ ವೆಂಕಟಕೃಷ್ಣರಾಜಮ್ಮಣಿ ಅಗ್ರಹಾರವಾಗಿ ಇಂದಿಗೂ ಕೆಆರ್ಎಸ್ ಅಗ್ರಹಾರವಾಗಿ ಚಾಲ್ತಿಯಲ್ಲಿದೆ ಎಂದಿದ್ದರು.

ವೆಂಕಟಕೃಷ್ಣರಾಜಮ್ಮಣ್ಣಿ ನಿರ್ಮಿಸಿದ್ದ ಅಗ್ರಹಾರವನ್ನು ವಿದ್ವಾಂಸರಿಗೆ ದಾನವಾಗಿ ನೀಡಿದ ಸಮಯದಲ್ಲಿ ಹರಕೆಹೊತ್ತು ಬರೆಸಿದ ಶಿಲಾಶಾಸನ ಇಂದು ರಸ್ತೆ ಬದಿಯ ಚರಂಡಿಯ ಚಪ್ಪಡಿಕಲ್ಲಾಗಿದೆ. ಶಿಲಾಶಾಸನದಲ್ಲಿ ವೆಂಕಟಕೃಷ್ಣರಾಜಮ್ಮಣಿ, ‘ತನ್ನ ಅತ್ತೆ, ಮಾವನವರಿಗೆ ಒಳ್ಳೆದಾಗಲಿ, ಆರೋಗ್ಯ ವೃದ್ಧಿಸಲಿ, ವಂಶ ವೃದ್ಧಿಸಲಿ’ ಎಂದು ಬಿಂಬಿಸುವ ಶಾಸನ ಬರೆಸಿರುವುದು ಸಹ ದಾಖಲೆಯಾಗಿದೆ ಎಂದು ವಿವರಿಸಿದ್ದಾರೆ.

ಅಪೂರ್ವವಾಗಿರುವ ಶಿಲಾಶಾಸನ ಅನಾಥವಾಗಿ, ಚರಂಡಿ ಬದಿಯ ಚಪ್ಪಡಿಯಾಗಿದ್ದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಸಾಹಿತಿ ಎಲ್.ಎನ್.ಮುಕುಂದರಾಜ್, ಇತಿಹಾಸ ತಜ್ಞ ತಲಕಾಡು ಚಿಕ್ಕರಂಗೆಗೌಡ, ಕನ್ನಡ ಪರ ಹೋರಾಟಗಾರ ಕೆನಲಿ ಗೌಡ, ಸತೀಶ್ ಚಂದ್ರ, ಸ್ನೇಹ ಕಲಾ ಪ್ರತಿಷ್ಠಾನದ ಸಂಚಾಲಕ ದಿನೇಶ್ ಕುಮಾರ್, ಕೃಷ್ಣಸ್ವಾಮಿ ದೇವಾಲಯ ಸಮಿತಿಯ ಮಂಜುನಾಥ್ ಅವರು ಶಿಲಾಶಾಸನವನ್ನು ಸಂರಕ್ಷಿಸಿ ಇತಿಹಾಸ ಪ್ರಸಿದ್ಧ ದೊಡ್ಡಕೆರೆ ಮೇಲೆ ಪುನಃ ಪ್ರತಿಷ್ಠಾಪಿಸುವಂತೆ ತಾಲ್ಲೂಕು ಆಡಳಿತ ಮತ್ತು ಶಾಸಕರಿಗೆ ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.