ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಂಪೇಗೌಡ ಸೇವೆ ಸ್ಮರಣೆ

ಒಕ್ಕಲಿಗ ಸಮುದಾಯದಿಂದ ಜಯಂತಿ ಆಚರಣೆ
Last Updated 29 ಜೂನ್ 2021, 4:31 IST
ಅಕ್ಷರ ಗಾತ್ರ

ತುಮಕೂರು:‘ಕೆಂಪೇಗೌಡ ಕೇವಲ ಬೆಂಗಳೂರು ನಗರಕ್ಕೆ ಸೀಮಿತರಾದವರಲ್ಲ. ರಾಷ್ಟ್ರದ ಮಹನೀಯರಲ್ಲಿ ಪ್ರಮುಖರು’ ಎಂದು ಜೆಡಿಎಸ್ ಮುಖಂಡ ನರಸೇಗೌಡ ಹೇಳಿದರು.

ನಗರದ ಬಿಜಿಎಸ್ ವೃತ್ತದಲ್ಲಿ ಒಕ್ಕಲಿಗ ಸಮುದಾಯದ ಮುಖಂಡರಿಂದ ನಾಡಪ್ರಭು ಕೆಂಪೇಗೌಡರ ಜಯಂತ್ಯುತ್ಸವ ನಡೆಯಿತು. ಬೆಂಗಳೂರು ಕಟ್ಟಿದ ಕೆಂಪೇಗೌಡ ಅವರ ಸಾಧನೆಯನ್ನು ಸ್ಮರಿಸಿದರು.

ಜೆಡಿಎಸ್ ನಗರ ಘಟಕದ ಅಧ್ಯಕ್ಷ ಬೆಳ್ಳಿ ಲೋಕೇಶ್, ‘ಕೆಂಪೇಗೌಡರು ರಾಜಮನೆತನದಲ್ಲಿ ಹುಟ್ಟಿ ಬೆಳೆದರೂ ಬಡವರ ಏಳಿಗೆಗೆ ಬಹಳಷ್ಟು ಶ್ರಮಿಸಿದ್ದರು. ಬಡವರು, ರೈತರ ಪಾಲಿಗೆ ಸದಾ ಅಜರಾಮರ. ಬೆಂಗಳೂರಿನಂತಹ ಬೃಹತ್ ನಗರ ಕಟ್ಟಿ ಬೆಳೆಸಿದವರಲ್ಲಿ ಅವರ ಪಾತ್ರ ಮಹತ್ವದ್ದಾಗಿದೆ’
ಎಂದು ಹೇಳಿದರು.

ಅಂದಿನ ಕಾಲದಲ್ಲೇ ಕೋಟೆಗಳು, ಕೆರೆ– ಕಟ್ಟೆಗಳನ್ನು ನಿರ್ಮಿಸಿದ್ದು, ರೈತರ ಪಾಲಿಗೆ ಆಶಾಕಿರಣದಂತೆ ಇದ್ದರು. ಅವರ ಜಯಂತಿಯನ್ನು ಪ್ರತಿಯೊಬ್ಬರೂ ಆಚರಿಸುವಂತಾಗಬೇಕು ಎಂದು ಸಲಹೆ ನೀಡಿದರು.

ಅವರು ಕೇವಲ ಒಂದು ಜಾತಿ, ಸಮುದಾಯಕ್ಕೆ ಮೀಸಲಾದ ವ್ಯಕ್ತಿಯಲ್ಲ. ದೇಶದ ಆಸ್ತಿ ಎಂದರು.

ಸಮುದಾಯದ ಮುಖಂಡರಾದ ದೊಡ್ಡಲಿಂಗಪ್ಪ, ಕುಮಾರ್, ಸಿದ್ದಲಿಂಗೇಗೌಡ, ದೇವಿಕಾ, ಜೆಡಿಎಸ್ ಮುಖಂಡರಾದ ನಾಗರಾಜು, ಶ್ರೀನಾಥ್, ಗಿರೀಶ್, ದಿನೇಶ್, ಕರಿಯಪ್ಪ, ಉರ್ಡಿಗೆರೆ ಗಂಗಾಧರ, ಮಂಜುನಾಥ್, ಲೋಕೇಶ್ ಚಿನಕವಜ್ರ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT