ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಖಿಲ್ ಕಾರಣಕ್ಕೆ ದೇವೇಗೌಡರಿಗೆ ಸೋಲು: ಶಾಸಕ ಕೆ.ಎನ್.ರಾಜಣ್ಣ

Last Updated 23 ಮೇ 2019, 14:45 IST
ಅಕ್ಷರ ಗಾತ್ರ

ತುಮಕೂರು: ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ನಿರೀಕ್ಷಿತ ಫಲಿತಾಂಶ ಬಂದಿದೆ. ಎಸ್‌.ಪಿ.ಮುದ್ದಹನುಮೇಗೌಡ ಅವರು ಸಜ್ಜನರು. ಅವರೂ ಒಕ್ಕಲಿಗರು. ಆದರೆ ಅವರಿಗೆ ಟಿಕೆಟ್ ತಪ್ಪಿಸಿ ದೇವೇಗೌಡರು ನಿಂತರು. ಮುದ್ದಹನುಮೇಗೌಡ ಅವರಿಗೆ ಟಿಕೆಟ್ ತಪ್ಪಿಸಿದ ಕಾರಣಕ್ಕೆ ದೇವೇಗೌಡರು ಸೋಲಬೇಕಾಯಿತು ಎಂದು ಮಧುಗಿರಿಯ ಮಾಜಿ ಶಾಸಕ ಕೆ.ಎನ್.ರಾಜಣ್ಣ ಮಾಧ್ಯಮಗಳಿಗೆ ತಿಳಿಸಿದರು.

ನಿಖಿಲ್ ಕುಮಾರಸ್ವಾಮಿ ಕುಂಚಿಟಿಗರ ಹೆಣ್ಣು ಮಗಳನ್ನು ಎಂಗೇಜ್‌ಮೆಂಟ್ ಮಾಡಿಕೊಂಡಿದ್ದರು. ಆ ಯುವತಿಯನ್ನು ವಿವಾಹ ಮಾಡಿಕೊಳ್ಳಲಿಲ್ಲ. ಇದು ಆ ಸಮುದಾಯದ ಜನರಲ್ಲಿ ಬೇಸರಕ್ಕೆ ಕಾರಣವಾಗಿತ್ತು. ದೇವೇಗೌಡರ ವಿರುದ್ಧ ಮತ ಚಲಾಯಿಸಿದರು. ಇದನ್ನು ನನ್ನ ಬಹಳಷ್ಟು ಸ್ನೇಹಿತರು ನನಗೆ ತಿಳಿಸಿದರು ಎಂದರು.

ರಾಜ್ಯದ ಸಮ್ಮಿಶ್ರ ಸರ್ಕಾರ ದೇವೇಗೌಡರ ಮನೆಗೆ ಸೀಮಿತವಾಗಿದೆ. ಸರ್ಕಾರ ಎಷ್ಟು ಬೇಗ ಬೀಳುತ್ತದೆಯೋ ಅಷ್ಟು ಜನರಿಗೆ ಒಳ್ಳೆಯದು. ಬರೀ ಹಣ ಮಾಡುವುದಕ್ಕೆ ಮಾತ್ರ ಈ ಸರ್ಕಾರ ಇದೆ. ಇಷ್ಟು ಹೊಲಸು ವ್ಯವಸ್ಥೆಯನ್ನು ನಾನು ನೋಡಿರಲೇ ಇಲ್ಲ ಎಂದು ಟೀಕಿಸಿದರು.

ಮುದ್ದಹನುಮೇಗೌಡ ಅವರ ಮೇಲೆ ಜನರಿಗೆ ಸಿಂಪಥಿ ಇದೆ. ನಮ್ಮ ಕ್ಷೇತ್ರದಲ್ಲಿ ಬಿಜೆಪಿಗೆ ಮತಗಟ್ಟೆ ಏಜೆಂಟರೇ ಇಲ್ಲ. ಅಲ್ಲೆಲ್ಲಾ ಲೀಡ್ ಬಂದಿದೆ. ಇದು ಪ್ರಜಾಪ್ರಭುತ್ವದ ಒಳ್ಳೆಯ ಲಕ್ಷಣ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT