ಗುರುವಾರ , ಅಕ್ಟೋಬರ್ 17, 2019
21 °C
ಮಧುಗಿರಿ ಜಿಲ್ಲೆ ರಚನೆ ವಿಚಾರ; ಡಾ.ಜಿ.ಪರಮೇಶ್ವರ್ ಕಾಲೆಳೆದ ಕೆ.ಎನ್.ರಾಜಣ್ಣ

ಜಿ.ಪರಮೇಶ್ವರ್ ಡಿಸಿಎಂ ಆಗಿದ್ದಾಗ ಮಧುಗಿರಿ ಜಿಲ್ಲೆ ಮಾಡಲಿಲ್ಲ ಏಕೆ?

Published:
Updated:
Prajavani

ತುಮಕೂರು: ಮಧುಗಿರಿಯನ್ನು ಜಿಲ್ಲೆಯಾಗಿ ರೂಪಿಸುವಂತೆ ಶಾಸಕ ಡಾ.ಜಿ.ಪರಮೇಶ್ವರ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವುದು ಈಗ ಮತ್ತೆ ಕೆ.ಎನ್.ರಾಜಣ್ಣ ಮತ್ತು ಪರಮೇಶ್ವರ ನಡುವೆ ‘ಟಾಂಗ್’ ಕೊಡುವ ಆಟಕ್ಕೆ ಕಾರಣವಾಗಿದೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ಎನ್.ರಾಜಣ್ಣ, ‘ಪರಮೇಶ್ವರ ಅವರು ಉಪಮುಖ್ಯಮಂತ್ರಿ ಆಗಿದ್ದಾಗ ಮಧುಗಿರಿಯನ್ನು ಏಕೆ ಜಿಲ್ಲೆ ಮಾಡಲಿಲ್ಲ. ಅವರು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಕಾಂಗ್ರೆಸ್‌ನ ಪ್ರಮುಖ ಮುಖಂಡರಾಗಿದ್ದರು. ಆಗ ಏಕೆ ಅವರಿಗೆ ಈ ಯೋಚನೆ ಬರಲಿಲ್ಲ. ಅವರು ಮನಸ್ಸು ಮಾಡಿದ್ದರೆ ಅಂದೇ ಮಧುಗಿರಿಯನ್ನು ಜಿಲ್ಲೆ ಮಾಡಬಹುದಿತ್ತು’ ಎಂದು ತಿಳಿಸಿದರು.

ಅಧಿಕಾರ ಇದ್ದಾಗ ಜಿಲ್ಲೆ ಮಾಡಲು ಸಾಧ್ಯವಾಗಲಿಲ್ಲ. ಈಗ ಜಿಲ್ಲೆ ಮಾಡಿ ಎನ್ನಲು ಅವರಿಗೆ ನೈತಿಕತೆ ಇಲ್ಲ. ಅವರಿಗೆ ಅಂದು ಈ ಬಗ್ಗೆ ತೀರ್ಮಾನ ಕೈಗೊಳ್ಳುವ ಶಕ್ತಿ ಸಹ ಇತ್ತು. ಈಗ ನಾನು ಏನೋ ಮಾಡಲು ಹೊರಟಿದ್ದೇನೆ ಎಂದು ಬಿಂಬಿಸಿಕೊಳ್ಳಲು ಪತ್ರ ಬರೆದಿದ್ದಾರೆ ಎಂದು ಟೀಕಿಸಿದರು.

ಮಧುಗಿರಿ ಜಿಲ್ಲೆ ರೂಪಿಸುವ ಸಂಬಂಧ ಯಡಿಯೂರಪ್ಪ ಅವರನ್ನು ಸೆ.9ರಂದು ನಾನು ಭೇಟಿ ಮಾಡಿ ಮನವಿ ಮಾಡಿದ್ದೇನೆ ಎಂದರು.

Post Comments (+)